- Kannada News Photo gallery Cricket photos Asia Cup 2022 Rohit Sharma becomes first player to score 3500 runs in T20I matches
Asia Cup 2022: 2 ಬೌಂಡರಿ, 1 ಸಿಕ್ಸರ್ ಸಿಡಿಸಿ ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದ ಹಿಟ್ಮ್ಯಾನ್..!
Rohit Sharma: ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3500 ರನ್ ಪೂರೈಸಿದ್ದಾರೆ. ಈ ಮೂಲಕ 3500ರ ಗಡಿ ದಾಟಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
Updated on:Aug 31, 2022 | 10:00 PM

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಆಟದ ಕಡಿಮೆ ಸ್ವರೂಪದಲ್ಲಿ ಅಂದರೆ T20 ನಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಏಷ್ಯಾಕಪ್ 2022 ರಲ್ಲಿ ಇದುವರೆಗೆ ಯಾವುದೇ ಆಟಗಾರ ಮಾಡದ ದಾಖಲೆಯನ್ನು ರೋಹಿತ್ ಮಾಡಿದ್ದಾರೆ. ಇದರೊಂದಿಗೆ ರೋಹಿತ್ ಆರಂಭಿಕರಾಗಿ ಭಾರತೀಯ ಕ್ರಿಕೆಟ್‌ನಲ್ಲಿ ತಮ್ಮ ದಾಖಲೆಯನ್ನು ಸುಧಾರಿಸಿದ್ದಾರೆ.

ಏಷ್ಯಾಕಪ್‌ನಲ್ಲಿ ಹಾಂಕಾಂಗ್ ವಿರುದ್ಧ ಟೀಂ ಇಂಡಿಯಾದ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3500 ರನ್ ಪೂರೈಸಿದ್ದಾರೆ. ಈ ಮೂಲಕ 3500ರ ಗಡಿ ದಾಟಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಓಪನರ್ ರೋಹಿತ್ ಪುರುಷರ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ ದಾಖಲೆಯನ್ನು ಹೊಂದಿದ್ದು, ರೋಹಿತ್ ಇದುವರೆಗೆ 140 ಟಿ20 ಪಂದ್ಯಗಳನ್ನು ಆಡಿದ್ದಾರೆ.

ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್ ಮತ್ತು ಎಂಎಸ್ ಧೋನಿ ಮಾತ್ರ ಟಿ20ಯಲ್ಲಿ 350ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ಭಾರತೀಯ ಕ್ರಿಕೆಟಿಗರಾಗಿದ್ದಾರೆ. 2007ರ ವಿಶ್ವಕಪ್‌ನಿಂದ ರೋಹಿತ್ ಟಿ20 ಪಂದ್ಯಗಳನ್ನು ಆಡುತ್ತಿದ್ದಾರೆ.

ಭಾರತದ ಪರ ಎಲ್ಲಾ ಮೂರು ಸ್ವರೂಪಗಳಲ್ಲಿ ಆರಂಭಿಕರಾದ ವೀರೇಂದ್ರ ಸೆಹ್ವಾಗ್ ಬ್ಯಾಟ್ಸ್‌ಮನ್ ಹೆಸರಿನಲ್ಲಿ ಹೆಚ್ಚು ರನ್ ಗಳಿಸಿದ್ದಾರೆ. ಸೆಹ್ವಾಗ್ 15758 ರನ್ ಗಳಿಸಿದ್ದರೆ, ಸಚಿನ್ 15335 ರನ್ ಗಳಿಸಿದ್ದಾರೆ.
Published On - 10:00 pm, Wed, 31 August 22




