Sri Lanka vs Bangladesh: 4 ವರ್ಷಗಳ ಹಿಂದಿನ ಅವಮಾನಕ್ಕೆ ಪ್ರತೀಕಾರ: ಬಾಂಗ್ಲಾ ಆಟಗಾರರ ಹೊಟ್ಟೆ ಉರಿಸಿದ ಲಂಕಾ ಪ್ಲೇಯರ್ಸ್
Sri Lanka Players Nagin Dance: ಏಷ್ಯಾಕಪ್ 2022ರಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆ ಶ್ರೀಲಂಕಾ ಆಟಗಾರರು ಡಗೌಟ್ನಲ್ಲಿ ನಾಗಿಣಿ ನೃತ್ಯ ಮಾಡುವ ಮೂಲಕ 4 ವರ್ಷಗಳ ಹಿಂದಿನ ಅವಮಾನಕ್ಕೆ ಸೇಡು ತೀರಿಸಿಕೊಂಡಿದ್ದಾರೆ.
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಏಷ್ಯಾಕಪ್ನ (Asia Cup 2022) ಐದನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ (Sri Lanka vs Bangladesh) ತಂಡ 2 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸಿಂಹಳೀಯರು ಗೆದ್ದು ಸೂಪರ್ 4 ಹಂತಕ್ಕೆ ಲಗ್ಗೆಯಿಟ್ಟಿರು. ಕೊನೆಯ ಓವರ್ ವರೆಗೂ ನಡೆದ ರೋಚಕ ಕಾದಾಟದಲ್ಲಿ ಸೋತ ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದಿದೆ. ಗೆಲುವು ಸಾಧಿದುತ್ತಿದ್ದಂತೆ ಶ್ರೀಲಂಕಾ ತಂಡದ ಆಟಗಾರರು ವಿಶೇಷವಾಗಿ ಸಂಭ್ರಮಾಚರಣೆ ಮಾಡಿ ಬಾಂಗ್ಲಾಕ್ಕೆ ತಿರುಗೇಟು ನೀಡಿದರು. ಡಗೌಟ್ನಲ್ಲಿ ನಾಗಿಣಿ ನೃತ್ಯ (Nagin Dance) ಮಾಡುವ ಮೂಲಕ 2018ರ ನಿದಾಸ್ ಕ್ರಿಕೆಟ್ ಟ್ರೋಫಿಯಲ್ಲಾದ ಅವಮಾನಕ್ಕೆ ಸೇಡು ತೀರಿಸಿಕೊಂಡಿದ್ದಾರೆ.
2018ರಲ್ಲಿ ನಡೆದ ನಿದಾಸ್ ಟ್ರೋಫಿಯ ಅಂತಿಮ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಶ್ರೀಲಂಕಾ ಸೋಲು ಕಂಡಿತ್ತು. ಈ ಸಂದರ್ಭದಲ್ಲಿ ಗೆಲುವಿನ ಅತಿರೇಕದಲ್ಲಿ ಬಾಂಗ್ಲಾದೇಶ ತಂಡದ ಆಟಗಾರರು ನಾಗಿಣಿ ಡ್ಯಾನ್ಸ್ ಮಾಡುವ ಮೂಲಕ ಸಿಂಹಳೀಯರನ್ನು ಅವಮಾನಿಸುವ ರೀತಿಯಲ್ಲಿ ಸಂಭ್ರಮಿಸಿದ್ದರು. ಇದೀಗ ಅದಕ್ಕೆ ಲಂಕಾ ಆಟಗಾರರು ಸೇಡು ತೀರಿಸಿಕೊಂಡಿದ್ದಾರೆ. ಚಮಿಕಾ ಕರುಣರತ್ನೆ ಸರಿದಂತೆ ಇತರೆ ಕೆಲ ಆಟಗಾರರು ಡಗೌಟ್ನಲ್ಲಿ ನಾಗಿಣಿ ಡ್ಯಾನ್ಸ್ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
— Guess Karo (@KuchNahiUkhada) September 1, 2022
They still remember the Nagin Dance ?? pic.twitter.com/h8GLsTKo2K
— Yash?? (@YashR066) September 1, 2022
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 183 ರನ್ಗಳಿಕೆ ಮಾಡಿತು. ತಂಡದ ಪರ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ಆರಂಭಿಕ ಆಟಗಾರ ಮೆಹ್ದಿ ಹಸನ್ ಮಿರ್ಜಾ(38), ನಾಯಕ ಶಕೀಬ್ ಅಲ್ ಹಸನ್(24), ಅಫಿಫ್ ಹುಸೈನ್(39), ಮೊಹಮ್ಮದುಲ್ಲಾ (27) ಹಾಗೂ ಮೊಸಡಕ್ ಹುಸೈ್ (24) ರನ್ಗಳ ಕೊಡುಗೆ ನೀಡಿದರು.
184ರನ್ಗಳ ಟಾರ್ಗೆಟ್ ಬೆನ್ನತ್ತಿದ ಶ್ರೀಲಂಕಾ ಉತ್ತಮ ಆರಂಭ ಪಡೆದುಕೊಂಡಿತು. ನಿಸಂಕಾ ಮತ್ತು ಕುಸಾಲ್ ಮೆಂಡಿಸ್ ತಂಡಕ್ಕೆ 45 ರನ್ಗಳ ಕಾಣಿಕೆ ನೀಡಿದರು. 20 ರನ್ಗಳಿಸಿ ನಿಸಾಂಕ್ ಔಟಾದರರು. ಇದರ ಬೆನ್ನಲ್ಲೇ ದಿಢೀರ್ ಮತ್ತೆ 3 ವಿಕೆಟ್ ಉರುಳಿದವು. ಈ ಸಂದರ್ಭ ತಂಡಕ್ಕೆ ಮೆಂಡಿಸ್ ಹಾಗೂ ನಾಯಕ ದಸನ್ ಶನಕ ಆಸರೆಯಾದರು.
ಮೆಂಡಿಸ್ 37 ಎಸೆತಗಳಲ್ಲಿ 4 ಫೋರ್, 3 ಸಿಕ್ಸರ್ ಸಿಡಿಸಿ 60 ರನ್ ಗಳಿಸಿದರೆ, 33 ಎಸೆತಗಳಲ್ಲಿ ಶನಕ 45ರನ್ ಚಚ್ಚಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿ ನಿರ್ಗಮಿಸಿದರು. ಶ್ರೀಲಂಕಾ ತಂಡಕ್ಕೆ ಗೆಲಲ್ಲು ಕೊನೆಯ 12 ಎಸೆತಗಳಲ್ಲಿ 25 ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಉತ್ತಮವಾಗಿ ಆಡ್ತಿದ್ದ ಕರುಣರತ್ನೆ (16) ರನೌಟ್ ಬಲೆಗೆ ಬಿದ್ದರು. ಆದರೆ, ಅಸಿತಾ ಫೆರ್ನಾಂಡೋ ಕೊನೆಯ ಓವರ್ನಲ್ಲಿ ಎರಡು ಬೌಂಡರಿ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಈ ಮೂಲಕ ಶ್ರೀಲಂಕಾ ಸೂಪರ್ 4 ಹಂತಕ್ಕೆ ಪ್ರವೇಶ ಪಡೆದಿದೆ.