KS Bharat: ಕೆಎಸ್ ಭರತ್ ಸಿಕ್ಸ್​ ಸಿಡಿಸಿದ ಕೂಡಲೇ ಡ್ರೆಸ್ಸಿಂಗ್ ರೂಮ್​ನಲ್ಲಿದ್ದ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ

| Updated By: Vinay Bhat

Updated on: Oct 09, 2021 | 9:48 AM

Virat Kohli Celebration on RCB vs DC Match: ಐಪಿಎಲ್ 2021ರ ಆರ್​ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಅಂತಿಮ ಲೀಗ್ ಪಂದ್ಯ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಕೊನೇಯ ಎಸೆತದಲ್ಲಿ ಕೆಎಸ್ ಭರತ್ ಸಿಕ್ಸ್​ ಸಿಡಿಸುವ ಮೂಲಕ ತಂಡಕ್ಕೆ ಗೆಲುವು ತಂದಿಟ್ಟರು. ಈ ಸಂದರ್ಭ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ.

KS Bharat: ಕೆಎಸ್ ಭರತ್ ಸಿಕ್ಸ್​ ಸಿಡಿಸಿದ ಕೂಡಲೇ ಡ್ರೆಸ್ಸಿಂಗ್ ರೂಮ್​ನಲ್ಲಿದ್ದ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ
Virat Kohli and KS Bharat RCB vs DC
Follow us on

ಇಂಡಿಯನ್ ಪ್ರೀಮಿಯರ್ ಲೀಗ್ 2021ರ (IPL 2021) ಕೊನೇಯ ಲೀಗ್ ಪಂದ್ಯಕ್ಕೆ ರೋಚಕ ಅಂತ್ಯ ಸಿಕ್ಕಿತು. ಕೊನೇಯ ಎಸೆತದ ವರೆಗೂ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ (RCB vs DC) ನಡುವಣ ಪಂದ್ಯ ಅಭಿಮಾನಿಗಳನ್ನ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆರ್​ಸಿಬಿ (Royal Challengers Bangalore) ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಶ್ರೀಕರ್ ಭರತ್ (Srikar Bharat) ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಆಸರೆಯಾದರು. ಶತಕದ ಜೊತೆಯಾಟ ಆಡಿದ ಈ ಜೋಡಿ ಗೆಲುವಿನ ರೂವಾರಿಗಳಾದರು. ತಂಡ ಗೆಲುವಿನ ನಗೆ ಬೀರುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್​ನಲ್ಲಿದ್ದ ಮತ್ತು ಡಗೌಟ್​ನಲ್ಲಿದ್ದ ಬೆಂಗಳೂರು ಆಟಗಾರರು ಕುಣಿದು ಕುಪ್ಪಳಿಸಿದರು. ಅದರಲ್ಲೂ ನಾಯಕ ವಿರಾಟ್ ಕೊಹ್ಲಿ (Virat Kohli) ಏನು ಮಾಡಿದ್ರು ಅಂತ ನೀವೇ ನೋಡಿ.

ಹೌದು, ಐಪಿಎಲ್ 2021ರ ಆರ್​ಸಿಬಿ-ಡೆಲ್ಲಿ ನಡುವಣ ಅಂತಿಮ ಲೀಗ್ ಪಂದ್ಯ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಕೊನೇಯ ಓವರ್​ನಲ್ಲಿ ಆರ್​ಸಿಬಿ ಗೆಲುವಿಗೆ 15 ರನ್​ಗಳ ಅವಶ್ಯಕತೆಯಿತ್ತು. ಆವೇಶ್ ಖಾನ್ ಅವರ ಮೊದಲ ಎಸೆತವನ್ನು ಮ್ಯಾಕ್ಸ್​ವೆಲ್ ಬೌಂಡರಿಗೆ ಅಟ್ಟಿದರು. ಎರಡನೇ ಎಸೆತದಲ್ಲಿ 2 ರನ್. ಮೂರನೇ ಎಸೆತದಲ್ಲಿ 1 ರನ್ ಮೂಡಿಬಂತು. 4ನೇ ಎಸೆತ ಭರತ್ ಅವರಿಂದ ಡಾಟ್ ಆಯಿತು. 5ನೇ ಎಸೆತದಲ್ಲಿ 2 ರನ್. ಹೀಗಾಗಿ ಕೊನೇಯ ಎಸೆತದಲ್ಲಿ ಆರ್​ಸಿಬಿಗೆ ಗೆಲ್ಲಲು 6 ರನ್​ಗಳ ಅವಶ್ಯತೆಯಿತ್ತು. ಆದರೆ, 6ನೇ ಎಸೆತ ವೈಡ್ ಆದ ಕಾರಣ ಇನ್ನೊಂದು ಬಾಲ್ ಜೊತೆಗೆ ಗೆಲುವಿಗೆ 5 ರನ್​ಗಳು ಬೇಕಿದ್ದವು. ಈ ಸಂದರ್ಭ ಕೊನೇಯ ಪುಲ್​ಟ್ರಾಸ್ ಎಸೆತವನ್ನು ಸಿಕ್ಸರ್​ಗೆ ಅಟ್ಟಿದ ಭರತ್ ತಂಡಕ್ಕೆ ರೋಚಕ ಗೆಲುವು ತಂದಿಟ್ಟರು.

ಪಂದ್ಯವನ್ನು ಬಹುತೇಕ ಕಳೆದುಕೊಂಡೆವು ಎಂಬ ಬೇಸರದಲ್ಲಿದ್ದ ವಿರಾಟ್ ಕೊಹ್ಲಿ ದಿಢೀರ್ ಗೆಲುವು ಕಂಡಾಗ ಡ್ರೆಸ್ಸಿಂಗ್ ರೂಮ್​ನಲ್ಲಿ ಸಂಭ್ರಮಿಸಿದರು. ಅಲ್ಲದೆ ಮೈದಾನಕ್ಕೆ ಓಡಿ ಬಂದು ಭರತ್ ಅವರನ್ನು ಅಪ್ಪಿಕೊಂಡರು. ಈ ಬಗ್ಗೆ ಕೊಹ್ಲಿ ಪಂದ್ಯ ಮುಗಿದ ಬಳಿಕವೂ ಮಾತನಾಡಿ, ಇದೊಂದು ಊಹೆಗೂ ಸಿಲುಕದ ಪಂದ್ಯ. ಈ ಪಂದ್ಯ ಕೆ. ಎಸ್ ಭರತ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಪಂದ್ಯವನ್ನು ಮುಗಿಸಿದ್ದು ಅದ್ಭುತವಾಗಿತ್ತು. ನಾವು 160+ ರನ್ ಚೇಸ್ ಮಾಡಬೇಕಿತ್ತು. ಒಂದಾ ಆಲೌಟ್ ಆಗುತ್ತೇವೆ ಅಥವಾ ಗೆಲ್ಲಲು ಸಾಧ್ಯವಿಲ್ಲ ಎಂದು ಭಾವಿಸಿದ್ದೆ. ಆದರೆ, ನಮ್ಮೆಲ್ಲ ಯೋಚನೆಯನ್ನು ಇವರಿಬ್ಬರು (ಭರತ್-ಮ್ಯಾಕ್ಸ್​ವೆಲ್) ಸುಳ್ಳು ಮಾಡಿದರು ಎಂದು ಹೇಳಿದರು.

 

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿತು. ತಂಡದ ಪರ ಪೃಥ್ವಿ ಶಾ 48 ಮತ್ತು ಶಿಖರ್ ಧವನ್ 43 ರನ್ ಬಾರಿಸಿದರು. ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ ಆರಂಭದಲ್ಲೇ ನಾಯಕ ವಿರಾಟ್ ಕೊಹ್ಲಿ (4) ಹಾಗೂ ದೇವದತ್ ಪಡಿಕ್ಕಲ್ (0) ವಿಕೆಟ್ ಕಳೆದುಕೊಂಡಿತು. ಎಬಿ ಡಿವಿಲಿಯರ್ಸ್ 26 ರನ್ ಬಾರಿಸಿದರು. ಆದರೆ, ನಂತರದಲ್ಲಿ ಜೊತೆಯಾದ ಶ್ರೀಕರ್ ಭರತ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಶತಕದ ಜೊತೆಯಾಟ ಆಡಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

ಆರ್​ಸಿಬಿ 20 ಓವರ್​ನಲ್ಲಿ 3 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿ ಜಯ ಸಾಧಿಸಿತು. ಭರತ್ 52 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಿಡಿಸಿ ಅಜೇಯ 78 ರನ್ ಚಚ್ಚಿದರೆ, ಮ್ಯಾಕ್ಸ್​ವೆಲ್ 33 ಎಸೆತಗಳಲ್ಲಿ 8 ಬೌಂಡರಿಯೊಂದಿಗೆ ಅಜೇಯ 51 ರನ್ ಗಳಿಸಿದರು.

Virat Kohli: ರೋಚಕ ಗೆಲುವಿನ ಖುಷಿಯಲ್ಲಿ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಆಡಿದ ಮಾತು ಕೇಳಿ

IPL 2021: 56 ಲೀಗ್ ಪಂದ್ಯಗಳಿಗೆ ತೆರೆ: ಡೆಲ್ಲಿ-ಚೆನ್ನೈ ಕ್ವಾಲಿಫೈಯರ್​ಗೆ, ಆರ್​ಸಿಬಿ-ಕೆಕೆಆರ್ ಎಲಿಮಿನೇಟರ್​ನಲ್ಲಿ ಮುಖಾಮುಖಿ

(Srikar Bharat hit a Six on RCB vs DC IPL 2021 Match Virat kohli Celebration in dressing room video going viral)