Steve Smith: ಸಚಿನ್, ದ್ರಾವಿಡ್ ದಾಖಲೆ ಮುರಿದ ಸ್ಟೀವ್ ಸ್ಮಿತ್

| Updated By: ಝಾಹಿರ್ ಯೂಸುಫ್

Updated on: Mar 22, 2022 | 7:00 PM

Steve Smith: ಸದ್ಯ 8 ಸಾವಿರ ರನ್​ ಪೂರೈಸಲು ಸ್ಟೀವ್ ಸ್ಮಿತ್​ಗೆ ಕೇವಲ 7 ರನ್​ಗಳ ಅವಶ್ಯಕತೆಯಿದ್ದು, 2ನೇ ಇನಿಂಗ್ಸ್​ ಮೂಲಕ ಈ ಸಾಧನೆ ಮಾಡುವ ವಿಶ್ವಾಸದಲ್ಲಿದ್ದಾರೆ.

Steve Smith: ಸಚಿನ್, ದ್ರಾವಿಡ್ ದಾಖಲೆ ಮುರಿದ ಸ್ಟೀವ್ ಸ್ಮಿತ್
Steve Smith
Follow us on

ಆಸ್ಟ್ರೇಲಿಯಾದ ಬ್ಯಾಟಿಂಗ್ ಸೆನ್ಸೇಶನ್ ಸ್ಟೀವ್ ಸ್ಮಿತ್ ಪಾಕಿಸ್ತಾನದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕಗಳನ್ನು ಬಾರಿಸಿರುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 78 ರನ್‌ ಬಾರಿಸಿದ್ದ ಸ್ಮಿತ್, ಕರಾಚಿ ಟೆಸ್ಟ್​ನಲ್ಲಿ 72 ರನ್‌ಗಳ ಇನ್ನಿಂಗ್ಸ್‌ ಆಡಿದ್ದರು. ಇನ್ನು ಲಾಹೋರ್ ಟೆಸ್ಟ್‌ನ ಮೊದಲ ದಿನದಂದು 59 ರನ್ ಬಾರಿಸುವ ಮೂಲಕ ಮಿಂಚಿದರು. ಇದರೊಂದಿಗೆ ಏಷ್ಯನ್ ಬ್ಯಾಟಿಂಗ್ ದೈತ್ಯರ ಹೆಸರಿನಲ್ಲಿದ್ದ ದಾಖಲೆಯನ್ನು ಸ್ಮಿತ್ ತಮ್ಮದಾಗಿಸಿಕೊಂಡರು.

ಮೂರನೇ ಟೆಸ್ಟ್ ಪಂದ್ಯದಲ್ಲಿ 59 ರನ್​ಗಳಿಸುವ ಮೂಲಕ ಸ್ಮಿತ್ 150 ಟೆಸ್ಟ್ ಇನ್ನಿಂಗ್ಸ್‌ಗಳ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಬರೆದಿದ್ದಾರೆ. ಸದ್ಯ 150 ಇನಿಂಗ್ಸ್ ಆಡಿರುವ ಸ್ಮಿತ್ 7993 ರನ್ ಗಳಿಸಿದ್ದಾರೆ. ಆದರೆ ಇದೇ ವೇಳೆ ಕ್ರಿಕೆಟ್ ಅಂಗಳದ ದಂತಕಥೆ ಎನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ 150 ಇನಿಂಗ್ಸ್​ ವೇಳೆ ಗಳಿಸಿದ್ದು 7869 ರನ್. ಹಾಗೆಯೇ ಶ್ರೀಲಂಕಾದ ಕುಮಾರ ಸಂಗಕ್ಕಾರ (7913), ವಿರೇಂದ್ರ ಸೆಹ್ವಾಗ್ (7694) ಮತ್ತು ದ್ರಾವಿಡ್ (7680) ಅವರನ್ನೂ ಕೂಡ ಸ್ಟೀವ್ ಸ್ಮಿತ್ ಹಿಂದಿಕ್ಕಿದ್ದಾರೆ.

ಸದ್ಯ 8 ಸಾವಿರ ರನ್​ ಪೂರೈಸಲು ಸ್ಟೀವ್ ಸ್ಮಿತ್​ಗೆ ಕೇವಲ 7 ರನ್​ಗಳ ಅವಶ್ಯಕತೆಯಿದ್ದು, 2ನೇ ಇನಿಂಗ್ಸ್​ ಮೂಲಕ ಈ ಸಾಧನೆ ಮಾಡುವ ವಿಶ್ವಾಸದಲ್ಲಿದ್ದಾರೆ. ಒಟ್ಟಿನಲ್ಲಿ ಸ್ಟೀವ್ ಸ್ಮಿತ್ ಬ್ಯಾಟ್​ನಿಂದ ಕಳೆದ ಕೆಲ ಟೆಸ್ಟ್ ಪಂದಗಳಿಂದ ಶತಕ ಮೂಡಿ ಬರುತ್ತಿಲ್ಲ. ಇದಾಗ್ಯೂ ಸ್ಮಿತ್ ಬ್ಯಾಕ್ ಟು ಬ್ಯಾಕ್ ಅರ್ಧಶತಕಗಳನ್ನು ಬಾರಿಸುವ ಮೂಲಕ ಹೊಸ ಸೆನ್ಸೇಷನ್ ಸೃಷ್ಟಿಸುತ್ತಿದ್ದಾರೆ.

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅಂದು ಪರ್ಪಲ್ ಕ್ಯಾಪ್ ವಿನ್ನರ್, ಇಂದು ನೆಟ್ ಬೌಲರ್..!

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಇವರೇ..!

ಇದನ್ನೂ ಓದಿ: IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್​ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?

(Steve Smith leaves behind Sachin Tendulkar, Rahul Dravid to achieve incredible Test batting record)