Sunil Gavaskar Birthday: ಹೆಲ್ಮೆಟ್ ಧರಿಸದೆ ವಿಂಡೀಸ್ ದೈತ್ಯರ ಹುಟ್ಟಡಗಿಸಿದ್ದ ಸುನೀಲ್ ಗವಾಸ್ಕರ್​ಗೆ ಇಂದು 74ನೇ ಹುಟ್ಟುಹಬ್ಬ

Sunil Gavaskar Birthday: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಸುನೀಲ್ ಗವಾಸ್ಕರ್ ತಮ್ಮ 74ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ

Sunil Gavaskar Birthday: ಹೆಲ್ಮೆಟ್ ಧರಿಸದೆ ವಿಂಡೀಸ್ ದೈತ್ಯರ ಹುಟ್ಟಡಗಿಸಿದ್ದ ಸುನೀಲ್ ಗವಾಸ್ಕರ್​ಗೆ ಇಂದು 74ನೇ ಹುಟ್ಟುಹಬ್ಬ
ಸುನೀಲ್ ಗವಾಸ್ಕರ್
Follow us
ಪೃಥ್ವಿಶಂಕರ
|

Updated on:Jul 10, 2023 | 8:02 AM

ಕ್ರಿಕೆಟ್ ಲೋಕದಲ್ಲಿ ಲಿಟ್ಲ್ ಮಾಸ್ಟರ್ (Little Master) ಹೆಸರು ಕೇಳಿದಾಗ ಎಲ್ಲರ ಮನದಲ್ಲಿ ಮೊದಲು ಬರುವುದು ಸಚಿನ್ ತೆಂಡೂಲ್ಕರ್ (Sachin Tendulkar) ಹೆಸರು. ಆದರೆ ಸಚಿನ್‌ಗಿಂತ ಮೊದಲು ಈ ಹೆಸರನ್ನು ಬೇರೆಯವರಿಗೆ ಇಡಲಾಗಿತ್ತು. ಆ ಆಟಗಾರ ಬೇರೆ ಯಾರೂ ಅಲ್ಲ, ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಭಾರತದ ಸುನೀಲ್ ಗವಾಸ್ಕರ್ (Sunil Gavaskar). ಇಂದು ಅಂದರೆ ಜುಲೈ 10 ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಸುನೀಲ್ ಗವಾಸ್ಕರ್ ತಮ್ಮ 74ನೇ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. 70-80ರ ದಶಕದಲ್ಲಿ ಭಾರತ ಕ್ರಿಕೆಟ್​ ಅನ್ನು ಅಕ್ಷರಶಃ ಆಳಿದ ಪ್ರತಿಭಾವಂತ ಕ್ರಿಕೆಟಿಗ ಗವಾಸ್ಕರ್. ಪ್ರಸ್ತುತ ಕ್ರಿಕೆಟ್ ಲೋಕದಲ್ಲಿ ಅದರಲ್ಲೂ ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕ ಮತ್ತು ಅತಿ ಹೆಚ್ಚು ರನ್‌ ಬಾರಿಸಿರುವವರು ಯಾರು ಎಂದರೆ ಎಲ್ಲರೂ ಸಚಿನ್ ತೆಂಡೂಲ್ಕರ್ ಎನ್ನುತ್ತಾರೆ. ಆದರೆ ಒಂದು ಕಾಲದಲ್ಲಿ ಈ ದಾಖಲೆಗಳು ಗವಾಸ್ಕರ್ ಹೆಸರಿನಲ್ಲಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ (Test Cricket) ಮೊದಲ ಬಾರಿಗೆ 10,000 ರನ್‌ಗಳ ಗಡಿ ತಲುಪಿದ ಆಟಗಾರನೆಂಬ ದಾಖಲೆ ಗವಾಸ್ಕರ್ ಹೆಸರಿನಲ್ಲಿದೆ.

ಕೆರಿಬಿಯನ್ ಬೌಲರ್​ಗಳಿಗೆ ಸೊಪ್ಪು ಹಾಕದ ಗವಾಸ್ಕರ್

ಗವಾಸ್ಕರ್, ಇತರ ಬ್ಯಾಟ್ಸ್‌ಮನ್‌ಗಳಿಂದ ಏಕೆ ಭಿನ್ನವಾಗಿ ಕಾಣುತ್ತಾರೆ ಎಂಬುದಕ್ಕೆ ಇನ್ನೊಂದು ನಿದರ್ಶನವೆಂದರೆ ಅವರ ನಿರ್ಭಯತೆ. ವೆಸ್ಟ್ ಇಂಡೀಸ್ ತಂಡ ಉತ್ತುಂಗದಲ್ಲಿದ್ದ ಸಮಯದಲ್ಲಿ ಗವಾಸ್ಕರ್, ಈ ಕೆರಿಬಿಯನ್ ವೇಗದ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಿದ್ದರು. ಕೆರಿಬಿಯನ್ ತಂಡದಲ್ಲಿದ್ದ ಆಂಡಿ ರಾಬರ್ಟ್ಸ್, ಮಾಲ್ಕಮ್ ಮಾರ್ಷಲ್, ಮೈಕೆಲ್ ಹೋಲ್ಡಿಂಗ್ ಅವರ ಹೆಸರನ್ನು ಕೇಳಿದರೆ ಬ್ಯಾಟ್ಸ್‌ಮನ್‌ಗಳು ನಡುಗುತ್ತಿದ್ದರು. ಆದರೆ ಗವಾಸ್ಕರ್ ಇವರನ್ನೆಲ್ಲ ದಿಟ್ಟವಾಗಿ ಎದುರಿಸಿದ್ದಲ್ಲದೆ, ಅವರೆಲ್ಲರ ಮುಂದೆ ಹೆಲ್ಮೆಟ್ ತೊಡದೆ ಬ್ಯಾಟಿಂಗ್ ಮಾಡುತ್ತಿದ್ದರು. ಹೆಲ್ಮೆಟ್ ಇಲ್ಲದೆ ಅವರೆಲ್ಲರ ಮುಂದೆ ಇಳಿಯುವ ಧೈರ್ಯ ಯಾವ ಬ್ಯಾಟ್ಸ್‌ಮನ್‌ಗೂ ಸಾಧ್ಯವಿರಲಿಲ್ಲ. ಆದರೆ ಗವಾಸ್ಕರ್ ಅದನ್ನು ಮಾಡಿ ತೋರಿಸಿದ್ದರು.

IND vs WI: ‘ರಣಜಿಯನ್ನು ನಿಲ್ಲಿಸಿ’; ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ ಗವಾಸ್ಕರ್

ಟೆಸ್ಟ್ ವೃತ್ತಿ ಬದುಕಿನ ಆರಂಭ

1970-71ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾದಲ್ಲಿ ಕಾಲಿರಿಸಿದ ಗಾವಸ್ಕರ್ ಹಿಂತಿರುಗಿ ನೋಡಲಿಲ್ಲ. ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ ವಿಂಡೀಸ್‌ನ ಅಪಾಯಕಾರಿ ಬೌಲಿಂಗ್ ದಾಳಿಯ ಮುಂದೆ ಗವಾಸ್ಕರ್ ನಾಲ್ಕು ಶತಕ, ಮೂರು ಅರ್ಧಶತಕಗಳ ಸಹಾಯದಿಂದ 774 ರನ್ ಕಲೆಹಾಕಿದರು. ಈ ಸರಣಿಯಲ್ಲಿ ಅವರ ಸರಾಸರಿ 154.80 ಆಗಿತ್ತು. ಇದರೊಂದಿಗೆ ಗವಾಸ್ಕರ್ ಚೊಚ್ಚಲ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಕೂಡ ಬರೆದಿದ್ದರು.

ಏಕದಿನ ಮಾದರಿಯಲ್ಲಿ ಹೇಗಿತ್ತು ಪ್ರದರ್ಶನ

ಗವಾಸ್ಕರ್ ಟೆಸ್ಟ್‌ ಮಾದರಿಯಲ್ಲಿ ಒಂದರ ಹಿಂದೆ ಒಂದರಂತೆ ಹಲವು ದಾಖಲೆಗಳನ್ನು ಮಾಡಿದರಾದರೂ, ಏಕದಿನ ಮಾದರಿಯಲ್ಲಿ ಹೆಚ್ಚು ಯಶಸ್ವಿಯಾಗಲಿಲ್ಲ. ಟೆಸ್ಟ್​ನಲ್ಲಿ 34 ಶತಕ ಸಿಡಿಸಿರುವ ಗವಾಸ್ಕರ್ ಏಕದಿನದಲ್ಲಿ ಕೇವಲ ಒಂದು ಶತಕ ಬಾರಿಸಿದ್ದಾರೆ. 1983ರಲ್ಲಿ ಏಕದಿನ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದ ಗವಾಸ್ಕರ್, ಅದರ ಹಿಂದಿನ ವಿಶ್ವಕಪ್‌ನಲ್ಲಿ ಅಂದರೆ 1979ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 174 ಎಸೆತಗಳಲ್ಲಿ 36 ರನ್ ಗಳಿಸಿದ್ದು ಮುಜುಗರದ ದಾಖಲೆಯಾಗಿ ಉಳಿದಿದೆ.

ಟೆಸ್ಟ್‌ ಮಾದರಿಯಲ್ಲಿ ಭಾರತದ ಪರ 125 ಟೆಸ್ಟ್ ಪಂದ್ಯಗಳನ್ನಾಡಿರುವ ಗವಾಸ್ಕರ್, 51.12 ರ ಸರಾಸರಿಯಲ್ಲಿ 10,122 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 34 ಶತಕ ಮತ್ತು 45 ಅರ್ಧ ಶತಕಗಳು ಸೇರಿವೆ. ಹಾಗೆಯೇ ಏಕದಿನ ಮಾದರಿಯಲ್ಲಿ ಭಾರತದ ಪರ 108 ಪಂದ್ಯಗಳನ್ನಾಡಿರುವ ಸುನಿಲ್, 27 ಅರ್ಧ ಶತಕ ಮತ್ತು ಒಂದು ಶತಕ ಸೇರಿದಂತೆ 35.13 ಸರಾಸರಿಯಲ್ಲಿ 3092 ರನ್ ಬಾರಿಸಿದ್ದಾರೆ.

ನಾಯಕತ್ವ ಸ್ಥಿರವಾಗಿ ಉಳಿಯಲಿಲ್ಲ

ಗವಾಸ್ಕರ್ ಭಾರತವನ್ನು ಮುನ್ನಡೆಸಿದ್ದ ದಾಖಲೆಯನ್ನು ಹೊಂದಿದ್ದಾರೆ. 1975-76ರಲ್ಲಿ ನ್ಯೂಜಿಲೆಂಡ್ ವಿರುದ್ಧ ಗವಾಸ್ಕರ್ ಮೊದಲ ಬಾರಿಗೆ ಭಾರತ ತಂಡದ ನಾಯಕರಾಗಿದ್ದರು. ಆಗ ತಂಡದ ನಾಯಕ ಬಿಷನ್ ಸಿಂಗ್ ಬೇಡಿ ಗಾಯಗೊಂಡು ಆಡಲು ಸಾಧ್ಯವಾಗದಿದ್ದಾಗ ಗವಾಸ್ಕರ್​ಗೆ ಈ ಜವಬ್ದಾರಿ ನೀಡಲಾಗಿತ್ತು. ಆದರೆ ಬೇಡಿ ಎರಡನೇ ಟೆಸ್ಟ್‌ನಲ್ಲಿ ತಂಡಕ್ಕೆ ಪುನರಾಗಮನ ಮಾಡಿದರೂ ಅವರಿಗೆ ನಾಯಕತ್ವ ನೀಡಲಿಲ್ಲ. ಬಳಿಕ ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಯಿತು. ಆ ನಂತರ 1978-79ರಲ್ಲಿಯೂ ಗವಾಸ್ಕರ್ ಅವರಿಗೆ ನಾಯಕತ್ವವನ್ನು ಹಸ್ತಾಂತರಿಸಲಾಯಿತು. ವೆಸ್ಟ್ ಇಂಡೀಸ್ ವಿರುದ್ಧ ನಾಯಕತ್ವ ವಹಿಸಿದ್ದ ಗವಾಸ್ಕರ್, ಟೀಂ ಇಂಡಿಯಾಕ್ಕೆ ತವರಿನಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲಿಸಿಕೊಟ್ಟರು. ಗವಾಸ್ಕರ್ ಈ ಸರಣಿಯಲ್ಲಿ 700 ಕ್ಕೂ ಹೆಚ್ಚು ರನ್ ಕಲೆಹಾಕಿದ್ದರು. ಆದರೆ ಇದರ ನಂತರ ಅವರನ್ನು ಇಂಗ್ಲೆಂಡ್ ಪ್ರವಾಸದಲ್ಲಿ ನಾಯಕತ್ವದಿಂದ ತೆಗೆದುಹಾಕಲಾಯಿತು. ಬಳಿಕ ಎಸ್. ವೆಂಕಟರಾಘವನ್ ಅವರನ್ನು ನಾಯಕರನ್ನಾಗಿ ನೇಮಿಸಲಾದರೂ ಮತ್ತೆ 1979-80ರಲ್ಲಿ ಗವಾಸ್ಕರ್ ಅವರನ್ನ ನಾಯಕನನ್ನಾಗಿ ನೇಮಿಸಲಾಯಿತು.

ಇದಾದ ನಂತರವೂ ಗವಾಸ್ಕರ್‌ಗೆ ಕೆಲವು ಬಾರಿ ನಾಯಕತ್ವವನ್ನು ಹಸ್ತಾಂತರಿಸಲಾಯಿತು ಮತ್ತು ನಂತರ ಕಿತ್ತುಕೊಳ್ಳಲಾಯಿತು. ಗವಾಸ್ಕರ್ 47 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಇದರಲ್ಲಿ ಎಂಟು ಪಂದ್ಯಗಳಲ್ಲಿ ಸೋಲು ಕಂಡರೆ, ಒಂಬತ್ತು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನುಳಿದಂತೆ 30 ಪಂದ್ಯಗಳು ಡ್ರಾಗೊಂಡಿವೆ. ಏಕದಿನದಲ್ಲೂ 37 ಪಂದ್ಯಗಳಲ್ಲಿ ತಂಡದ ನಾಯಕರಾಗಿದ್ದ ಸುನೀಲ್, ಇದರಲ್ಲಿ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಒಂಭತ್ತು ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಎರಡು ಪಂದ್ಯಗಳ ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:55 am, Mon, 10 July 23

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ