19 ಸಿಕ್ಸ್, 192 ರನ್​: ಅಬ್ಬರಿಸಿದ ಸುನಿಲ್ ನರೈನ್-ಜೇಸನ್ ಮೊಹಮ್ಮದ್..!

| Updated By: ಝಾಹಿರ್ ಯೂಸುಫ್

Updated on: Mar 02, 2022 | 5:23 PM

Sunil Narine-Jason Mohammed: ಈ ಬೃಹತ್ ಗುರಿ ಬೆನ್ನತ್ತಿದ ಕೊಕಿರೊ ಕ್ಯಾವಲಿಯರ್ಸ್ ತಂಡವು ಬಿರುಸಿನ ಆರಂಭ ಪಡೆದಿತ್ತು. ಇದಾಗ್ಯೂ ಅಂತಿಮವಾಗಿ 10 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 107 ರನ್​ಗಳಿಸಲಷ್ಟೇ ಶಕ್ತರಾದರು.

19 ಸಿಕ್ಸ್, 192 ರನ್​: ಅಬ್ಬರಿಸಿದ ಸುನಿಲ್ ನರೈನ್-ಜೇಸನ್ ಮೊಹಮ್ಮದ್..!
Sunil Narine-Jason Mohammed
Follow us on

ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿರುವ ಟ್ರಿನಿಡಾಡ್ ಟಿ10 ಬ್ಲಾಸ್ಟ್​ ಟೂರ್ನಿಯಲ್ಲಿ ಸ್ಟಾರ್ ಆಟಗಾರ ಸುನಿಲ್ ನರೈನ್ ಹಾಗೂ ಜೇಸನ್ ಮೊಹಮ್ಮದ್ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಕೊಕಿರೊ ಕ್ಯಾವಲಿಯರ್ಸ್ ತಂಡದ ವಿರುದ್ದದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕೋವಾ ಕಿಂಗ್ಸ್ ಪರ ಸುನಿಲ್ ನರೈನ್ ಹಾಗೂ ಜೇಸನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ನರೈನ್ ಕ್ಯಾವಲಿಯರ್ಸ್ ಬೌಲರುಗಳ ಬೆಂಡೆತ್ತಿದರು. ಮತ್ತೊಂದಡೆ ಜೇಸನ್ ಮೊಹಮ್ಮದ್ 33 ಎಸೆತಗಳಲ್ಲಿ 11 ಸಿಕ್ಸರ್​ ಸಿಡಿಸುವ ಮೂಲಕ 93 ರನ್​ ಬಾರಿಸಿ ಅಬ್ಬರಿಸಿದರು. ಇನ್ನು ಕೇವಲ 22 ಎಸೆತಗಳಲ್ಲಿ 6 ಸಿಕ್ಸ್​ ಹಾಗೂ 3 ಬೌಂಡರಿಯೊಂದಿಗೆ ಅಜೇಯ 68 ರನ್ ಬಾರಿಸುವ ಮೂಲಕ ಸುನಿಲ್ ನರೈನ್ ತಂಡದ ಮೊತ್ತವನ್ನು 10 ಓವರ್​ಗಳಲ್ಲಿ ಒಂದು ವಿಕೆಟ್​ ನಷ್ಟಕ್ಕೆ ತಂಡದ ಮೊತ್ತವನ್ನು 192 ಕ್ಕೆ ತಂದು ನಿಲ್ಲಿಸಿದರು.

ಈ ಬೃಹತ್ ಗುರಿ ಬೆನ್ನತ್ತಿದ ಕೊಕಿರೊ ಕ್ಯಾವಲಿಯರ್ಸ್ ತಂಡವು ಬಿರುಸಿನ ಆರಂಭ ಪಡೆದಿತ್ತು. ಇದಾಗ್ಯೂ ಅಂತಿಮವಾಗಿ 10 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 107 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ 85 ರನ್​ಗಳ ಭರ್ಜರಿ ಜಯ ಸಾಧಿಸಿತು. ಸ್ಕೋವಾ ಕಿಂಗ್ಸ್ ಪರ ಚೆಡಿಯನ್ ರೇಮಂಡ್ 2 ಓವರ್ ಗಳಲ್ಲಿ 13 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.

ನಿಕೋಲಸ್ ಪೂರನ್-ಎವಿನ್ ಲೆವಿಸ್ ಅಬ್ಬರ:
ಸುನಿಲ್ ನರೈನ್ ಮತ್ತು ಜೇಸನ್ ಮೊಹಮ್ಮದ್ ಮೊದಲು, ನಿಕೋಲಸ್ ಪೂರನ್ ಮತ್ತು ಎವಿನ್ ಲೆವಿಸ್ ಕೂಡ T10 ಬ್ಲಾಸ್ಟ್‌ನಲ್ಲಿ ಅಬ್ಬರಿಸಿದ್ದಾರೆ. ಲೆದರ್‌ಬ್ಯಾಕ್ ಜೈಂಟ್ಸ್ ಪರ ಆಡುತ್ತಿರುವ ನಿಕೋಲಸ್ ಪೂರನ್ ಕೇವಲ 37 ಎಸೆತಗಳಲ್ಲಿ ಅಜೇಯ 101 ರನ್ ಗಳಿಸಿ ಮಿಂಚಿದ್ದರು. ಈ ವೇಳೆ ಪೂರನ್ 10 ಸಿಕ್ಸರ್ ಮತ್ತು 6 ಬೌಂಡರಿಗಳನ್ನು ಬಾರಿಸಿದ್ದರು. ಇನ್ನು ಟಿ10 ಬ್ಲಾಸ್ಟ್‌ನಲ್ಲಿ ಎವಿನ್ ಲೂಯಿಸ್ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(Sunil Narine-Jason Mohammed smashed 19 sixes scores 165 runs in just 48 balls Trinidad T10 Blast)