ವಿಶ್ವ ದರ್ಜೆಯ ಬೌಲರ್… ಅದಕ್ಕೆ ನಾವು ಸೋತೆವು: ಸೂರ್ಯಕುಮಾರ್ ಯಾದವ್

India vs EnglandT20: ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಸರಣಿಯ ಮೊದಲ ಮ್ಯಾಚ್​​ನಲ್ಲಿ ಟೀಮ್ ಇಂಡಿಯಾ 7 ವಿಕೆಟ್​ಗಳ ಜಯ ಸಾಧಿಸಿತ್ತು. ಇನ್ನು ಚೆನ್ನೈನಲ್ಲಿ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ತಂಡ 2 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿದೆ. ಇದೀಗ ಮೂರನೇ ಮ್ಯಾಚ್​ನಲ್ಲಿ ಇಂಗ್ಲೆಂಡ್ ತಂಡವು 26 ರನ್​​ಗಳಿಂದ ಜಯಭೇರಿ ಬಾರಿಸಿದೆ.

ವಿಶ್ವ ದರ್ಜೆಯ ಬೌಲರ್... ಅದಕ್ಕೆ ನಾವು ಸೋತೆವು: ಸೂರ್ಯಕುಮಾರ್ ಯಾದವ್
Surykumar Yadav
Follow us
ಝಾಹಿರ್ ಯೂಸುಫ್
|

Updated on:Jan 29, 2025 | 9:41 AM

ಭಾರತದ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಜಯಭೇರಿ ಬಾರಿಸಿದೆ. ರಾಜ್​ಕೋಟ್​ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಪರ ಆರಂಭಿಕ ಆಟಗಾರ ಬೆನ್ ಡಕೆಟ್ 28 ಎಸೆತಗಳಲ್ಲಿ 51 ರನ್ ಬಾರಿಸಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಲಿಯಾಮ್ ಲಿವಿಂಗ್​ಸ್ಟೋನ್ 24 ಎಸೆತಗಳಲ್ಲಿ 43 ರನ್​ ಚಚ್ಚಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು.

171 ರನ್​​ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಯಾವುದೇ ಹಂತದಲ್ಲೂ ಪ್ರತಿರೋಧ ತೋರಲಿಲ್ಲ ಎನ್ನಬಹುದು. ಅದರಲ್ಲೂ ಸ್ಪಿನ್ನರ್ ಆದಿಲ್ ರಶೀದ್ ಅವರ ಎಸೆತಗಳನ್ನು ಎದುರಿಸಲು ಭಾರತೀಯ ಬ್ಯಾಟರ್​ಗಳು ತಡಕಾಡಿದರು. ಪರಿಣಾಮ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 145 ರನ್ ಬಾರಿಸಿ ಟೀಮ್ ಇಂಡಿಯಾ 26 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಈ ಸೋಲಿನ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್, ಪಂದ್ಯದ ಸಂಪೂರ್ಣ ಕ್ರೆಡಿಟ್ ಎದುರಾಳಿ ಸ್ಪಿನ್ನರ್ ಆದಿಲ್ ರಶೀದ್ ಅವರಿಗೆ ನೀಡಿದರು. ನಾವು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದಾಗ, ದ್ವಿತೀಯ ಇನಿಂಗ್ಸ್​ ವೇಳೆ ಇಬ್ಬನಿ ಇರಲಿದೆ ಎಂದು ಭಾವಿಸಿದ್ದೆವು. ಆದರೆ ನಮ್ಮ ನಿರೀಕ್ಷೆ ಹುಸಿಯಾಯಿತು.

ಇದಾಗ್ಯೂ ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುವಾಗ ನಾವು ಗೆಲ್ಲುವ ವಿಶ್ವಾಸವಿತ್ತು. ಆದರೆ ಈ ಹಂತದಲ್ಲಿ ಅದ್ಭುತ ಬೌಲಿಂಗ್ ಸಂಘಟಿಸುವಲ್ಲಿ ಆದಿಲ್ ರಶೀದ್ ಯಶಸ್ವಿಯಾದರು. ಇಂತಹ ಬೌಲಿಂಗ್ ಸಂಘಟಿಸುವುದರಿಂದಲೇ ಅವರು ವಿಶ್ವ ದರ್ಜೆಯ ಬೌಲರ್ ಆಗಿದ್ದಾರೆ. ಹೀಗಾಗಿ ಇಂಗ್ಲೆಂಡ್ ಗೆಲುವಿನ ಶ್ರೇಯಸ್ಸು ಆದಿಲ್ ರಶೀದ್ ಅವರಿಗೆ ಸೇರಬೇಕು ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಏಕೆಂದರೆ ಆದಿಲ್ ರಶೀದ್ ಯಾವುದೇ ಹಂತದಲ್ಲೂ ನಮಗೆ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ಪರಿಣಾಮ ರನ್​ಗಳಿಕೆಯನ್ನು ನಮ್ಮ ಬ್ಯಾಟರ್​ಗಳು ಹಿಂದುಳಿದೆವು. ಈ ಸೋಲಿನ ಹೊರತಾಗಿಯೂ ನಾವು ಪ್ರತಿ ಪಂದ್ಯದಿಂದಲೂ ಏನಾದರೂ ಕಲಿಯುತ್ತೇವೆ. ಈ ಪಂದ್ಯದ ಮೂಲಕ ಬ್ಯಾಟಿಂಗ್ ಮತ್ತಷ್ಟು ಉತ್ತಮಗೊಳಿಸಬೇಕೆಂದನ್ನು ಅರಿತುಕೊಂಡಿದ್ದೇವೆ ಎಂದು ಟೀಮ್ ಇಂಡಿಯಾ ನಾಯಕ ಹೇಳಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಪಾಸಿಟಿವ್ ವಿಷಯ ಎಂದರೆ ವರುಣ್ ಚಕ್ರವರ್ತಿ ಅವರ ಪ್ರದರ್ಶನ. ಅವರು ಪ್ರತಿ ಪಂದ್ಯದಲ್ಲೂ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸುತ್ತಿದ್ದಾರೆ. ಇದು ಮುಂದಿನ ಪಂದ್ಯದಲ್ಲೂ ಮುಂದುವರೆಯುವ ವಿಶ್ವಾಸವಿದೆ. ಹಾಗೆಯೇ ವರ್ಷಗಳ ಬಳಿಕ ಕಂಬ್ಯಾಕ್ ಮಾಡಿರುವ ಮೊಹಮ್ಮದ್ ಶಮಿ ಈ ಮ್ಯಾಚ್​ನಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆದರೆ ಮುಂದೆ ಅವರು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ ಮೊಹಮ್ಮದ್ ಸಿರಾಜ್ ವೈಲ್ಡ್​ ಕಾರ್ಡ್ ಎಂಟ್ರಿ ಸಾಧ್ಯತೆ

ಅಂದಹಾಗೆ ಈ ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದ ಆದಿಲ್ ರಶೀದ್ ಕೇವಲ 15 ರನ್ ನೀಡಿ ತಿಲಕ್ ವರ್ಮಾ ಅವರ ವಿಕೆಟ್ ಕಬಳಿಸಿದ್ದರು. ಇದೇ ಕಾರಣದಿಂದಾಗಿ ಸೂರ್ಯಕುಮಾರ್​ ಯಾದವ್ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಅವರ ಪ್ರದರ್ಶನವನ್ನು ಹಾಡಿ ಹೊಗಳಿದ್ದಾರೆ.

Published On - 7:15 am, Wed, 29 January 25

ವಿಜಯೇಂದ್ರ ಜೊತೆ ಯಾರೆಲ್ಲ ಹೋಗಿದ್ದರು ಅನ್ನೋದು ಪತ್ತೆಯಾಗಲಿಲ್ಲ
ವಿಜಯೇಂದ್ರ ಜೊತೆ ಯಾರೆಲ್ಲ ಹೋಗಿದ್ದರು ಅನ್ನೋದು ಪತ್ತೆಯಾಗಲಿಲ್ಲ
ಶಿವಕುಮಾರ್ ದುರ್ದಾನ ತೆಗೆದುಕೊಂಡರಂತೆ ಬೆನ್ನುಹಾಕಿದ್ದು ಯಾಕೆ ಗೊತ್ತಾ?
ಶಿವಕುಮಾರ್ ದುರ್ದಾನ ತೆಗೆದುಕೊಂಡರಂತೆ ಬೆನ್ನುಹಾಕಿದ್ದು ಯಾಕೆ ಗೊತ್ತಾ?
ಪ್ರಿಯಕರ ನಾಗೇಂದ್ರನ ಪ್ರಿಯತಮೆ ಇನ್ನೂ ಅಪ್ರಾಪ್ತೆಯಂತೆ
ಪ್ರಿಯಕರ ನಾಗೇಂದ್ರನ ಪ್ರಿಯತಮೆ ಇನ್ನೂ ಅಪ್ರಾಪ್ತೆಯಂತೆ
ಮೆಟ್ರೋ ದರ ಏರಿಕೆ ಬಿಸಿ: BMRCL ಎಂಡಿ ಮಹತ್ವದ ಸುದ್ದಿಗೋಷ್ಠಿ
ಮೆಟ್ರೋ ದರ ಏರಿಕೆ ಬಿಸಿ: BMRCL ಎಂಡಿ ಮಹತ್ವದ ಸುದ್ದಿಗೋಷ್ಠಿ
ಬಿಜೆಪಿ ಆಂತರಿಕ ವಿಷಯಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ: ಸಿಟಿ ರವಿ
ಬಿಜೆಪಿ ಆಂತರಿಕ ವಿಷಯಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ: ಸಿಟಿ ರವಿ
ಹಳೆಯ ಕಮಾನು ಕೆಡುಗುವಾಗ ಮೇಲೆ ಬಿದ್ದ ಅವಶೇಷಗಳು, ಜೆಸಿಬಿ ಚಾಲಕ ಸಾವು
ಹಳೆಯ ಕಮಾನು ಕೆಡುಗುವಾಗ ಮೇಲೆ ಬಿದ್ದ ಅವಶೇಷಗಳು, ಜೆಸಿಬಿ ಚಾಲಕ ಸಾವು
ಅಮಾಯಕರಿಗೆ ಶಿಕ್ಷೆಯಾಬಾರದು, ತಪ್ಪಿತಸ್ಥರು ತಪ್ಪಿಸಿಕೊಳ್ಳಬಾರದು: ತನ್ವೀರ್
ಅಮಾಯಕರಿಗೆ ಶಿಕ್ಷೆಯಾಬಾರದು, ತಪ್ಪಿತಸ್ಥರು ತಪ್ಪಿಸಿಕೊಳ್ಳಬಾರದು: ತನ್ವೀರ್
ಹುಟ್ಟೂರಲ್ಲಿ ಡಾಲಿ ಧನಂಜಯ್ ಮದುವೆ ಶಾಸ್ತ್ರ; ಶುರುವಾಗಿದೆ ಸಂಭ್ರಮ
ಹುಟ್ಟೂರಲ್ಲಿ ಡಾಲಿ ಧನಂಜಯ್ ಮದುವೆ ಶಾಸ್ತ್ರ; ಶುರುವಾಗಿದೆ ಸಂಭ್ರಮ
ಸ್ನೇಹಿತರೊಂದಿಗೆ ಪ್ರಯಾಗ್​ರಾಜ್ ತೆರಳಿರುವ ಗೋಕಾಕ ಶಾಸಕ ಜಾರಕಿಹೊಳಿ
ಸ್ನೇಹಿತರೊಂದಿಗೆ ಪ್ರಯಾಗ್​ರಾಜ್ ತೆರಳಿರುವ ಗೋಕಾಕ ಶಾಸಕ ಜಾರಕಿಹೊಳಿ
ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್: ಮೈಲಾರಲಿಂಗ ಕಾರ್ಣಿಕದ ಅರ್ಥವೇನು?
ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್: ಮೈಲಾರಲಿಂಗ ಕಾರ್ಣಿಕದ ಅರ್ಥವೇನು?