ಟಿ20 ವಿಶ್ವಕಪ್ 2021 (ICC T20 World Cup) ಅನ್ನು ಭಾರತ ಕ್ರಿಕೆಟ್ ತಂಡ (Inddian Cricket Team) ಅಭ್ಯಾಸ ಪಂದ್ಯವನ್ನಾಡುವ ಮೂಲಕ ಶುರುಮಾಡಿದೆ. ಇಂಗ್ಲೆಂಡ್ (India vs England) ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ಕಂಡಿದ್ದು, ಅಧಿಕೃತ ಆಟಕ್ಕೂ ಮುನ್ನ ಎದುರಾಳಿಗೆ ದೊಡ್ಡ ಸಂದೇಶ ರವಾನಿಸಿದೆ. ಇಶಾನ್ ಕಿಶನ್ (Ishan Kishan) ಹಾಗೂ ಕೆ. ಎಲ್ ರಾಹುಲ್ (KL Rahul)ಸ್ಫೋಟಕ ಬ್ಯಾಟಿಂಗ್ಗೆ ಕಂಗಾಲಾದ ಆಂಗ್ಲರು ಸೋಲೊಪ್ಪಿಗೊಂಡರು. ಟೀಮ್ ಇಂಡಿಯಾಕ್ಕೆ (Team India) ಇಂಗ್ಲೆಂಡ್ ವಿರುದ್ಧ ಗೆದ್ದ ಖುಷಿ ಒಂದುಕಡೆಯಾದರೆ, ಮತ್ತೊಂದೆಡೆ ಆತಂಕ ಮನೆಮಾಡಿದೆ. ತಂಡದ ಪ್ರಮುಖ ಬ್ಯಾಟರ್ ಮುಂದಿನ ಪಂದ್ಯಗಳಲ್ಲಿ ಪ್ಲೇಯಿಂಗ್ನಲ್ಲಿ (India Playing XI) ಕಾಣಿಸಿಕೊಳ್ಳುವುದು ಅನುಮಾನ. ಹೌದು, ಕಳಪೆ ಫಾರ್ಮ್ನಿಂದ ಕಂಗೆಟ್ಟಿರುವ ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್ಗೆ ಆಯ್ಕೆಯಾದ ಬಳಿಕ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸುತ್ತಿಲ್ಲ. ಇದು ವಿರಾಟ್ ಕೊಹ್ಲಿ (Virat Kohli) ಮತ್ತು ಮ್ಯಾನೇಜ್ಮೆಂಟ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಎರಡನೇ ಚರಣದ ಐಪಿಎಲ್ನಿಂದಲೂ ಸೂರ್ಯಕುಮಾರ್ ಬ್ಯಾಡ್ ಫಾರ್ಮ್ನಿಂದ ಟೀಕೆಗಳಿಗೆ ಗುರಿಯಾಗಿದ್ದರು. ಇದನ್ನು ಟಿ20 ವಿಶ್ವಕಪ್ನ ಅಭ್ಯಾಸ ಪಂದ್ಯದಲ್ಲೂ ಮುಂದುವರೆಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯಾದವ್ 9 ಎಸೆತಗಳಲ್ಲಿ 1 ಬೌಂಡರಿ ಬಾರಿಸಿ 8 ರನ್ಗೆ ಔಟ್ ಆದರು. ಅನುಭವಿ ಶ್ರೇಯಸ್ ಅಯ್ಯರ್ರನ್ನು ರಿಸರ್ವ್ ಪ್ಲೇಯರ್ ಆಗಿ ಕೂರಿಸಿ ಸೂರ್ಯಕುಮಾರ್ಗೆ ಅವಕಾಶ ನೀಡಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಈಗ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ.
ಸೋಮವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಜಾನಿ ಬೈರ್ಸ್ಟೋ ಅವರ 49 ರನ್, ಮೊಯೀನ್ ಅಲಿ ಅಜೇಯ 43 ರನ್ ಮತ್ತು ಲ್ಯಾಮ್ ಲಿವಿಂಗ್ಸ್ಟೋನ್ ಅವರ 30 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ರನ್ ಕಲೆಹಾಕಿತು. ಭಾರತ ಪರ ಮೊಹಮ್ಮದ್ ಶಮಿ 4 ಓವರ್ಗೆ 40 ರನ್ ನೀಡಿದ 3 ವಿಕೆಟ್ ಪಡೆದರು. ಜಸ್ಪ್ರೀತ್ ಬುಮ್ರಾ ಮತ್ತು ರಾಹುಲ್ ಚಹಾರ್ ತಲಾ 1 ವಿಕೆಟ್ ಕಿತ್ತರು.
189 ರನ್ಗಳ ದೊಡ್ಡ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಭಾರತ ಸ್ಫೋಟಕ ಆರಂಭ ಪಡೆದುಕೊಂಡಿತು. ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿ ಕೆ. ಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಿದರು. ಐಸಿಸಿ ಅಕಾಡೆಮಿ ಗ್ರೌಂಡ್ನ ಮೂಲೆಮೂಲೆಗೆ ಚೆಂಡನ್ನು ಅಟ್ಟಿದರು. ಮೊದಲ ವಿಕೆಟ್ಗೆ ಈ ಜೋಡಿ 8.2 ಓವರ್ನಲ್ಲಿ 82 ರನ್ ಚಚ್ಚಿತು.
ಕೆ. ಎಲ್ ರಾಹುಲ್ ಕೇವಲ 24 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಿಡಿಸಿ 51 ರನ್ ಬಾರಿಸಿದರೆ, ಕಿಶನ್ 46 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ನೊಂದಿಗೆ 70 ರನ್ ಗಳಿಸಿದ್ದಾಗ ನಿವೃತ್ತಿ ಪಡೆದುಕೊಂಡರು. ವಿರಾಟ್ ಕೊಹ್ಲಿ 13 ಎಸೆತಗಳಲ್ಲಿ 11 ರನ್ಗೆ ಔಟ್ ಆದರೆ, ಸೂರ್ಯಕುಮಾರ್ ಯಾದವ್ 9 ಎಸೆತಗಳಲ್ಲಿ 8 ರನ್ಗೆ ಸುಸ್ತಾದರು.
ನಂತರ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಂತ್ ಕೇವಲ 14 ಎಸೆತಗಳಲ್ಲಿ 3 ಸಿಕ್ಸರ್, 1 ಬೌಂಡರಿಯೊಂದಿಗತೆ ಅಜೇಯ 29 ಮತ್ತು ಪಾಂಡ್ಯ 12 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತ 19 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಬಾರಿಸಿ ಭರ್ಜರಿ ಗೆಲುವು ಕಂಡಿತು.
ಟೀಮ್ ಇಂಡಿಯಾ ತನ್ನ ಮುಂದಿನ ಅಭ್ಯಾಸ ಪಂದ್ಯವನ್ನು ಇದೇ ಮೈದಾನದಲ್ಲಿ ಅಕ್ಟೋಬರ್ 20 ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.
Sri Lanka vs Namibia: ಶ್ರೀಲಂಕಾ ಬೌಲರ್ಗಳ ದಾಳಿಗೆ ನಲುಗಿದ ನಮೀಬಿಯಾ: ಸಿಂಹಳೀಯರಿಂದ ಭರ್ಜರಿ ಆರಂಭ
Curtis Campher: 4 ಬಾಲ್-4 ವಿಕೆಟ್: ಟಿ20 ವಿಶ್ವಕಪ್ನ ಎರಡನೇ ದಿನವೇ ಸೃಷ್ಟಿಯಾಯಿತು ಐತಿಹಾಸಿಕ ದಾಖಲೆ
(Suryakumar Yadav poor performance continued difficult to get a chance in Team India Playing 11)