ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ ಸೂರ್ಯಕುಮಾರ್ ಯಾದವ್ (Suryakumar Yadav) ಶೀಘ್ರದಲ್ಲೇ ಈ ಸ್ವರೂಪದ ನಂಬರ್ 1 ಬ್ಯಾಟ್ಸ್‌ಮನ್ ಆಗುವತ್ತಾ ದಾಪುಗಾಲಿಟ್ಟಿದ್ದಾರೆ. ಇತ್ತೀಚಿನ ಐಸಿಸಿ ಟಿ20 ಶ್ರೇಯಾಂಕವನ್ನು (ICC T20 ranking) ಪ್ರಕಟಿಸಲಾಗಿದ್ದು, ಇದರಲ್ಲಿ ಸೂರ್ಯಕುಮಾರ್ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಸೂರ್ಯಕುಮಾರ್ ಎರಡು ಸ್ಥಾನಗಳ ಜಿಗಿದು 2ನೇ ಸ್ಥಾನದಲ್ಲಿದ್ದಾರೆ.ನಂಬರ್ 1 ಸ್ಥಾನದಲ್ಲಿ ಬಾಬರ್ ಅಜಮ್ (Babar Azam) ಇದ್ದು ಅವರು ಕೇವಲ 2 ರೇಟಿಂಗ್ ಪಾಯಿಂಟ್‌ಗಳ ಅಂತರದಲ್ಲಿ ಸೂರ್ಯನಿಗಿಂತ ಮುಂದಿದ್ದಾರೆ ಎಂಬುದು ಗಮನಿಸಬೇಕಾದ ವಿಚಾರ. ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಮತ್ತೊಂದು ಉತ್ತಮ ಇನ್ನಿಂಗ್ಸ್ ಆಡಿದರೆ ನಂ.1 ಸ್ಥಾನಕ್ಕೆ ಸುಲಭವಾಗಿ ಏರಲಿದ್ದಾರೆ.
ICC ಇತ್ತೀಚಿನ T20 ಶ್ರೇಯಾಂಕ
ಇತ್ತೀಚಿನ ಐಸಿಸಿ ಟಿ20 ಶ್ರೇಯಾಂಕದ ಪ್ರಕಾರ, ಬಾಬರ್ ಅಜಮ್ 818 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ 816 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಮೊಹಮ್ಮದ್ ರಿಜ್ವಾನ್ 794 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಐಡೆನ್ ಮಾರ್ಕ್ರಾಮ್ ನಾಲ್ಕನೇ ಸ್ಥಾನದಲ್ಲಿದ್ದಾರೆ ಮತ್ತು ಡೇವಿಡ್ ಮಲಾನ್ ಐದನೇ ಸ್ಥಾನದಲ್ಲಿದ್ದಾರೆ.
This elegant knock from @surya_14kumar won India the game. Spectacular batting!
Watch all the action from the India tour of West Indies LIVE, exclusively on #FanCode ? https://t.co/RCdQk12YsM@BCCI @windiescricket #WIvIND #INDvsWIonFanCode #INDvsWI pic.twitter.com/Z7XHntlaFS
— FanCode (@FanCode) August 2, 2022
ಅಮೋಘ ಇನಿಂಗ್ಸ್ ಆಡಿದ ಸೂರ್ಯಕುಮಾರ್
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20ಯಲ್ಲಿ ಸೂರ್ಯಕುಮಾರ್ ಯಾದವ್ ಅಮೋಘ ಇನ್ನಿಂಗ್ಸ್ ಆಡಿದ್ದರು. ಈ ಆಟಗಾರ 44 ಎಸೆತಗಳಲ್ಲಿ 76 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಸೂರ್ಯಕುಮಾರ್ ಅವರ ಅದ್ಭುತ ಇನ್ನಿಂಗ್ಸ್‌ನಿಂದಾಗಿ ಅವರ T20 ಶ್ರೇಯಾಂಕವು ಜಿಗಿದಿದೆ. ವೆಸ್ಟ್ ಇಂಡೀಸ್ ಸರಣಿಯಲ್ಲಿ ಸೂರ್ಯಕುಮಾರ್ ಓಪನರ್ ಪಾತ್ರದಲ್ಲಿದ್ದಾರೆ ಆಡುತ್ತಿದ್ದಾರೆ. ಇದರ ಹೊರತಾಗಿಯೂ, ಅವರು 4 ಸಿಕ್ಸರ್ ಮತ್ತು 8 ಬೌಂಡರಿಗಳ ಅಬ್ಬರದ ಇನ್ನಿಂಗ್ಸ್ ಆಡಿದರು. ವೆಸ್ಟ್ ಇಂಡೀಸ್ ವಿರುದ್ಧ ಭಾರತ ಇನ್ನೂ ಎರಡು ಟಿ 20 ಪಂದ್ಯಗಳನ್ನು ಆಡಬೇಕಾಗಿದೆ. ಸೂರ್ಯಕುಮಾರ್ ಯಾದವ್ ಈ ಎರಡೂ ಪಂದ್ಯಗಳಲ್ಲಿ ದೊಡ್ಡ ಇನ್ನಿಂಗ್ಸ್ ಆಡಿದರೆ, ಅವರು ನಂಬರ್ 1 ಸ್ಥಾನಕ್ಕೆ ಬರುವ ಎಲ್ಲಾ ಸಾಧ್ಯತೆಗಳಿವೆ. ಏಕೆಂದರೆ ಬಾಬರ್ ಅಜಮ್ ಈಗ ನೇರವಾಗಿ ಏಷ್ಯಾ ಕಪ್‌ನಲ್ಲಿ T20 ಕ್ರಿಕೆಟ್ ಆಡಬೇಕಾಗುತ್ತದೆ. ಇದು ಯುಎಇಯಲ್ಲಿ ಆಗಸ್ಟ್ 27 ರಿಂದ ಪ್ರಾರಂಭವಾಗುತ್ತದೆ. ಸದ್ಯ ಪಾಕಿಸ್ತಾನ ತಂಡ ನೆದರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಇದಾದ ಬಳಿಕ ಆಗಸ್ಟ್ 28ರಂದು ಏಷ್ಯಾಕಪ್ನಲ್ಲಿ ಪಾಕಿಸ್ತಾನ ತಂಡ ಭಾರತಕ್ಕೆ ಮುಖಾಮುಖಿಯಾಗಲಿದೆ. ಅಂದರೆ, ಬಾಬರ್ ಆಜಮ್ ಏಷ್ಯಾಕಪ್‌ಗೆ ಪ್ರವೇಶಿಸಿದಾಗ, ಅವರು ನಂಬರ್ 1 ಸ್ಥಾನದ ಕುರ್ಚಿಯನ್ನು ಕಳೆದುಕೊಂಡಿರಬಹುದು. ಅದೇ ಸಮಯದಲ್ಲಿ, ಸೂರ್ಯಕುಮಾರ್ ನಂಬರ್ 1 ಟಿ20 ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯಬಹುದು.
Published On - 2:43 pm, Wed, 3 August 22