ಪ್ರಸ್ತುತ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್‌ನಲ್ಲಿ (T20 Blast ) ನಾಟಿಂಗ್‌ಹ್ಯಾಮ್‌ಶೈರ್ ಪರ ಆಡುತ್ತಿರುವ ಪಾಕಿಸ್ತಾನ ತಂಡದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ (Shaheen Shah Afridi ) ತನ್ನ ಮೊದಲ ಓವರ್‌ನಲ್ಲಿ 4 ವಿಕೆಟ್ ಉರುಳಿಸಿ ದಾಖಲೆ ಬರೆದಿದ್ದಾರೆ. ಬರ್ಮಿಂಗ್ಹ್ಯಾಮ್ ಬೇರ್ಸ್ ತಂಡದ ವಿರುದ್ಧ (Nottinghamshire vs Birmingham bears) ನಡೆದ ಈ ಪಂದ್ಯದಲ್ಲಿ ಶಾಹೀನ್ ಶಾ ಅಫ್ರಿದಿ ತನ್ನ ಮೊದಲ ಓವರ್‌ನಲ್ಲೇ 4 ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗಟ್ಟಿದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಮೊದಲ ಓವರ್‌ನಲ್ಲಿ 4 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬರ್ಮಿಂಗ್ಹ್ಯಾಮ್ ಬೇರ್ಸ್ ತಂಡದ ನಾಯಕ ಅಲೆಕ್ಸ್, ಕ್ರಿಸ್ ಬೆಂಜಮಿನ್, ಡೇನ್ ಮುಸ್ಲಿ ಮತ್ತು ಎಡ್ವರ್ಡ್ ಜಾರ್ಜ್, ಅಫ್ರಿದಿಗೆ ಬಲಿಯಾದ ಬ್ಯಾಟರ್ಗಳಾಗಿದ್ದಾರೆ. ಆದರೆ ಇದರ ಹೊರತಾಗಿಯೂ, ಅಫ್ರಿದಿಗೆ ಹ್ಯಾಟ್ರಿಕ್ ವಿಕೆಟ್ ಪಡೆಯಲು ಸಾಧಿಸಲು ಸಾಧ್ಯವಾಗಲಿಲ್ಲ. ಜೊತೆಗೆ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಾಟಿಂಗ್‌ಹ್ಯಾಮ್‌ಶೈರ್ ತಂಡ ನಿಗದಿತ 20 ಓವರ್ಗಳಲ್ಲಿ 168 ರನ್ ಗಳಿಸಿತು. ನಾಟಿಂಗ್ ಹ್ಯಾಮ್ ಶೈರ್ ಪರ ಟಾಮ್ ಮೂರ್ಸ್ 46 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಿತ ಗರಿಷ್ಠ 73 ರನ್ ಬಾರಿಸಿದರು. ಅವರನ್ನು ಹೊರತುಪಡಿಸಿ ಜೇಮ್ಸ್ 27 ಎಸೆತಗಳಲ್ಲಿ 37 ರನ್ ಸಿಡಿಸಿದರು. ಬರ್ಮಿಂಗ್ಹ್ಯಾಮ್ ಬೇರ್ಸ್ ತಂಡದ ಪರ ಬೌಲಿಂಗ್ನಲ್ಲಿ ಹಸನ್ ಅಲಿ ಮತ್ತು ಜಾಕ್ ಲಿಂಟಾಟ್ ತಲಾ 3 ವಿಕೆಟ್ ಪಡೆದರು.
ODI World Cup 2023: ವಿಶ್ವಕಪ್‌ನಿಂದ ಪಾಕಿಸ್ತಾನ ಹಿಂದೆ ಸರಿದರೆ ಐಸಿಸಿ ಮುಂದಿರುವ ಆಯ್ಕೆಗಳೇನು? ಇಲ್ಲಿದೆ ವಿವರ
ಇನ್ನು 169 ರನ್‌ಗಳ ಗುರಿ ಬೆನ್ನಟ್ಟಿದ್ದ ಬರ್ಮಿಂಗ್ಹ್ಯಾಮ್ ಬೇರ್ಸ್ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ಶಾಹೀನ್ ಅವರ ವಿಧ್ವಂಸಕ ಬೌಲಿಂಗ್‌ನ ಮುಂದೆ ಬರ್ಮಿಂಗ್ಹ್ಯಾಮ್ ಬೇರ್ಸ್ ತಂಡ ಕೇವಲ 7 ರನ್‌ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ತಂಡದ 3 ಬ್ಯಾಟ್ಸ್‌ಮನ್‌ಗಳು ಗೋಲ್ಡನ್ ಡಕ್ ಆದರು. ಅಂತಹ ಕೆಟ್ಟ ಆರಂಭದ ಹೊರತಾಗಿಯೂ, ಬರ್ಮಿಂಗ್ಹ್ಯಾಮ್ ತಂಡ ಇನ್ನೂ 5 ಎಸೆತಗಳ ಬಾಕಿ ಇರುವಂತೆ 2 ವಿಕೆಟ್ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
Shaheen Shah Afridi – First Over Masterclass ?#Blast23 | #CricketTwitterpic.twitter.com/OG9BSAIOOU
— Grassroots Cricket (@grassrootscric) June 30, 2023
ಮೊದಲ ಓವರ್ ಬೌಲ್ ಮಾಡಿದ ಶಾಹೀನ್, ಅಲೆಕ್ಸ್, ಕ್ರಿಸ್ ಮತ್ತು ಎಡ್ವರ್ಡ್ ಅವರನ್ನು ಗೋಲ್ಡನ್ ಡಕ್ ಮಾಡಿದರು. ಡೇನ್ ಮೂಸ್ಲಿ ಮಾತ್ರ ಒಂದು ರನ್ ಕಲೆಹಾಕುವಲ್ಲಿ ಯಶಸ್ವಿಯಾದರು. ಮೊದಲ ಓವರ್ ಅನ್ನು ವೈಡ್‌ನೊಂದಿಗೆ ಪ್ರಾರಂಭಿಸಿದ ಶಾಹೀನ್, ಈ ವೈಡ್ ಬಾಲ್‌ನಲ್ಲಿ 5 ರನ್ ನೀಡಿದರು. ಇದಾದ ನಂತರ ಅಲೆಕ್ಸ್ ಮತ್ತು ಕ್ರಿಸ್ ಮುಂದಿನ 2 ಎಸೆತಗಳಲ್ಲಿ ಔಟಾದರು. ಈ ವೇಳೆ ಶಾಹೀನ್ಗೆ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶವಿತ್ತು. ಆದರೆ ಮುಂದಿನ 2 ಎಸೆತಗಳಲ್ಲಿ 2 ರನ್ ನೀಡಿದರು. ಬಳಿಕ ಓವರ್‌ನ ಕೊನೆಯ 2 ಎಸೆತಗಳಲ್ಲಿ ಮುಸ್ಲಿ ಮತ್ತು ಎಡ್ವರ್ಡ್‌ಗಳನ್ನು ಬೇಟೆಯಾಡಿದ ಶಾಹೀನ್, ಎರಡನೇ ಬಾರಿಗೆ ಹ್ಯಾಟ್ರಿಕ್‌ಗೆ ಅವಕಾಶ ಪಡೆದರು. ಆದರೆ ತಮ್ಮ ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಶಾಹೀನ್ಗೆ ವಿಕೆಟ್ ಉರುಳಿಸಲು ಸಾಧ್ಯವಾಗಲಿಲ್ಲ.
ಒಂದೆಡೆ ವಿಕೆಟ್ ಉರುಳುತ್ತಿದ್ದರೂ, ಇನ್ನೊಂದು ತುದಿಯಲ್ಲಿ ಆರಂಭಿಕ ಆಟಗಾರ ರಾಬ್ ಯೇಟ್ಸ್ ಅಬ್ಬರದ ಬ್ಯಾಟಿಂಗ್ ಮಾಡಿದರು. ಕೇವಲ 46 ಎಸೆತಗಳಲ್ಲಿ 65 ರನ್ ಬಾರಿಸಿದ ರಾಬ್ಗೆ ಗ್ಲೆನ್ ಮ್ಯಾಕ್ಸ್‌ವೆಲ್ , ಜಾಕೋಬ್ ಬೆಥಾಲ್, ಲಿಂಟೊಟ್ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ ಬರ್ಮಿಂಗ್ಹ್ಯಾಮ್ ತಂಡ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ತಂಡದ ಪರ ರಾಬ್ ಹೊರತುಪಡಿಸಿ ಮ್ಯಾಕ್ಸ್‌ವೆಲ್ 19 ರನ್, ಬೆಥೆಲ್ 27 ರನ್ ಮತ್ತು ಲಿಂಟಾಟ್ ಔಟಾಗದೆ 27 ರನ್ ಸಿಡಿಸಿದರು. ಶಾಹೀನ್ 4 ಓವರ್ ಬೌಲರ್ ಮಾಡಿ 29 ರನ್ ನೀಡಿ 4 ವಿಕೆಟ್ ಪಡೆದರು. ಜಾಕ್ ಬಾಲ್ 3 ವಿಕೆಟ್ ಪಡೆದರು.
ಟಿ20 ಲೀಗ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಶಾಹೀನ್ ಶಾ ಅಫ್ರಿದಿ ತಮ್ಮ ಇಂದಿನ ಫಾರ್ಮ್ ಅನ್ನು ಹೀಗೆ ಮುಂದುವರೆಸಿದರೆ ಟೀಂ ಇಂಡಿಯಾಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಲಿದ್ದಾರೆ. ಏಕೆಂದರೆ ಇದೇ ಆಫ್ರಿದಿ ಟಿ20 ವಿಶ್ವಕಪ್ನಲ್ಲಿ ಭಾರತದ ಬ್ಯಾಟಿಂಗ್ ಬೆನ್ನೇಲುಬು ಮುರಿದು ತಂಡವನ್ನು ಸೋಲಿನ ದವಡೆಗೆ ತಳ್ಳಿದ್ದರು. ಇನ್ನು ಕೆಲವೇ ದಿನಗಳಲ್ಲಿ ಪಾಕ್ ವಿರುದ್ಧ ಏಷ್ಯಾಕಪ್ ಆಡಲಿರುವ ಭಾರತ, ಆ ಬಳಿಕ ವಿಶ್ವಕಪ್ ಕೂಡ ಆಡಬೇಕಾಗಿದೆ. ಹೀಗಾಗಿ ಪಾಕ್ ವೇಗಿಯನ್ನು ಎದುರಿಸುವ ತಂತ್ರವನ್ನು ಟೀಂ ಇಂಡಿಯಾ ಕರಗತ ಮಾಡಿಕೊಳ್ಳಬೇಕಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:17 am, Sat, 1 July 23