AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MPL Final 2023: ರತ್ನಗಿರಿ ಜೆಟ್ಸ್ ತಂಡಕ್ಕೆ ಚಾಂಪಿಯನ್ ಕಿರೀಟ; ಕೇದಾರ್ ಜಾಧವ್ ತಂಡ ರನ್ನರ್ ಅಪ್

MPL Final 2023: ಮಹಾರಾಷ್ಟ್ರದಲ್ಲಿ ನಡೆದ ಚೊಚ್ಚಲ ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನ ಚಾಂಪಿಯನ್ ಆಗಿ ರತ್ನಗಿರಿ ಜೆಟ್ಸ್ ತಂಡವು ಹೊರಹೊಮ್ಮಿದೆ.

ಪೃಥ್ವಿಶಂಕರ
|

Updated on: Jul 01, 2023 | 11:43 AM

Share
ಮಹಾರಾಷ್ಟ್ರದಲ್ಲಿ ನಡೆದ ಚೊಚ್ಚಲ ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನ ಚಾಂಪಿಯನ್ ಆಗಿ ರತ್ನಗಿರಿ ಜೆಟ್ಸ್ ತಂಡವು ಹೊರಹೊಮ್ಮಿದೆ. ರತ್ನಗಿರಿ ಜೆಟ್ಸ್ ಮತ್ತು ಕೊಲ್ಹಾಪುರ ಟಸ್ಕರ್ಸ್ ವಿರುದ್ಧ ಫೈನಲ್ ಪಂದ್ಯ ನಡೆದಿತ್ತು. ಆದರೆ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಅಂತಿಮವಾಗಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ರತ್ನಗಿರಿ ಜೆಟ್ಸ್ ತಂಡಕ್ಕೆ ಚಾಂಪಿಯನ್ಸ್ ಪಟ್ಟ ದೊರಕಿತು.

1 / 9
ಫೈನಲ್ ಪಂದ್ಯದಲ್ಲಿ ಕೊಲ್ಹಾಪುರ ಟಸ್ಕರ್ಸ್ ತಂಡದ ನಾಯಕತ್ವವನ್ನು ಅನುಭವಿ ಕೇದಾರ್ ಜಾಧವ್ ವಹಿಸಿದ್ದರೆ, ಅಜೀಂ ಕಾಜಿ ರತ್ನಗಿರಿ ಜೆಟ್ಸ್ ತಂಡವನ್ನು ಮುನ್ನಡೆಸಿದ್ದರು. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜಿಸಲಾಗಿತ್ತು. ಜೂನ್ 29 ರ ಗುರುವಾರ ಮಳೆಯಿಂದಾಗಿ, ಪಂದ್ಯವನ್ನು ಮೀಸಲು ದಿನದಂದು ಅಂದರೆ ಜೂನ್ 30 ರಂದು ಆಡಲು ನಿರ್ಧರಿಸಲಾಯಿತು.

2 / 9
ಆದರೆ ಕಾಯ್ದಿರಿಸಿದ ದಿನವೂ ಮಳೆಯಿಂದಾಗಿ ಪಂದ್ಯ ಪೂರ್ಣಗೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ರತ್ನಗಿರಿ ತಂಡವನ್ನು ವಿಜೇತ ಎಂದು ಘೋಷಿಸಲಾಯಿತು. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಿದ್ದರಿಂದ ರತ್ನಗಿರಿ ಜೆಟ್ಸ್ ತಂಡಕ್ಕೆ ಚಾಂಪಿಯನ್ ಕಿರೀಟ ಒಲಿಯಿತು.

3 / 9
ಮೀಸಲು ದಿನದಂದು ಮಳೆಯಿಂದಾಗಿ ಟಾಸ್ ತಡವಾಯಿತು. ಆದರೆ ಸ್ವಲ್ಪ ಸಮಯದ ನಂತರ ನಡೆದ ಟಾಸ್ ಗೆದ್ದ ರತ್ನಗಿರಿ ಜೆಟ್ಸ್ ತಂಡ ಕೊಲ್ಲಾಪುರ ಟಸ್ಕರ್ಸ್ ತಂಡವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು. ಮಳೆ ಪೀಡಿತ ಈ ಪಂದ್ಯದಲ್ಲಿ ಕೊಲ್ಹಾಪುರ ತಂಡ ಮಳೆಯಿಂದಾಗಿ ಪಂದ್ಯ ನಿಲ್ಲುವ ವೇಳೆಗೆ 16 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿತು.

4 / 9
ತಂಡದ ಪರ ನಾಯಕ ಕೇದಾರ್ ಜಾಧವ್ ಮಳೆ ನಿಲ್ಲುವ ವೇಳೆಗೆ ಗರಿಷ್ಠ 32 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಆದರೆ 16ನೇ ಓವರ್‌ನ ನಂತರ ಮಳೆ ಪ್ರವೇಶಿಸಿತು. ಆ ನಂತರ ಎಲ್ಲರೂ ಮಳೆ ನಿಲ್ಲುವುದನ್ನೇ ಕಾಯುತ್ತಿದ್ದರು. 3 ಗಂಟೆ ಕಾಯ್ದ ಬಳಿಕವೂ ಮಳೆ ನಿಲ್ಲಲಿಲ್ಲ. ಆದ್ದರಿಂದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಕಾರಣ ರತ್ನಗಿರಿ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

5 / 9
ಇನ್ನು ಚೊಚ್ಚಲ ಚಾಂಪಿಯನ್ ಕಿರೀಟ ತೊಟ್ಟ ರತ್ನಗಿರಿ ಜೆಟ್ಸ್ ತಂಡಕ್ಕೆ 50 ಲಕ್ಷ ರೂಪಾಯಿ ಬಹುಮಾನ ಬಾಚಿಕೊಂಡಿತು.

6 / 9
 ರನ್ನರ್ ಅಪ್ ಕೊಲ್ಹಾಪುರ ಟಸ್ಕರ್ಸ್ ತಂಡಕ್ಕೆ 25 ಲಕ್ಷ ರೂ. ಬಹುಮಾನ ಸಿಕ್ಕಿತು.

7 / 9
ರನ್ನರ್ ಅಪ್ ತಂಡದ ಅಂಕಿತ್ ಬಾವ್ನೆ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದರಿಂದ ಅಂಕಿತ್ ಆರೆಂಜ್ ಕ್ಯಾಪ್ ಗೆದ್ದರು.

8 / 9
ಹಾಗೆಯೇ ಪುಣೇರಿ ಬಪ್ಪಾ ತಂಡದ ಸಚಿನ್ ಭೋಸ್ಲೆ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೆದ್ದರು.

9 / 9
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್

ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ

ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್

ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?

ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ

ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ

IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ

ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ

ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ

ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!