T20 World Cup: ಭಾರತ ವಿರುದ್ಧದ ಪಂದ್ಯಕ್ಕೆ ಪಾಕ್ ಪರ ಕಣಕ್ಕಿಳಿಯುವ 4 ಬೌಲರ್‌ಗಳನ್ನು ಹೆಸರಿಸಿದ ನಾಯಕ ಬಾಬರ್
T20 World Cup: ಬಾಬರ್ ಅಜಮ್ ಭಾರತದ ವಿರುದ್ಧ 4 ವೇಗದ ಬೌಲರ್‌ಗಳ ಮೇಲೆ ಪಣತೊಟ್ಟಿದ್ದಾರೆ. ಅದರಲ್ಲಿ ಇಬ್ಬರು ಎಡಗೈ ಮತ್ತು ಇಬ್ಬರು ಬಲಗೈ ಬೌಲರ್‌ಗಳು.
ಭಾರತ ಮತ್ತು ಪಾಕಿಸ್ತಾನ ತಮ್ಮ ಅಭಿಯಾನವನ್ನು ಅಕ್ಟೋಬರ್ 24 ರಿಂದ ಆರಂಭಿಸಲಿದೆ. ಈ ಎರಡು ಸಾಂಪ್ರದಾಯಿಕ ಎದುರಾಳಿ ತಂಡಗಳ ಮೊದಲ ಪಂದ್ಯವು ಸಖತ್ ಹೈಪ್ ಕ್ರಿಯೆಟ್ ಮಾಡಿದೆ. ಟಿ 20 ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ಭಾರತ ಪಾಕಿಸ್ತಾನದ ವಿರುದ್ಧ ಎಂದೂ ಸೋತಿಲ್ಲ. ಆದ್ದರಿಂದ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಭಾರತ ವಿರುದ್ಧ ಗೆಲ್ಲಲು ಇನ್ನಿಲ್ಲದ ತಂತ್ರ ಹೂಡುತ್ತಿದ್ದಾರೆ. ಅವರ ಪ್ರಕಾರ, ಪಾಕಿಸ್ತಾನ ತಂಡವು ಯುಎಇ ಪಿಚ್‌ನ ಮನಸ್ಥಿತಿಯನ್ನು ಚೆನ್ನಾಗಿ ತಿಳಿದಿದೆ. ಬಹುಶಃ ಈ ಕಾರಣದಿಂದಲೇ ಅವರು ಈಗಾಗಲೇ ಭಾರತದ ವಿರುದ್ಧ ತಮ್ಮ ಬೌಲಿಂಗ್ ತಂಡವನ್ನು ಸರಿಪಡಿಸಿದ್ದೇವೆ ಎಂದಿದ್ದಾರೆ. ಜೊತೆಗೆ ಭಾರತ ವಿರುದ್ಧ ಆಡುವ ಪಾಕಿಸ್ತಾನದ 4 ಬೌಲರ್‌ಗಳನ್ನು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಹೆಸರಿಸಿದ್ದಾರೆ.
ಈ 4 ಪಾಕಿಸ್ತಾನಿ ಬೌಲರ್‌ಗಳು ಭಾರತದ ವಿರುದ್ಧ ಆಡಲಿದ್ದಾರೆ ಬಾಬರ್ ಅಜಮ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾರತದ ವಿರುದ್ಧ ಪಂದ್ಯದಲ್ಲಿ ಆಡುವ 4 ಬೌಲರ್‌ಗಳನ್ನು ಹೆಸರಿಸಿದರು – ಶಾಹೀನ್ ಅಫ್ರಿದಿ, ಹಸನ್ ಅಲಿ, ಹ್ಯಾರಿಸ್ ರೌಫ್ ಮತ್ತು ಇಮಾದ್ ವಾಸಿಮ್. ಈ ನಾಲ್ಕು ಬೌಲರ್‌ಗಳಿಗೆ ಯುಎಇ ಪಿಚ್‌ಗಳಲ್ಲಿ ಆಡಿದ ಅನುಭವವಿದೆ, ಆದರೆ ಭಾರತದ ವಿರುದ್ಧ ಟಿ 20 ಆಡಿದ ಅನುಭವ ಯಾರಿಗೂ ಇಲ್ಲ. ಈ ನಾಲ್ಕು ಬೌಲರ್‌ಗಳು ಒಟ್ಟಾಗಿ ಭಾರತದ ವಿರುದ್ಧ 9 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ, ಅದರಲ್ಲಿ ಅವರು 5 ವಿಕೆಟ್ ಗಳಿಸಿದ್ದಾರೆ. ಆದರೆ, ಈ ಎಲ್ಲಾ ಪಂದ್ಯಗಳು ಏಕದಿನ ಪಂದ್ಯಗಳಾಗಿವೆ. ಅದರಲ್ಲಿಯೂ ಒಬ್ಬ ಏಕೈಕ ಬೌಲರ್ ಹಸನ್ ಅಲಿ 5 ಏಕದಿನ ಪಂದ್ಯಗಳಲ್ಲಿ ಎಲ್ಲಾ 5 ವಿಕೆಟ್ ಪಡೆದಿದ್ದಾರೆ. ಹ್ಯಾರಿಸ್ ರೌಫ್ ಭಾರತದ ವಿರುದ್ಧ ಯಾವುದೇ ಪಂದ್ಯವನ್ನು ಆಡಿಲ್ಲ. ಮತ್ತೊಂದೆಡೆ, ಶಾಹೀನ್ 1 ಏಕದಿನ ಆಡಿದ ಅನುಭವ ಮತ್ತು ಇಮಾದ್ ವಾಸೀಂ ಭಾರತ ವಿರುದ್ಧ 3 ಏಕದಿನ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.
ಇಬ್ಬರು ಎಡಗೈ ಬೌಲರ್‌ಗಳು ಇಬ್ಬರು ಬಲಗೈ ಬೌಲರ್‌ಗಳು ಬಾಬರ್ ಅಜಮ್ ಭಾರತದ ವಿರುದ್ಧ 4 ವೇಗದ ಬೌಲರ್‌ಗಳ ಮೇಲೆ ಪಣತೊಟ್ಟಿದ್ದಾರೆ. ಅದರಲ್ಲಿ 2 ಎಡಗೈ ಮತ್ತು 2 ಬಲಗೈ ಬೌಲರ್‌ಗಳು. ಯುಎಇ ಪಿಚ್‌ಗಳಲ್ಲಿ ವಿಕೆಟ್ ಪಡೆದ ಅನುಭವ ಹೊಂದಿರುವ ಪಾಕಿಸ್ತಾನದ ಬೌಲರ್‌ಗಳು ಭಾರತದ ವಿರುದ್ಧ ಮೊದಲ ಟಿ 20 ಆಡಲು ಬಂದಾಗ ಏನು ಮಾಡುತ್ತಾರೆ ಎಂಬುದನ್ನು ನಾವು ಕಾದು ನೋಡಬೇಕು. ಅಂದಹಾಗೆ, ಐಪಿಎಲ್ 2021 ರ ಕಾರಣದಿಂದಾಗಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಯುಎಇಯ ಪಿಚ್‌ಗಳ ಬಗ್ಗೆ ಚೆನ್ನಾಗಿ ಅರಿತುಕೊಂಡಿರುವುದು ಟೀಂ ಇಂಡಿಯಾಕ್ಕೆ ಪ್ಲಸ್ ಪಾಯಿಂಟ್ ಆಗಿದೆ.