West Indies vs England: ಇಂದಿನಿಂದ ಸೂಪರ್ 12 ಹಂತ: ಚಾಂಪಿಯನ್ ವೆಸ್ಟ್​ ಇಂಡೀಸ್​ ಹಾಗೂ ಇಂಗ್ಲೆಂಡ್ ಮುಖಾಮುಖಿ

T20 World Cup 2021 ENG vs WI Preview: ಉಭಯ ತಂಡಗಳು ಈವರೆಗೆ ಟಿ20 ಪಂದ್ಯಗಳಲ್ಲಿ 18 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ವೆಸ್ಟ್ ಇಂಡೀಸ್ 11 ಪಂದ್ಯಗಳಲ್ಲಿ ಗೆದ್ದರೆ, ಇಂಗ್ಲೆಂಡ್ 7 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

West Indies vs England: ಇಂದಿನಿಂದ ಸೂಪರ್ 12 ಹಂತ: ಚಾಂಪಿಯನ್ ವೆಸ್ಟ್​ ಇಂಡೀಸ್​ ಹಾಗೂ ಇಂಗ್ಲೆಂಡ್ ಮುಖಾಮುಖಿ
West Indies vs England
Follow us
TV9 Web
| Updated By: Vinay Bhat

Updated on: Oct 23, 2021 | 8:18 AM

ಆರನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC T20 World Cup) ಇಂದಿನಿಂದ ಸೂಪರ್ 12 ಹಂತದ (Super 12) ಪಂದ್ಯಗಳು ಶುರುವಾಗಲಿದೆ. ಮಧ್ಯಾಹ್ನ 3:30ಕ್ಕೆ ಆರಂಭವಾಗಲಿರುವ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ (AUS vs SA) ಮುಖಾಮುಖಿಯಾದರೆ, ಇಂದಿನ ಎರಡನೇ ಪಂದ್ಯದಲ್ಲಿ ಚಾಂಪಿಯನ್ ವೆಸ್ಟ್​ ಇಂಡೀಸ್ ತಂಡ ಇಂಗ್ಲೆಂಡ್​ಗೆ (West Indies vs England) ಸವಾಲೊಡ್ಡಲಿದೆ. ಬಲಿಷ್ಠ ದಿಗ್ಗಜರಿಂದ ಕೂಡಿರುವ ಉಭಯ ತಂಡಗಳ ಕಾದಾಟಕ್ಕೆ ದುಬೈಯ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸಾಕ್ಷಿಯಾಗಲಿದೆ. ವಿಂಡೀಸ್​ಗೆ ಕೀರೊನ್ ಪೊಲಾರ್ಡ್ (Kieron Pollard) ನಾಯಕನಾದರೆ, ಇಂಗ್ಲೆಂಡ್​ ತಂಡವನ್ನು ಇಯಾನ್ ಮಾರ್ಗನ್ (Eion Morgan) ಮುನ್ನಡೆಸುತ್ತಿದ್ದಾರೆ.

ಹಾಲಿ ಚಾಂಪಿಯನ್ ಆಗಿರುವ ವೆಸ್ಟ್ ಇಂಡೀಸ್ ತಂಡ ಅಂದಿನ ಚಾರ್ಮ್ ಹೊಂದಿಲ್ಲ ಎಂಬುದು ಅಭ್ಯಾಸ ಪಂದ್ಯಗಳಲ್ಲಿ ಸಾಬೀತಾಗಿದೆ. ಪಾಕಿಸ್ಥಾನ ವಿರುದ್ಧವಷ್ಟೇ ಅಲ್ಲ, ಅಫ್ಘಾನಿಸ್ಥಾನದ ವಿರುದ್ಧವೂ ಸೋಲನುಭವಿಸಿತ್ತು. ಪಾಕ್‌ ಎದುರು ಕೇವಲ 7ಕ್ಕೆ 130 ರನ್‌ ಮಾಡಿದರೆ, ಅಫ್ಘಾನ್‌ ವಿರುದ್ಧ 189 ರನ್‌ ಚೇಸ್‌ ಮಾಡುವ ಹಾದಿ ಯಲ್ಲಿ 5ಕ್ಕೆ 133 ರನ್‌ ಮಾಡಿತ್ತು. ಕ್ರಿಸ್ ಗೇಲ್, ಡ್ವೇನ್ ಬ್ರಾವೊ ಮತ್ತು ಆಯಂಡ್ರೆ ರಸೆಲ್​ರಂತಹ ದಿಗ್ಗಜ ಆಟಗಾರರು ತಂಡದಲ್ಲಿದ್ದರೂ ಯಾರೂ ಫಾರ್ಮ್​ನಲ್ಲಿಲ್ಲ.

ಕೆರೆಬಿಯನ್ ಪ್ರೀಮಿಯರ್ ಲೀಗ್‌ ಟೂರ್ನಿ, ಐಪಿಎಲ್​ನಲ್ಲೂ ಗೇಲ್ ಬ್ಯಾಟ್ ಸದ್ದು ಮಾಡಲಿಲ್ಲ. ಬೌಲಿಂಗ್ ವಿಭಾಗವೂ ಅಷ್ಟೇನೂ ಸಬಲವಾಗಿಲ್ಲ. ರಸೆಲ್ ಐಪಿಎಲ್​ನಲ್ಲಿ ಫಿಟ್ ಆಗಿರಲಿಲ್ಲ. ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರ ನೋಡಬೇಕಿದೆ. 2016ರಲ್ಲಿ ಡ್ಯಾರೆನ್ ಸಾಮಿ ನೇತೃತ್ವದ ತಂಡವು ಪ್ರಶಸ್ತಿ ಗೆದ್ದಿತ್ತು.

ಇತ್ತ ವಿಂಡೀಸ್ ತಂಡಕ್ಕೆ ಹೋಲಿಸಿದರೆ ಇಂಗ್ಲೆಂಡ್ ಬಲಿಷ್ಠವಾಗಿದೆ. ನಾಯಕ ಮಾರ್ಗನ್ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಂಡರೆ ತಡೆಯುವುದು ಕಷ್ಟ. ಜಾನಿ ಬೆಸ್ಟೊ, ಮೋಯಿನ್ ಅಲಿ, ಜೊಸ್ ಬಟ್ಲರ್, ಲಿಯಾಮ್ ಲಿವಿಂಗ್‌ ಸ್ಟೋನ್, ಜೇಸನ್ ರಾಯ್ ಅವರು ರನ್‌ಗಳ ಹೊಳೆ ಹರಿಸಬಲ್ಲರು. ಕ್ರಿಸ್ ವೋಕ್ಸ್ ಮತ್ತು ಮಾರ್ಕ್ ವುಡ್ ದಾಳಿ ರಂಗೇರಬಹುದು. ಆದರೆ, ಪ್ರಮುಖ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮತ್ತು ವೇಗಿ ಜೋಫ್ರಾ ಆರ್ಚರ್ ಅವರ ಅನುಪಸ್ಥಿತಿ ತಂಡವನ್ನು ಕಾಡುವ ಸಾಧ್ಯತೆ ಇದೆ.

ಉಭಯ ತಂಡಗಳು ಈವರೆಗೆ ಟಿ20 ಪಂದ್ಯಗಳಲ್ಲಿ 18 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ವೆಸ್ಟ್ ಇಂಡೀಸ್ 11 ಪಂದ್ಯಗಳಲ್ಲಿ ಗೆದ್ದರೆ, ಇಂಗ್ಲೆಂಡ್ 7 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

ಪಂದ್ಯ ಆರಂಭ: ಸಂಜೆ 7:30ಕ್ಕೆ ದುಬೈಯ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ.

Australia vs South Africa: 6ನೇ ಟಿ20 ವಿಶ್ವಕಪ್ ಟೂರ್ನಿಗೆ ಇಂದು ಅಧಿಕೃತ ಚಾಲನೆ: ಮೊದಲ ಪಂದ್ಯದಲ್ಲಿ ಆಸೀಸ್-ಆಫ್ರಿಕಾ ಕಾದಾಟ

(T20 World Cup 2021 ENG vs WI Preview Struggling West Indies Face Tough Battle Against England)

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ