T20 World Cup 2021: ಮೆಂಟರ್ ಧೋನಿ ಮಾಸ್ಟರ್ ಪ್ಲ್ಯಾನ್: ಆರಂಭಿಕರಿಗೆ 3 ಟಾರ್ಗೆಟ್
ಭಾನುವಾರ ನಡೆಯಲಿರುವ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಗೆದ್ದರೆ, ಅಂತಿಮ ಪಂದ್ಯದಲ್ಲಿ ನಮೀಬಿಯಾವನ್ನು ಮಣಿಸಿ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಲಿದೆ.
ಸ್ಕಾಟ್ಲೆಂಡ್ ವಿರುದ್ದ ಭರ್ಜರಿ ಜಯ ಸಾಧಿಸಿ ಟೀಮ್ ಇಂಡಿಯಾ ಸೆಮಿಫೈನಲ್ ಆಸೆಯನ್ನು ಜೀವಂತವರಿಸಿಕೊಂಡಿದೆ. ಈ ಬಾರಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಸ್ಕಾಟ್ಲೆಂಡ್ ಅನ್ನು ಕೇವಲ 85 ರನ್ಗೆ ಆಲೌಟ್ ಮಾಡುವ ಮೂಲಕ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿತು. ಆ ಬಳಿಕ ಟೀಮ್ ಇಂಡಿಯಾ ಟಾರ್ಗೆಟ್ ಮಾಡಿದ್ದು ನೆಟ್ ರನ್ ರೇಟ್ ಅನ್ನು.
ಹೌದು, 86 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ ಭರ್ಜರಿ ಪ್ಲ್ಯಾನ್ ರೂಪಿಸಿ ಕಣಕ್ಕಿಳಿದಿತ್ತು. ಅದರಂತೆ ಟೀಮ್ ಇಂಡಿಯಾ ಮೆಂಟರ್ ಧೋನಿ ಹಾಗೂ ಕೋಚಿಂಗ್ ಸಿಬ್ಬಂದಿ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾಗೆ 3 ಟಾರ್ಗೆಟ್ ನೀಡಿತ್ತು. ಒಂದು ಅಫ್ಘಾನಿಸ್ತಾನ್ ನೆಟ್ ರನ್ ರೇಟ್ ಟಾರ್ಗೆಟ್, ಎರಡನೇಯದು ನ್ಯೂಜಿಲೆಂಡ್ ನೆಟ್ ರನ್ ರೇಟ್ ಟಾರ್ಗೆಟ್. ಮೂರನೇಯದು +1 ನೆಟ್ ರನ್ ರೇಟ್ ಟಾರ್ಗೆಟ್.
ಇಲ್ಲಿ ಅಫ್ಘಾನಿಸ್ತಾನ್ ನೆಟ್ ರನ್ ರೇಟ್ ಅನ್ನು ಹಿಂದಿಕ್ಕಲು ಟೀಮ್ ಇಂಡಿಯಾ 7.1 ಓವರ್ನಲ್ಲಿ ಚೇಸ್ ಮಾಡಬೇಕಿತ್ತು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ನ್ಯೂಜಿಲೆಂಡ್ ರನ್ ರೇಟ್ ಟಾರ್ಗೆಟ್ ಮಾಡಲು ಸೂಚಿಸಲಾಗಿತ್ತು. ಅದರಂತೆ 8.5 ಓವರ್ನಲ್ಲಿ ಚೇಸ್ ಮಾಡಲು ತಿಳಿಸಲಾಗಿತ್ತು. ಇದೂ ಸಾಧ್ಯವಾಗದಿದ್ದರೆ 11.2 ಓವರೊಳಗೆ ಚೇಸ್ ಮಾಡಿ +1 ರನ್ ರೇಟ್ ಪಡೆಯಲು ಸೂಚಿಸಲಾಗಿತ್ತು.
ಈ ಜವಾಬ್ದಾರಿಯನ್ನು ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ 5 ಓವರ್ನಲ್ಲಿ 70 ರನ್ ಬಾರಿಸಿದ್ದರು. ಅಷ್ಟೇ 6.3 ಓವರ್ನಲ್ಲಿ ಗುರಿ ಮುಟ್ಟುವ ಮೂಲಕ ಅಫ್ಘಾನಿಸ್ತಾನ್, ನ್ಯೂಜಿಲೆಂಡ್ ನೆಟ್ ರನ್ ರೇಟ್ ಅನ್ನು ಟೀಮ್ ಇಂಡಿಯಾ ಹಿಂದಿಕ್ಕಿದೆ. ಈ ಮೂಲಕ ಸೆಮಿಫೈನಲ್ ಆಸೆಯನ್ನು ಜೀವಂತವಿರಿಸಿಕೊಂಡಿದೆ.
ಭಾನುವಾರ ನಡೆಯಲಿರುವ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಗೆದ್ದರೆ, ಅಂತಿಮ ಪಂದ್ಯದಲ್ಲಿ ನಮೀಬಿಯಾವನ್ನು ಮಣಿಸಿ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಲಿದೆ.
ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್
ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!
ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ
(T20 World Cup 2021: How India’s Net Run-Rate Improved After Chasing)