T20 World Cup 2021: ಎರಡು ಜೆರ್ಸಿಯಲ್ಲಿ ಕಣಕ್ಕಿಳಿಯಲಿರುವ ಆಸ್ಟ್ರೇಲಿಯಾ: ಕಾರಣವೇನು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Oct 20, 2021 | 7:59 PM

Australia Squad: ಆರೋನ್ ಫಿಂಚ್ (ಕ್ಯಾಪ್ಟನ್), ಆಷ್ಟನ್ ಅಗರ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಝಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್

T20 World Cup 2021: ಎರಡು ಜೆರ್ಸಿಯಲ್ಲಿ ಕಣಕ್ಕಿಳಿಯಲಿರುವ ಆಸ್ಟ್ರೇಲಿಯಾ: ಕಾರಣವೇನು ಗೊತ್ತಾ?
Australia
Follow us on

ಟಿ20 ವಿಶ್ವಕಪ್​ನಲ್ಲಿ (T20 World Cup 2021) ಆಸ್ಟ್ರೇಲಿಯಾ ಕ್ರಿಕೆಟ್ ತಂಡವುಎರಡು ವಿಭಿನ್ನ ಜೆರ್ಸಿಗಳಲ್ಲಿ ಕಾಣಿಸಿಕೊಳ್ಳಲಿದೆ. ತಂಡದ ಜೆರ್ಸಿ ಬೇರೆ ತಂಡಗಳ ಜೆರ್ಸಿಯನ್ನು ಹೋಲುವ ಕಾರಣ ಎರಡು ಜೆರ್ಸಿಯಲ್ಲಿ ಕಣಕ್ಕಿಳಿಯಲು ಐಸಿಸಿ ಸೂಚಿಸಿದೆ. ಹೀಗಾಗಿ ಕ್ರಿಕೆಟ್​ ಆಸ್ಟ್ರೇಲಿಯಾ ಟಿ20 ವಿಶ್ವಕಪ್‌ಗಾಗಿ ಪರ್ಯಾಯ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ತಂಡ 2ನೇ ಜೆರ್ಸಿಯು 2020 ರಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ಟಿ20 ವಿಶ್ವಕಪ್​ನಲ್ಲಿ ಧರಿಸಿದ್ದ ಜೆರ್ಸಿಯನ್ನು ಹೋಲುತ್ತಿರುವುದು ವಿಶೇಷ. ಅದರಂತೆ ಅಕ್ಟೋಬರ್ 23 ರಂದು ಅಬುಧಾಬಿಯಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಪರ್ಯಾಯ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.

Cricket.com.auನ ವರದಿಯ ಪ್ರಕಾರ, ಆಸ್ಟ್ರೇಲಿಯಾದ ಜೆರ್ಸಿಯು ಕೆಲ ಇತರೆ ತಂಡಗಳ ಜೆರ್ಸಿಯನ್ನು ಹೋಲುತ್ತದೆ. ಇದಕ್ಕಾಗಿಯೇ ಐಸಿಸಿ ತಂಡಕ್ಕೆ ಪರ್ಯಾಯ ಕಿಟ್ ನೀಡುವಂತೆ ಕೇಳಿದೆ. ಅದರಂತೆ ಆಸ್ಟ್ರೇಲಿಯಾ 2 ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಇಲ್ಲಿ ಆಸ್ಟ್ರೇಲಿಯಾ ತಂಡವೇ ಜೆರ್ಸಿ ಬದಲಿಸಲು ಮುಖ್ಯ ಕಾರಣ, ಎದುರಾಳಿ ತಂಡಕ್ಕಿಂತ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಶ್ರೀಮಂತರಾಗಿರುವುದು. ಎರಡು ತಂಡಗಳ ಜೆರ್ಸಿಯಲ್ಲಿ ಹೋಲಿಕೆಗಳು ಕಂಡು ಬಂದರೆ ಶ್ರೀಮಂತ ಕ್ರಿಕೆಟ್ ಬೋರ್ಡ್​ಗೆ ಐಸಿಸಿ ಪರ್ಯಾಯ ಜೆರ್ಸಿಯಲ್ಲಿ ಆ ತಂಡದ ವಿರುದ್ದ ಕಣಕ್ಕಿಳಿಯಲು ಸೂಚಿಸುತ್ತದೆ.

ಅದರಂತೆ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಜೆರ್ಸಿಗಳ ಬಣ್ಣಗಳು ಒಂದೇ ಮಾದರಿಯಲ್ಲಿದ್ದು, ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಹಳದಿ ಕಿಟ್ ಧರಿಸುವಂತೆ ಆಸ್ಟ್ರೇಲಿಯಾಕ್ಕೆ ಐಸಿಸಿ ಸೂಚಿಸಿದೆ. ಇದಲ್ಲದೆ ಸೂಪರ್​ 12 ನಲ್ಲಿ ಆಸ್ಟ್ರೇಲಿಯಾ ತಂಡವು ಸ್ಕಾಟ್ಲೆಂಡ್, ನಮೀಬಿಯಾ ಮತ್ತು ಪಪುವಾ ನ್ಯೂಗಿನಿಯಾವನ್ನು ಎದುರಿಸಿದರೆ ತಮ್ಮ ಪರ್ಯಾಯ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ.

2021ರ ಟಿ 20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾ ತಂಡ ಹೀಗಿದೆ:
ಆರೋನ್ ಫಿಂಚ್ (ಕ್ಯಾಪ್ಟನ್), ಆಷ್ಟನ್ ಅಗರ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಝಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ವೇಪ್ಸನ್ , ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಮ್ ಜಂಪಾ.

ಮೀಸಲು ಆಟಗಾರರು: ಡೇನಿಯಲ್ ಕ್ರಿಶ್ಚಿಯನ್, ನಾಥನ್ ಎಲ್ಲಿಸ್, ಡೇನಿಯಲ್ ಸ್ಯಾಮ್ಸ್

ಆಸ್ಟ್ರೇಲಿಯಾ ತಂಡದ ಸಂಪೂರ್ಣ ವೇಳಾಪಟ್ಟಿ:
23 ಅಕ್ಟೋಬರ್ – ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ – ಅಬುಧಾಬಿ
28 ಅಕ್ಟೋಬರ್ – ಆಸ್ಟ್ರೇಲಿಯಾ vs ಕ್ವಾಲಿಫೈಯರ್ 1- ದುಬೈ
30 ಅಕ್ಟೋಬರ್ – ಆಸ್ಟ್ರೇಲಿಯಾ vs ಇಂಗ್ಲೆಂಡ್ – ದುಬೈ
04 ನವೆಂಬರ್ – ಆಸ್ಟ್ರೇಲಿಯಾ vs ಕ್ವಾಲಿಫೈಯರ್ 2- ದುಬೈ
06 ನವೆಂಬರ್ – ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್ – ಅಬುಧಾಬಿ

ಇದನ್ನೂ ಓದಿ: T20 World Cup 2021: ಟಿ20 ಕ್ರಿಕೆಟ್​ನಲ್ಲಿ ನಂಬರ್ 1 ಬ್ಯಾಟರ್ ಯಾರು ಗೊತ್ತಾ​?

ಇದನ್ನೂ ಓದಿ:T20 World Cup 2021: ಟಿ20 ವಿಶ್ವಕಪ್ ಗೆದ್ದವರಿಗೆ ಸಿಗೋ ಹಣವೆಷ್ಟು? ಸೋತರೆ ಸಿಗೋದೆಷ್ಟು? 

ಇದನ್ನೂ ಓದಿ: T20 World Cup Winners: ಟಿ20 ವಿಶ್ವಕಪ್​ನಲ್ಲಿ ಯಾರು ವಿನ್ನರ್, ಯಾರು ರನ್ನರ್: ಇಲ್ಲಿದೆ ಸಂಪೂರ್ಣ ಪಟ್ಟಿ

(T20 World Cup 2021: why Australia will wear two jerseys in the tournament)