T20 World Cup 2021: ಟಿ20 ವಿಶ್ವಕಪ್ನಿಂದ ಟೀಮ್ ಇಂಡಿಯಾ ಔಟ್
Team India Semi Final Chances: ಅಫ್ಘಾನಿಸ್ತಾನ್ ವಿರುದ್ದ ಗೆಲ್ಲುವ ಮೂಲಕ 8 ಅಂಕ ಪಡೆದಿರುವ ನ್ಯೂಜಿಲೆಂಡ್ ಸೆಮಿಫೈನಲ್ಗೆ ಎಂಟ್ರಿಕೊಟ್ಟಿದೆ. ಇದರೊಂದಿಗೆ ಟೀಮ್ ಇಂಡಿಯಾ ಹಾಗೂ ಅಫ್ಘಾನಿಸ್ತಾನ್ ಸೆಮಿಫೈನಲ್ ಆಸೆ ಕೂಡ ಕೊನೆಗೊಂಡಿದೆ.
ಟಿ20 ವಿಶ್ವಕಪ್ನ 40ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ದ ನ್ಯೂಜಿಲೆಂಡ್ (Afghanistan vs New Zealand) ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ನ್ಯೂಜಿಲೆಂಡ್ ತಂಡವು ಸೆಮಿಫೈನಲ್ಗೇರಿದರೆ, ಅತ್ತ ಟೀಮ್ ಇಂಡಿಯಾ (Team India Semi Final) ವಿಶ್ವಕಪ್ನಿಂದ ಹೊರಬಿದ್ದಿದೆ. ಏಕೆಂದರೆ ನ್ಯೂಜಿಲೆಂಡ್ ವಿರುದ್ದ ಅಫ್ಘಾನಿಸ್ತಾನ್ ಗೆದ್ದರೆ ಮಾತ್ರ ಸೆಮಿಫೈನಲ್ಗೇರುವ ಅವಕಾಶ ಟೀಮ್ ಇಂಡಿಯಾಗಿತ್ತು. ಇದೀಗ ನ್ಯೂಜಿಲೆಂಡ್ ಗೆದ್ದು 8 ಅಂಕದೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ಇನ್ನು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ನಮೀಬಿಯಾ (India vs Namibia) ವಿರುದ್ದ ಔಪಚಾರಿಕ ಪಂದ್ಯವಾಡಬೇಕಿದೆ.
ಗ್ರೂಪ್-2ನಿಂದ ಈಗಾಗಲೇ ಪಾಕಿಸ್ತಾನ್ ತಂಡವು ಸೆಮಿಫೈನಲ್ ಪ್ರವೇಶಿಸಿದ್ದು, 2ನೇ ತಂಡವಾಗಿ ನ್ಯೂಜಿಲೆಂಡ್ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಮತ್ತೊಂದೆಡೆ ಗ್ರೂಪ್-1 ರಿಂದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ಪ್ರವೇಶಿಸಿದೆ. 2016 ರ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ದ ಸೋಲುವ ಮೂಲಕ ಹೊರಬಿದ್ದಿತ್ತು. ಆದರೆ ಈ ಬಾರಿ ಭಾರತ ತಂಡವು ಲೀಗ್ ಹಂತದಿಂದಲೇ ಹೊರ ನಡೆದು ನಿರಾಸೆ ಮೂಡಿಸಿದೆ.
ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ದ ಹೀನಾಯ ಸೋಲನುಭವಿಸಿದ್ದ ಭಾರತ, ಬಳಿಕ 2ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ ಮುಗ್ಗರಿಸಿತ್ತು. ಇದಾಗ್ಯೂ ಕಂಬ್ಯಾಕ್ ಮಾಡಿದ ಟೀಮ್ ಇಂಡಿಯಾ ಅಫ್ಘಾನಿಸ್ತಾನ್ ಹಾಗೂ ಸ್ಕಾಟ್ಲೆಂಡ್ ವಿರುದ್ದ ಭರ್ಜರಿ ಜಯ ಸಾಧಿಸಿ ಎಲ್ಲಾ ತಂಡಕ್ಕಿಂತ ಹೆಚ್ಚಿನ ರನ್ ರೇಟ್ ಹೊಂದಿತ್ತು. ಇದಾಗ್ಯೂ ಸೆಮಿಫೈನಲ್ ಪ್ರವೇಶಿಸಲು ಅಫ್ಘಾನಿಸ್ತಾನ್, ನ್ಯೂಜಿಲೆಂಡ್ ಹಾಗೂ ಭಾರತ ಅಂಕ ಪಟ್ಟಿಯಲ್ಲಿ ಸಮಬಲ ಸಾಧಿಸಬೇಕಿತ್ತು. ಅದರಂತೆ ಮೂರು ತಂಡಗಳು 6 ಅಂಕ ಪಡೆದಿದ್ದರೆ ಮಾತ್ರ ಅವಕಾಶವಿತ್ತು.
ಆದರೆ ಅಫ್ಘಾನಿಸ್ತಾನ್ ವಿರುದ್ದ ಗೆಲ್ಲುವ ಮೂಲಕ 8 ಅಂಕ ಪಡೆದಿರುವ ನ್ಯೂಜಿಲೆಂಡ್ ಸೆಮಿಫೈನಲ್ಗೆ ಎಂಟ್ರಿಕೊಟ್ಟಿದೆ. ಇದರೊಂದಿಗೆ ಟೀಮ್ ಇಂಡಿಯಾ ಹಾಗೂ ಅಫ್ಘಾನಿಸ್ತಾನ್ ಸೆಮಿಫೈನಲ್ ಆಸೆ ಕೂಡ ಕೊನೆಗೊಂಡಿದೆ. ನ.8 ರಂದು ಟೀಮ್ ಇಂಡಿಯಾ ತನ್ನ ಕೊನೆಯ ಪಂದ್ಯವನ್ನು ನಮೀಬಿಯಾ ವಿರುದ್ದ ಆಡಲಿದ್ದು, ಈ ಪಂದ್ಯದೊಂದಿಗೆ ಭಾರತ ತಂಡದ ವಿಶ್ವಕಪ್ ಅಭಿಯಾನ ಅಂತ್ಯವಾಗಲಿದೆ.
ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್
ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!
ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ
(T20 World Cup 2021: Team India Out of the Semi final race)