India vs Pakistan, T20 World cup 2021: ಐಸಿಸಿ ಟಿ20 ವಿಶ್ವಕಪ್ 2021ರ ರೋಚಕ ಕದನ ಅಕ್ಟೋಬರ್ 24 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಹೀಗಾಗಿಯೇ ಉಭಯ ದೇಶಗಳ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರ ನಡುವೆ ಮಾತು ಸಮರ ಮುಂದುವರೆದಿದೆ. ಅದರಲ್ಲೂ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಂ (Babar Azam) ಕೆಲ ದಿನಗಳ ಹಿಂದೆಯಷ್ಟೇ ಈ ಬಾರಿ ನಾವೇ ಗೆಲ್ಲಲಿದ್ದೇವೆ ಎಂದು ಸಾರಿದ್ದಾರೆ. ಅಷ್ಟೇ ಅಲ್ಲದೆ ಭಾರತ ಹೆಚ್ಚಿನ ಒತ್ತಡದಲ್ಲಿದೆ. ಹೀಗಾಗಿ ಭಾರತ (Team India) ವಿರುದ್ದ ಗೆದ್ದೇ ಗೆಲ್ಲುತ್ತೇವೆ ಎಂದಿದ್ದಾರೆ.
ಇತ್ತ ಭಾರತ ತಂಡ ಒತ್ತಡದಲ್ಲಿದೆ ಎಂಬ ಪಾಕ್ ನಾಯಕನ ಹೇಳಿಕೆ ಬೆನ್ನಲ್ಲೇ, ಪಾಕಿಸ್ತಾನದ ಮಾಜಿ ಕ್ರಿಕೆಟರುಗಳು ಕೂಡ ಟೀಮ್ ಇಂಡಿಯಾ ಒತ್ತಡದಲ್ಲಿದೆ ಎಂಬುದಕ್ಕೆ ಧ್ವನಿಗೂಡಿಸಿದ್ದಾರೆ. ಈ ಹೇಳಿಕೆಗಳು ವೈರಲ್ ಆಗುತ್ತಿದ್ದಂತೆ ಇತ್ತ ಸೋಷಿಯಲ್ ಮೀಡಿಯಾ ಮೂಲಕ ವಿರಾಟ್ ಕೊಹ್ಲಿ ಒಂದು ಒಂದೇ ಒಂದು ಪೋಸ್ಟ್ ಮೂಲಕ ಉತ್ತರ ನೀಡಿದ್ದಾರೆ.
ಈ ರೋಚಕ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ತಮ್ಮ ಭಾವಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಭಾನುವಾರ ಮಹತ್ವದ ಪಂದ್ಯವಿದೆ. ನೀವು ನರ್ವಸ್ ಆಗಿದ್ದೀರಿ ಅಲ್ವಾ? ಎಂದು ಕೇಳಿರುವ ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಕೊಹ್ಲಿ ರೋನ್ ಟಿಶರ್ಟ್ ಧರಿಸಿದ ಫೋಟೋ ಹಾಕಿ ಉತ್ತರ ನೀಡಿದ್ದಾರೆ. ಅಂದರೆ ಖಂಡಿತವಾಗಿಯೂ ಇಲ್ಲ ಎನ್ನುವ ಮೂಲಕ ಕೊಹ್ಲಿ ಟೀಮ್ ಇಂಡಿಯಾ ನಾಯಕ ಹಾಗೂ ತಂಡ ಟೆನ್ಶನ್ನಲ್ಲಿದೆ ಎಂಬ ಹೇಳಿಕೆಗಳಿಗೆ ಒಂದೇ ಒಂದು ಫೋಟೋ ಮೂಲಕ ಉತ್ತರ ನೀಡಿದ್ದಾರೆ. ಅಂದಹಾಗೆ ರೋನ್ ಎಂಬುದು ವಿರಾಟ್ ಕೊಹ್ಲಿಯ ಲೈಫ್ಸ್ಟೈಲ್ ಬ್ರಾಂಡ್ ಕೂಡ ಹೌದು. ಈ ಮೂಲಕ ಹೇಳಿಕೆಗಳನ್ನು ನೀಡುವವರಿಗೆ ಉತ್ತರ ಹಾಗೂ ತನ್ನ ಬ್ರಾಂಡ್ನ ಪ್ರಚಾರ ಎರಡನ್ನೂ ಕೊಹ್ಲಿ ಒಂದೇ ಪೋಸ್ಟ್ ಮೂಲಕ ಮಾಡಿ ಮುಗಿಸಿದ್ದಾರೆ.
People: Big match on Sunday. You’re nervous, right?
Me: pic.twitter.com/HXDWeKrYFR
— Virat Kohli (@imVkohli) October 21, 2021
ಟಿ20 ವಿಶ್ವಕಪ್‌ನ ಭಾರತ-ಪಾಕ್ 5 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಟೀಮ್ ಇಂಡಿಯಾ ಪಾಕಿಸ್ತಾನವನ್ನು 5 ಬಾರಿ ಕೂಡ ಸೋಲಿಸಿದೆ. ಇನ್ನು ಉಭಯ ತಂಡಗಳು ಟಿ20ಯಲ್ಲಿ ಒಟ್ಟು 8 ಪಂದ್ಯಗನ್ನು ಆಡಿದ್ದು, ಅದರಲ್ಲಿ ಟೀಮ್ ಇಂಡಿಯಾ 7ರಲ್ಲಿ ಗೆದ್ದಿದೆ. ಹೀಗಾಗಿ ಈ ಬಾರಿ ಕೂಡ ಗೆಲ್ಲುವ ಫೇವರೇಟ್ ತಂಡವಾಗಿ ಭಾರತ ಮುಂಚೂಣಿಯಲ್ಲಿದೆ.
ಇದನ್ನೂ ಓದಿ: India vs Pakistan, T20 World cup 2021: ಒಂದು ದಿನ ಮೊದಲೇ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ್
ಇದನ್ನೂ ಓದಿ: T20 World cup 2021: ಪಾಕ್ ವಿರುದ್ದದ ಪಂದ್ಯದೊಂದಿಗೆ ಹೊಸ ಸಾಧನೆ ಮಾಡಲಿದ್ದಾರೆ ಕೆಎಲ್ ರಾಹುಲ್, ಪಾಂಡ್ಯ
ಇದನ್ನೂ ಓದಿ: T20 World Cup 2021: ಟಿ20 ರ್ಯಾಂಕಿಂಗ್ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?
(T20 World Cup 2021: Virat Kohli’s ‘Big Match’ post sparks hilarious meme)