T20 World Cup 2022: ಟಿ20 ವಿಶ್ವಕಪ್ 2022 ಕ್ಕೆ 8 ತಂಡಗಳು ನೇರ ಎಂಟ್ರಿ

| Updated By: ಝಾಹಿರ್ ಯೂಸುಫ್

Updated on: Nov 07, 2021 | 4:00 PM

T20 World Cup 2021: ಟಿ20 ತಂಡಗಳ ರ್ಯಾಂಕಿಂಗ್​ನಲ್ಲಿರುವ 8 ಅಗ್ರ ತಂಡಗಳು ಮುಂದಿನ ಟಿ20 ವಿಶ್ವಕಪ್​ನ ಸೂಪರ್ 12 ಹಂತಕ್ಕೆ ನೇರವಾಗಿ ಅರ್ಹತೆ ಪಡೆಯುತ್ತದೆ.

T20 World Cup 2022: ಟಿ20 ವಿಶ್ವಕಪ್ 2022 ಕ್ಕೆ 8 ತಂಡಗಳು ನೇರ ಎಂಟ್ರಿ
T20 World Cup 2022
Follow us on

ಈ ಬಾರಿಯ ಟಿ20 ವಿಶ್ವಕಪ್​ನ (T20 World Cup 2021) ಲೀಗ್ ಹಂತದ ಪಂದ್ಯಗಳು ಮುಕ್ತಾಯಕ್ಕೆ ಬಂದು ನಿಂತಿದೆ. ಇದರ ಬೆನ್ನಲ್ಲೇ ಮುಂದಿನ ಟಿ20 ವಿಶ್ವಕಪ್ (T20 World Cup 2022)​ ಸಿದ್ಧತೆಗಳು ಕೂಡ ಶುರುವಾಗಿದೆ. 2020 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್​ ಅನ್ನು ಕೊರೋನಾ ಕಾರಣ 2022ಕ್ಕೆ ಮುಂದೂಡಲಾಗಿತ್ತು. ಅದರಂತೆ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ಮತ್ತೆ ಚುಟುಕು ಕ್ರಿಕೆಟ್ ಕದನ ನಡೆಯಲಿದೆ. ಈ ವಿಶ್ವಕಪ್​ನಲ್ಲಿ 8 ತಂಡಗಳು ನೇರವಾಗಿ ಅರ್ಹತೆ ಪಡೆದುಕೊಂಡಿದೆ.

ಟಿ20 ತಂಡಗಳ ರ್ಯಾಂಕಿಂಗ್​ನಲ್ಲಿರುವ 8 ಅಗ್ರ ತಂಡಗಳು ಮುಂದಿನ ಟಿ20 ವಿಶ್ವಕಪ್​ನ ಸೂಪರ್ 12 ಹಂತಕ್ಕೆ ನೇರವಾಗಿ ಅರ್ಹತೆ ಪಡೆಯುತ್ತದೆ. ಅದರಂತೆ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ಥಾನ್, ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ ತಂಡಗಳು ನೇರ ಅರ್ಹತೆ ಪಡೆದಿದೆ.

ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಅರ್ಹತಾ ಸುತ್ತಿನ ಮೂಲಕ ಸೂಪರ್ 12 ನಲ್ಲಿ ಕಾಣಿಸಿಕೊಂಡಿದ್ದ ಬಾಂಗ್ಲಾದೇಶ ತಂಡವು ರ್ಯಾಂಕಿಂಗ್​ನಲ್ಲಿ ಉನ್ನತಿ ಕಂಡಿದ್ದು, ಹೀಗಾಗಿ ನೇರ ಅರ್ಹತೆ ಪಡೆದಿದೆ. ಅತ್ತ ಈ ಬಾರಿ 5 ಪಂದ್ಯಗಳಲ್ಲಿ 4 ಸೋಲನುಭವಿಸಿರುವ ವೆಸ್ಟ್ ಇಂಡೀಸ್ ತಂಡವು ರ್ಯಾಂಕಿಂಗ್ ಕುಸಿತ ಕಂಡಿದ್ದು, ಇದರಿಂದ ರ್ಯಾಂಕಿಂಗ್​ನಲ್ಲಿ 10ನೇ ಸ್ಥಾನ ಪಡೆದಿದೆ. ಹಾಗಾಗಿ 9ನೇ ಮತ್ತು 10ನೇ ಸ್ಥಾನದಲ್ಲಿರುವ ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಅರ್ಹತಾ ಸುತ್ತಿನ ಮೂಲಕ ಸೂಪರ್ 12 ಗೆ ಅರ್ಹತೆ ಪಡೆಯಬೇಕಿದೆ.

ಇನ್ನು ಈ ಸಲ ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಂಡಿರುವ ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ತಂಡಗಳು ಕೂಡ ಅರ್ಹತಾ ಸುತ್ತಿಗೆ ಪ್ರವೇಶ ಪಡೆದಿದ್ದು, ಇನ್ನುಳಿದ ತಂಡಗಳು ಯಾವುವು ಎಂಬುದನ್ನು ಐಸಿಸಿ ಶೀಘ್ರದಲ್ಲೇ ಪ್ರಕಟಿಸಲಿದೆ.

ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್

ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!

ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ

(T20 World Cup 2022: 8 Teams Assured Of Super 12 Spot In 2022 T20 WC)