ಟಿ20 ವಿಶ್ವಕಪ್‌ನಲ್ಲಿ ಟೆಸ್ಟ್ ಕ್ರಿಕೆಟ್ ನೆನಪಿಸಿದ ಪಾಕ್ ತಂಡ; ಮೀಮ್​ಗಳ ಮೂಲಕ ಬಾಬರ್ ಪಡೆ ಕಾಲೆಳೆದ ನೆಟ್ಟಿಗರು

| Updated By: ಪೃಥ್ವಿಶಂಕರ

Updated on: Nov 13, 2022 | 3:56 PM

T20 World Cup 2022: ಕೆಲವರು ಇಫ್ತಿಕರ್ ಅಹ್ಮದ್ ಅವರ ಕಳಪೆ ಬ್ಯಾಟಿಂಗ್ ಬಗ್ಗೆ ಗೇಲಿ ಮಾಡುತ್ತಿದ್ದು, ಕೆಲವರು ಮೀಮ್‌ಗಳ ಮೂಲಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸ್ಥಿತಿಯನ್ನು ವ್ಯಂಗ್ಯ ಮಾಡಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಟೆಸ್ಟ್ ಕ್ರಿಕೆಟ್ ನೆನಪಿಸಿದ ಪಾಕ್ ತಂಡ; ಮೀಮ್​ಗಳ ಮೂಲಕ ಬಾಬರ್ ಪಡೆ ಕಾಲೆಳೆದ ನೆಟ್ಟಿಗರು
Follow us on

ಇಂದು ಟಿ20 ವಿಶ್ವಕಪ್ 2022 ರ ಫೈನಲ್ ಪಂದ್ಯ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಗಿದೆ. ತಂಡದ ಒಬ್ಬ ಆಟಗಾರನಿಗೂ ಇಂಗ್ಲೆಂಡ್‌ ಬೌಲಿಂಗ್ ಎದುರು ಸರಿಯಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ತಂಡದ ಪ್ರಮುಖ ಆಟಗಾರ ಎನಿಸಿಕೊಂಡಿದ್ದ ಮೊಹಮ್ಮದ್ ರಿಜ್ವಾನ್ ಬೇಗನೇ ಔಟಾಗಿ ಪೆವಿಲಿಯನ್​ಗೆ ಮರಳಿದರು. ಬಾಬರ್ ಅಜಮ್ 32 ರನ್‌ಗಳ ಇನ್ನಿಂಗ್ಸ್ ಆಡಿದರದರೂ ಅವರಿಂದ ನಿರೀಕ್ಷೆಗಳು ತುಂಬಾ ಹೆಚ್ಚಿದ್ದವು. ಇದಲ್ಲದೇ ಶಾನ್ ಮಸೂದ್ ಕೂಡ 38 ರನ್‌ಗಳ ಇನ್ನಿಂಗ್ಸ್​ಗೆ ಸುಸ್ತಾದರು. ಉಳಿದಂತೆ ಬಂದವರೆಲ್ಲ ಅಭಿಮಾನಿಗಳಿಗೆ ಟೆಸ್ಟ್ ಕ್ರಿಕೆಟ್ ನೆನಪಿಸಿದರು. ಹೀಗಾಗಿ ಪಾಕ್ ತಂಡದ ಬ್ಯಾಟಿಂಗ್ ನೋಡಿದ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್​ಗಳ ಮಳೆಗರೆದಿದ್ದಾರೆ.

ಪಾಕಿಸ್ತಾನದ ಬ್ಯಾಟಿಂಗ್ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳ ಮಹಾಪೂರವೇ ಹರಿದು ಬಂದಿದೆ. ಕೆಲವರು ಇಫ್ತಿಕರ್ ಅಹ್ಮದ್ ಅವರ ಕಳಪೆ ಬ್ಯಾಟಿಂಗ್ ಬಗ್ಗೆ ಗೇಲಿ ಮಾಡುತ್ತಿದ್ದು, ಕೆಲವರು ಮೀಮ್‌ಗಳ ಮೂಲಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸ್ಥಿತಿಯನ್ನು ವ್ಯಂಗ್ಯ ಮಾಡಿದ್ದಾರೆ. ಅಂತಹ ಕೆಲವು ಮೀಮ್​ಗಳು ಇಲ್ಲಿವೆ.

Published On - 3:56 pm, Sun, 13 November 22