India vs New Zealand: ಭಾರತದ 2ನೇ ಅಭ್ಯಾಸ ಪಂದ್ಯ: ಎಷ್ಟು ಗಂಟೆಗೆ, ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

T20 World Cup 2022: ನ್ಯೂಜಿಲೆಂಡ್ ಟಿ20 ವಿಶ್ವಕಪ್​ನಲ್ಲಿ ಗ್ರೂಪ್-1 ನಲ್ಲಿರುವ ತಂಡ. ಅಂದರೆ ಟೀಮ್ ಇಂಡಿಯಾ ಗ್ರೂಪ್​-2 ನಲ್ಲಿದ್ದು, ಈ ತಂಡವನ್ನು ಸೂಪರ್-12 ಸುತ್ತಿನಲ್ಲಿ ಎದುರಿಸುವುದಿಲ್ಲ.

India vs New Zealand: ಭಾರತದ 2ನೇ ಅಭ್ಯಾಸ ಪಂದ್ಯ: ಎಷ್ಟು ಗಂಟೆಗೆ, ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?
india
Edited By:

Updated on: Oct 18, 2022 | 10:58 PM

T20 World Cup 2022: ಟಿ20 ವಿಶ್ವಕಪ್​ಗಾಗಿ ಭರ್ಜರಿ ಸಿದ್ದತೆಯಲ್ಲಿರುವ ಟೀಮ್ ಇಂಡಿಯಾ (Team India) ಬುಧವಾರ ತನ್ನ 2ನೇ ಅಭ್ಯಾಸ ಪಂದ್ಯವಾಡಲಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿರುವ ಟೀಮ್ ಇಂಡಿಯಾ ಈ ಬಾರಿ ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಭಾರತ ತಂಡವು ಅಕ್ಟೋಬರ್ 23 ರಂದು ಪಾಕಿಸ್ತಾನ್ ವಿರುದ್ಧದ ಪಂದ್ಯದ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧ ಗೆದ್ದು ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ.

ನ್ಯೂಜಿಲೆಂಡ್ ಟಿ20 ವಿಶ್ವಕಪ್​ನಲ್ಲಿ ಗ್ರೂಪ್-1 ನಲ್ಲಿರುವ ತಂಡ. ಅಂದರೆ ಟೀಮ್ ಇಂಡಿಯಾ ಗ್ರೂಪ್​-2 ನಲ್ಲಿದ್ದು, ಈ ತಂಡವನ್ನು ಸೂಪರ್-12 ಸುತ್ತಿನಲ್ಲಿ ಎದುರಿಸುವುದಿಲ್ಲ. ಆದರೆ ಈ ಕಿವೀಸ್​ ತಂಡ ಸೆಮಿಫೈನಲ್ ಹಂತದಲ್ಲಿ ಟೀಮ್ ಇಂಡಿಯಾಗೆ ಎದುರಾಗಬಹುದು. ಹೀಗಾಗಿ ಅಭ್ಯಾಸ ಪಂದ್ಯಗಳಲ್ಲೇ ಮೇಲುಗೈ ಸಾಧಿಸಲು ಟೀಮ್ ಇಂಡಿಯಾ ಪಣತೊಟ್ಟಿದೆ. ಅದರಲ್ಲೂ ಟೀಮ್ ಇಂಡಿಯಾ ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಬಲಿಷ್ಠ ಪ್ಲೇಯಿಂಗ್ ಇಲೆವೆನ್​ ರೂಪಿಸಿಕೊಳ್ಳಲು ಈ ಅಭ್ಯಾಸ ಪಂದ್ಯ ಸಹಕಾರಿ. ಹಾಗಾಗಿ ಟೀಮ್ ಇಂಡಿಯಾ ಪಾಲಿಗೆ ಈ ಪಂದ್ಯ ಮಹತ್ವ ಪಡೆದುಕೊಂಡಿದೆ. ಈ ಪಂದ್ಯದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

  • ಭಾರತ-ನ್ಯೂಜಿಲೆಂಡ್ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ ಯಾವಾಗ ನಡೆಯಲಿದೆ?

ಈ ಪಂದ್ಯವು ಅಕ್ಟೋಬರ್ 19 ಬುಧವಾರ ಬ್ರಿಸ್ಬೇನ್​ನ ಗಾಬಾ ಸ್ಟೇಡಿಯಂನಲ್ಲಿ ನಡೆಯಲಿದೆ.

ಇದನ್ನೂ ಓದಿ
T20 World Cup 2022: ಟಿ20 ವಿಶ್ವಕಪ್​ನಲ್ಲಿ ವಿದೇಶಿ ತಂಡದ ಪರ ಆಡುತ್ತಿರುವ ಭಾರತೀಯ ಮೂಲದವರು ಯಾರೆಲ್ಲಾ ಗೊತ್ತಾ?
T20 World Cup 2022 All Squad: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
T20 World Cup 2022: ಭಾರತ-ಪಾಕ್ ಅಲ್ಲ, ಈ ಬಾರಿ ಸೂರ್ಯ vs ರಿಜ್ವಾನ್..!
Team India: ಟೀಮ್ ಇಂಡಿಯಾದ ಮೊದಲ ಟಿ20 ತಂಡದಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
  • ಈ ಅಭ್ಯಾಸ ಪಂದ್ಯವು ಎಷ್ಟು ಗಂಟೆಗೆ ಶುರುವಾಗಲಿದೆ?

ಈ ಪಂದ್ಯವು ಬುಧವಾರ ಮಧ್ಯಾಹ್ನ 1:30 (IST) ಕ್ಕೆ ಪ್ರಾರಂಭವಾಗುತ್ತದೆ.

  • ಈ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಈ ಪಂದ್ಯದ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಚಾನೆಲ್​ಗಳಲ್ಲಿ ಇರಲಿದೆ. ಹಾಗೆಯೇ ಪಂದ್ಯದ ಲೈವ್ ಸ್ಟ್ರೀಮಿಂಗ್ Dinsey+Hotstar ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ.

ಭಾರತ ತಂಡ ಹೀಗಿದೆ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

ನ್ಯೂಜಿಲೆಂಡ್ ತಂಡ ಹೀಗಿದೆ:

ಕೇನ್ ವಿಲಿಯಮ್ಸನ್ (ನಾಯಕ), ಟಿಮ್ ಸೌಥಿ, ಇಶ್ ಸೋಧಿ, ಮಿಚೆಲ್ ಸ್ಯಾಂಟ್ನರ್, ಗ್ಲೆನ್ ಫಿಲಿಪ್ಸ್, ಜಿಮ್ಮಿ ನೀಶಮ್, ಡೇರಿಲ್ ಮಿಚೆಲ್, ಆಡಮ್ ಮಿಲ್ನ್, ಮಾರ್ಟಿನ್ ಗಪ್ಟಿಲ್, ಲಾಕಿ ಫರ್ಗುಸನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್, ಮೈಕಲ್ ಬ್ರೇಸ್ವೆಲ್, ಟ್ರೆಂಟ್ ಬೌಲ್ಟ್, ಟ್ರೆಂಟ್ ಬೌಲ್ಟ್, ಫಿನ್ ಅಲೆನ್.