AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಫ್ಘಾನ್ ಆಟಗಾರನನ್ನು ಆಸ್ಪತ್ರೆಗೆ ಸೇರುವಂತೆ ಮಾಡಿದ ಪಾಕ್ ವೇಗಿಯ ಯಾರ್ಕರ್! ವಿಡಿಯೋ ನೋಡಿ

T20 World Cup 2022: ಅಫ್ರಿದಿ ಎಸೆದ ಯಾರ್ಕರ್ ಚೆಂಡು ರಹಮಾನುಲ್ಲಾ ಅವರ ಶೂಗೆ ತಗುಲಿತು. ಪಾಕ್ ತಂಡ ಕೂಡ ಬ್ಯಾಟರ್ ವಿಕೆಟ್​ಗಾಗಿ ಎಲ್ಬಿಡಬ್ಲ್ಯು ಮನವಿ ಮಾಡಿತು. ಇದಕ್ಕೆ ಅಂಪೈರ್ ಕೂಡ ಅಸ್ತು ಎಂದರು. ಆದರೆ, ಇದಾದ ಬಳಿಕ ಕಾಣಿಸಿಕೊಂಡ ದೃಶ್ಯ ನಿಜಕ್ಕೂ ನೋವಿನ ಸಂಗತಿಯಾಗಿದೆ.

ಆಫ್ಘಾನ್ ಆಟಗಾರನನ್ನು ಆಸ್ಪತ್ರೆಗೆ ಸೇರುವಂತೆ ಮಾಡಿದ ಪಾಕ್ ವೇಗಿಯ ಯಾರ್ಕರ್! ವಿಡಿಯೋ ನೋಡಿ
PAK vs AFG
TV9 Web
| Edited By: |

Updated on:Oct 19, 2022 | 12:00 PM

Share

ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯಕವಾಗಿ ಸೋತಿದ್ದ ಪಾಕಿಸ್ತಾನ ತಂಡ ಇಂದು ಎರಡನೇ ಅಭ್ಯಾಸ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು (Afghanistan) ಎದುರಿಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಪಾಕ್ ಪಡೆ ಎದುರಾಳಿಯನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶ್ವಿಯಾಗಿದೆ. ಬಹಳ ದಿನಗಳಿಂದ ತಂಡದ ಹೊರಗಿದ್ದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ (Shaheen Shah Afridi) ಈ ಪಂದ್ಯದೊಂದಿಗೆ ಮತ್ತೆ ತಂಡಕ್ಕೆ ಮರಳಿದ್ದಾರೆ. ಇದರೊಂದಿಗೆ ಮೊದಲ ಪಂದ್ಯದಲ್ಲಿಯೇ ತನ್ನ ಪರಾಕ್ರಮ ತೊರಿರುವ ಈ ಎಡಗೈ ಬೌಲರ್ 4 ಓವರ್​ಗಳಲ್ಲಿ ಕೇವಲ 29 ರನ್ ನೀಡಿ 2 ವಿಕೆಟ್ ಪಡೆದರು. ಹಾಗೆಯೇ ಆರಂಭದಿಂದಲೂ ಕರಾರುವಕ್ಕಾಗಿ ದಾಳಿ ಮಾಡಿದ ಅಫ್ರಿದಿ, ತನ್ನ ಘಾತುಕ ಯಾರ್ಕರ್​ನಿಂದ ಎದುರಾಳಿ ತಂಡದ ವಿಕೆಟ್ ಕೀಪರ್​ನನ್ನು​ ಆಸ್ಪತ್ರೆ ಸೇರುವಂತೆ ಮಾಡಿದ್ದಾರೆ.​

ತನ್ನ ಎರಡನೇ ಅಭ್ಯಾಸ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡುವ ಮೂಲಕ ಪಾಕಿಸ್ತಾನ ತಂಡ ಅದ್ಭುತ ಆರಂಭ ಮಾಡಿತು. ಈ ವೇಳೆ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದ ಶಾಹೀನ್ ಅಫ್ರಿದಿ ತಮ್ಮ ಐದನೇ ಎಸೆತದಲ್ಲಿ ಪ್ರಚಂಡ ಯಾರ್ಕರ್ ಎಸೆದರು. ಇದು ಎದುರಾಳಿ ಆರಂಭಿಕ ರಹಮಾನುಲ್ಲಾ ಎದುರಿಸಿದ ಮೊದಲ ಎಸೆತವಾಗಿದ್ದು, ಅಫ್ರಿದಿ ಎಸೆದ ಯಾರ್ಕರ್ ಚೆಂಡು ರಹಮಾನುಲ್ಲಾ ಅವರ ಶೂಗೆ ತಗುಲಿತು. ಪಾಕ್ ತಂಡ ಕೂಡ ಬ್ಯಾಟರ್ ವಿಕೆಟ್​ಗಾಗಿ ಎಲ್ಬಿಡಬ್ಲ್ಯು ಮನವಿ ಮಾಡಿತು. ಇದಕ್ಕೆ ಅಂಪೈರ್ ಕೂಡ ಅಸ್ತು ಎಂದರು. ಆದರೆ, ಇದಾದ ಬಳಿಕ ಕಾಣಿಸಿಕೊಂಡ ದೃಶ್ಯ ನಿಜಕ್ಕೂ ನೋವಿನ ಸಂಗತಿಯಾಗಿದೆ.

ಇದನ್ನೂ ಓದಿ: ಜಾಕೆಟ್‌ನಲ್ಲಿ ಇಯರ್‌ಬಡ್ಸ್ ಪತ್ತೆ; ವಿಶ್ವ ಚಾಂಪಿಯನ್‌ಶಿಪ್‌ನಿಂದ ಭಾರತದ ಚೆಸ್ ಪಟು ಔಟ್..!

ರಹಮಾನುಲ್ಲಾ ಆಸ್ಪತ್ರೆಗೆ

ಶಾಹೀನ್ ಅಫ್ರಿದಿ ಎಸೆತದಲ್ಲಿ ರಹಮಾನುಲ್ಲಾ ಗುರ್ಬಾಜ್ ಎಲ್ಬಿಡಬ್ಲ್ಯು ಔಟಾದರು. ಆದರೆ ಅಫ್ರಿದಿ ಎಸೆದ ಪ್ರಚಂಡ ಯಾರ್ಕರ್, ಅವರು ಇಂಜುರಿಗೊಳ್ಳುವಂತೆ ಮಾಡಿತು. ಕಾಲಿಗೆ ಬಾಲ್ ಬಿದ್ದ ಕೂಡಲೇ ಗುರ್ಬಾಜ್, ತಮ್ಮ ಕಾಲನ್ನು ನೆಲಕ್ಕುರಲಾಗದೆ ಪಿಚ್‌ನಲ್ಲಿ ನೋವಿನಿಂದ ನರಳಲಾರಂಭಿಸಿದರು. ತಕ್ಷಣವೇ ಮೈದನಾಕ್ಕೆ ಬಂದ ಫಿಸಿಯೋ ಅವರನ್ನು ಅಲ್ಲಿಂದ ಕರೆದೊಯ್ದರು. ಈ ವೇಳೆ ಗುರ್ಬಾಜ್​ಗೆ ತಾನಾಗಿ ನಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಮತ್ತೊಬ್ಬ ಆಟಗಾರ ಅವರನ್ನು ತಮ್ಮ ಬೆನ್ನ ಮೇಲೆ ಹೊತ್ತುಕೊಂಡು ಮೈದಾನದಿಂದ ಹೊರಗೆ ಕರೆದುಕೊಂಡು ಹೋದರು. ವರದಿಗಳ ಪ್ರಕಾರ, ಗುರ್ಬಾಜ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಇದರ ನಂತರ ಶಾಹೀನ್ ಅಫ್ರಿದಿ ಅಫ್ಘಾನಿಸ್ತಾನದ ಎರಡನೇ ಆರಂಭಿಕ ಆಟಗಾರ ಹಜರತುಲ್ಲಾ ಝಜೈ ಅವರನ್ನು ಬೌಲ್ಡ್ ಮಾಡಿದರು. ಈ ಪಂದ್ಯದಲ್ಲಿ ಅಫ್ರಿದಿ 4 ಓವರ್‌ಗಳಲ್ಲಿ 29 ರನ್ ನೀಡಿ 2 ವಿಕೆಟ್ ಪಡೆದರು. ಆದಾಗ್ಯೂ, ಪಾಕಿಸ್ತಾನದ ಇತರ ಬೌಲರ್‌ಗಳು ತುಂಬಾ ದುಬಾರಿಯಾದರು. ಹಾರಿಸ್ ರೌಫ್ ಎರಡು ವಿಕೆಟ್ ಪಡೆದರಾದರೂ ಅವರು 4 ಓವರ್‌ಗಳಲ್ಲಿ 34 ರನ್ ಬಿಟ್ಟುಕೊಟ್ಟರು. ನಸೀಮ್ ಶಾ ಕೂಡ 38 ರನ್ ನೀಡಿದರು. ಮೊಹಮ್ಮದ್ ವಾಸಿಂ ಜೂನಿಯರ್ 27 ರನ್ ನೀಡಿದರೆ, ಶಾದಾಬ್ ಮತ್ತು ನವಾಜ್ ರನ್​ಗಳಿಗೆ ಕೊಂಚ ಕಡಿವಾಣ ಹಾಕಿದರು.

ಅಫ್ಘಾನಿಸ್ತಾನದ ಕಳಪೆ ಆರಂಭ

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡ ಅಫ್ರಿದಿ ದಾಳಿಗೆ ಸಿಲುಕಿ ತನ್ನ ಮೊದಲ 3 ವಿಕೆಟ್‌ಗಳನ್ನು ಕೇವಲ 19 ರನ್‌ಗಳಿಗೆ ಕಳೆದುಕೊಂಡಿತು. ಆದರೆ ಈ ವಿಕೆಟ್​ಗಳ ನಂತರ ಬಂದ ಇಬ್ರಾಹಿಂ ಜದ್ರಾನ್ ತಂಡದ ಇನ್ನಿಂಗ್ಸ್ ನಿಭಾಯಿಸಿ 35 ರನ್‌ಗಳ ಕೊಡುಗೆ ನೀಡಿದರು. ನಾಯಕ ಮೊಹಮ್ಮದ್ ನಬಿ ಕೂಡ ಔಟಾಗದೆ 51 ರನ್​ಗಳ ಇನ್ನಿಂಗ್ಸ್ ಆಡಿದರು. ಉಸ್ಮಾನ್ ಘನಿ ಕೂಡ ಅಜೇಯ 32 ರನ್ ಗಳಿಸಿ ಅಫ್ಘಾನಿಸ್ತಾನ ತಂಡವನ್ನು 154 ರನ್​ಗಳಿಗೆ ಕೊಂಡೊಯ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:56 am, Wed, 19 October 22

ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ