T20 World Cup 2022: ಟಿ20 ವಿಶ್ವಕಪ್​ನ ಬಲಿಷ್ಠ ತಂಡಗಳಾವುವು? ಅವುಗಳ ದೌರ್ಬಲ್ಯಗಳೇನು?

ICC T20 World Cup 2022: ಬಟ್ಲರ್ ಮೊದಲ ಬಾರಿಗೆ ಟಿ20 ವಿಶ್ವಕಪ್​ನಲ್ಲಿ ನಾಯಕರಾಗಿದ್ದಾರೆ. ಹೀಗಾಗಿ ಅವರು ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

T20 World Cup 2022: ಟಿ20 ವಿಶ್ವಕಪ್​ನ ಬಲಿಷ್ಠ ತಂಡಗಳಾವುವು? ಅವುಗಳ ದೌರ್ಬಲ್ಯಗಳೇನು?
T20 World Cup 2022
Follow us
TV9 Web
| Updated By: ಝಾಹಿರ್ ಯೂಸುಫ್

Updated on: Oct 18, 2022 | 10:23 PM

T20 World Cup 2022:  ಐಸಿಸಿ ಟಿ20 ವಿಶ್ವಕಪ್-2022 ಶುರುವಾಗಿದೆ. ಇದೀಗ ಕ್ವಾಲಿಫೈಯರ್ ಪಂದ್ಯಗಳು ನಡೆಯುತ್ತಿದ್ದು, ಆ ಬಳಿಕ ಸೂಪರ್-12 ಹಂತದ ಪಂದ್ಯಗಳು ಆರಂಭವಾಗಲಿದೆ. ಈ ಹಂತದಲ್ಲಿ, ವಿಶ್ವಕಪ್‌ಗೆ ಪ್ರಬಲ ಸ್ಪರ್ಧಿಗಳೆಂದು ಪರಿಗಣಿಸಲಾದ ತಂಡಗಳ ಮುಖಾಮುಖಿಯಾಗಲಿದೆ. ಈ ಪಟ್ಟಿಯಲ್ಲಿ ಐದು ಬಲಿಷ್ಠ ತಂಡಗಳಿರುವುದು ವಿಶೇಷ. ಆದರೆ ಈ ತಂಡಗಳಲ್ಲಿ ಬಲಿಷ್ಠತೆಯ ನಡುವೆ ಕೆಲ ದೌರ್ಬಲ್ಯಗಳು ಕೂಡ ಇವೆ. ಹಾಗಿದ್ರೆ 5 ಪ್ರಮುಖ ತಂಡಗಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳೇನು ನೋಡೋಣ…

ಆಸ್ಟ್ರೇಲಿಯಾ:

ಸಾಮರ್ಥ್ಯ: ಕಳೆದ ವರ್ಷ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಪ್ರಶಸ್ತಿ ಗೆದ್ದುಕೊಂಡಿತು. ಇದು ಅವರ ಚೊಚ್ಚಲ ಟಿ20 ವಿಶ್ವಕಪ್ ಆಗಿತ್ತು. ಇದೀಗ ಅದೇ ತಂಡ ತವರಿನಲ್ಲಿ ಆಡುತ್ತಿರುವುದು ವಿಶೇಷ. ಹೀಗಾಗಿ ಆಸ್ಟ್ರೇಲಿಯಾವನ್ನು ಪ್ರಬಲ ಸ್ಪರ್ಧಿಯಾಗಿ ಪರಿಗಣಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಆತಿಥೇಯ ರಾಷ್ಟ್ರ ಟಿ20 ವಿಶ್ವಕಪ್ ಗೆದ್ದಿಲ್ಲವಾದರೂ, ಆಸ್ಟ್ರೇಲಿಯಾ ಇತಿಹಾಸವನ್ನು ಬದಲಾಯಿಸಬಹುದು. ಏಕೆಂದರೆ ಈ ತಂಡದ ಬ್ಯಾಟಿಂಗ್ ತುಂಬಾ ಬಲಿಷ್ಠವಾಗಿದೆ. ತಂಡದಲ್ಲಿ ನಾಯಕ ಆರೋನ್ ಫಿಂಚ್, ಡೇವಿಡ್ ವಾರ್ನರ್ ಅವರಂತಹ ಸ್ಪೋಟಕ ಆಟಗಾರರಿದ್ದು, ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಮಾರ್ಷ್ ಅವರಂತಹ ಹೊಡಿಬಡಿ ದಾಂಡಿಗರಿದ್ದಾರೆ. ಇವರ ಜೊತೆಗೆ ಟಿಮ್ ಡೇವಿಡ್ ಅವರಂತಹ ಫಿನಿಶರ್ ಕೂಡ ಇರುವುದು ತಂಡ ಬಲಿಷ್ಠತೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ವಿದೇಶಿ ತಂಡದ ಪರ ಆಡುತ್ತಿರುವ ಭಾರತೀಯ ಮೂಲದವರು ಯಾರೆಲ್ಲಾ ಗೊತ್ತಾ?
Image
T20 World Cup 2022 All Squad: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
Image
T20 World Cup 2022: ಭಾರತ-ಪಾಕ್ ಅಲ್ಲ, ಈ ಬಾರಿ ಸೂರ್ಯ vs ರಿಜ್ವಾನ್..!
Image
Team India: ಟೀಮ್ ಇಂಡಿಯಾದ ಮೊದಲ ಟಿ20 ತಂಡದಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?

ದೌರ್ಬಲ್ಯ: ಟಿ20 ವಿಷಯದಲ್ಲಿ ಈ ತಂಡದಲ್ಲಿ ಉತ್ತಮ ಸ್ಪಿನ್ನರ್​ಗಳನ್ನು ಹೊಂದಿಲ್ಲ. ತಂಡದಲ್ಲಿರುವ ಲೆಗ್ ಸ್ಪಿನ್ನರ್ ಆಡಮ್ ಝಂಪಾ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಾರೆ. ಅದೇ ಸಮಯದಲ್ಲಿ, ಆಷ್ಟನ್ ಅಗರ್ ಕೂಡ ಹೆಚ್ಚು ಪರಿಣಾಮಕಾರಿಯಾಗಿಲ್ಲ.

ಭಾರತ:

ಸಾಮರ್ಥ್ಯ: 2007ರಲ್ಲಿ ಮೊದಲ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಜಯಿಸಿತ್ತು. ಆದರೆ ಅಂದಿನಿಂದ ಈ ತಂಡಕ್ಕೆ ಮತ್ತೆ ಟಿ20 ವಿಶ್ವ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ. ಈ ತಂಡದ ಬಲಾಬಲದ ಬಗ್ಗೆ ಮಾತನಾಡುವುದಾದರೆ, ತಂಡದ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಸಮಯಕ್ಕೆ ಸರಿಯಾಗಿ ಲಯ ಕಂಡುಕೊಂಡಿದ್ದಾರೆ. ಅದೇ ಹೊತ್ತಿಗೆ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯರಂತಹ ಬ್ಯಾಟ್ಸ್ ಮನ್ ಗಳಿಂದಾಗಿ ತಂಡದ ಮಧ್ಯಮ ಕ್ರಮಾಂಕವೂ ಬಲಿಷ್ಠವಾಗಿದೆ. ದಿನೇಶ್ ಕಾರ್ತಿಕ್ ಫಿನಿಶಿಂಗ್ ಕರಗತ ಮಾಡಿಕೊಂಡಿದ್ದಾರೆ. ಹೀಗಾಗಿ ಬ್ಯಾಟಿಂಗ್ ವಿಷಯದಲ್ಲಿ ತಂಡಕ್ಕೆ ಯಾವುದೇ ಚಿಂತೆಯಿಲ್ಲ.

ದೌರ್ಬಲ್ಯ: ಭಾರತ ತಂಡದ ದೊಡ್ಡ ದೌರ್ಬಲ್ಯವೆಂದರೆ ಅದರ ಬೌಲಿಂಗ್ ವಿಭಾಗ. ಇತ್ತೀಚಿನ ಟಿ20 ಸರಣಿಯಲ್ಲಿ ಅದರಲ್ಲೂ ಡೆತ್ ಓವರ್​ಗಳಲ್ಲಿ ಭಾರತದ ಬೌಲರ್​ಗಳು ನಿರಾಸೆ ಮೂಡಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ಈ ಬಾರಿಯ ವಿಶ್ವಕಪ್‌ನಿಂದ ಹೊರಗುಳಿದಿದ್ದು, ಇಂತಹ ಪರಿಸ್ಥಿತಿಯಲ್ಲಿ ತಂಡದ ಬೌಲಿಂಗ್‌ಗೆ ದೊಡ್ಡ ಹಿನ್ನಡೆಯಾಗಿದೆ. ಭುವನೇಶ್ವರ್ ಕುಮಾರ್ ಹಳೆಯ ಫಾರ್ಮ್‌ನಲ್ಲಿಲ್ಲ. ಹೀಗಾಗಿ ಟೀಮ್ ಇಂಡಿಯಾ ಬೌಲಿಂಗ್ ವಿಭಾಗದಲ್ಲಿ ಹಿನ್ನಡೆ ಅನುಭವಿಸಿದರೆ ಅಚ್ಚರಿಪಡಬೇಕಿಲ್ಲ.

ಇಂಗ್ಲೆಂಡ್:

ಸಾಮರ್ಥ್ಯ: ಇಂಗ್ಲೆಂಡ್ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ನಾಯಕ ಜೋಸ್ ಬಟ್ಲರ್, ಅಲೆಕ್ಸ್ ಹೇಲ್ಸ್, ಡೇವಿಡ್ ಮಲಾನ್, ಲಿಯಾಮ್ ಲಿವಿಂಗ್​ಸ್ಟೋನ್, ಮೊಯಿನ್ ಅಲಿ, ಬೆನ್ ಸ್ಟೋಕ್ಸ್​ನಂತಹ ಹೊಡಿಬಡಿ ದಾಂಡಿಗರ ದಂಡೇ ಇದೆ. ಇದುವೇ ತಂಡದ ಬಲಿಷ್ಠೆಯನ್ನು ಹೆಚ್ಚಿಸಿದೆ.

ದೌರ್ಬಲ್ಯ: ಬಟ್ಲರ್ ಮೊದಲ ಬಾರಿಗೆ ಟಿ20 ವಿಶ್ವಕಪ್​ನಲ್ಲಿ ನಾಯಕರಾಗಿದ್ದಾರೆ. ಹೀಗಾಗಿ ಅವರು ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಅಲ್ಲದೆ, ತಂಡದ ಬೌಲಿಂಗ್ ಸ್ವಲ್ಪ ದುರ್ಬಲವಾಗಿದೆ. ಆದಿಲ್ ರಶೀದ್ ಮತ್ತು ಮೊಯಿನ್ ಅಲಿ ಸ್ಪಿನ್ ವಿಭಾಗದಲ್ಲಿದ್ದಾರೆ. ಆದರೆ ಪಂದ್ಯದ ಗತಿಯನ್ನು ಬದಲಿಸಬಲ್ಲ ಬೌಲರ್​ಗಳಿಲ್ಲ ಎಂಬುದೇ ಸತ್ಯ.

ಪಾಕಿಸ್ತಾನ:

ಸಾಮರ್ಥ್ಯ: 2009 ರಲ್ಲಿ ಯೂನಿಸ್ ಖಾನ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿತ್ತು. ಆದರೆ ಆ ನಂತರ ಪಾಕ್ ತಂಡಕ್ಕೆ ಮತ್ತೆ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗಲಿಲ್ಲ. ಬಾಬರ್ ಆಜಮ್ ನಾಯಕತ್ವದಲ್ಲಿ ಈ ಬಾರಿ ಪ್ರಶಸ್ತಿ ಬರವನ್ನು ಕೊನೆಗೊಳಿಸಬಹುದು ವಿಶ್ವಾಸದಲ್ಲಿದೆ ಪಾಕಿಸ್ತಾನ್. ಈ ತಂಡದ ಶಕ್ತಿ ಎಂದರೆ ನಾಯಕ ಬಾಬರ್ ಮತ್ತು ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್. ಅದೇ ವೇಳೆ ತಂಡದ ಬೌಲಿಂಗ್ ಕೂಡ ಬಲಿಷ್ಠವಾಗಿದೆ. ಶಾಹೀನ್ ಶಾ ಆಫ್ರಿದಿ ಗಾಯದಿಂದ ಮರಳಿದ್ದಾರೆ. ಇದಲ್ಲದೇ ಆಸ್ಟ್ರೇಲಿಯದ ಪಿಚ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಬಲ್ಲ ಹಾರಿಸ್ ರೌಫ್, ಮೊಹಮ್ಮದ್ ನಸೀಮ್ ಅವರಂತಹ ಬೌಲರ್‌ಗಳನ್ನು ತಂಡ ಹೊಂದಿದೆ.

ದೌರ್ಬಲ್ಯ: ಪಾಕ್ ತಂಡಕ್ಕೆ ಮಧ್ಯಮ ಕ್ರಮಾಂಕವೇ ದೊಡ್ಡ ಚಿಂತೆ. ಏಷ್ಯಾಕಪ್‌ನಲ್ಲೂ ತಂಡದ ಮಧ್ಯಮ ಕ್ರಮಾಂಕದ ವೈಫಲ್ಯವು ಬೆಳಕಿಗೆ ಬಂದಿತ್ತು. ಇದೀಗ ಅದೇ ಆಟಗಾರರು ತಂಡದಲ್ಲಿಲ್ಲ. ಹೀಗಾಗಿ ಮಧ್ಯಮ ಕ್ರಮಾಂಕ ಹಾಗೂ ಫಿನಿಶಿಂಗ್ ವಿಷಯದಲ್ಲಿ ಪಾಕ್ ತಂಡವು ಹಿಂದೆ ಉಳಿಯಬಹುದು.

ನ್ಯೂಜಿಲ್ಯಾಂಡ್:

ಸಾಮರ್ಥ್ಯ: ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಫೈನಲ್‌ಗೇರಿತ್ತು. ಆದರೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈ ಬಾರಿ ಕೂಡ ಬಲಿಷ್ಠತೆಯಿಂದ ಕೂಡಿರುವ ಕಿವೀಸ್ ಪಡೆಯ ದೊಡ್ಡ ಶಕ್ತಿ ಬೌಲಿಂಗ್. ಟ್ರೇಟ್ ಬೌಲ್ಟ್, ಲಾಕಿ ಫರ್ಗುಸನ್ ಮತ್ತು ಟಿಮ್ ಸೌಥಿ ಪರಿಣಾಮಕಾರಿಯಾಗಿ ದಾಳಿ ಸಂಘಟಿಸಬಹುದು. ಇನ್ನು ತಂಡದಲ್ಲಿ ಮಿಚೆಲ್ ಬ್ರೇಸ್‌ವೆಲ್ ಅವರಂತಹ ಸ್ಪಿನ್ನರ್ ಕೂಡ ಇದ್ದಾರೆ. ಜೊತೆಗೆ ಗಪ್ಟಿಲ್, ವಿಲಿಯಮ್ಸನ್, ಫಿನ್ ಅಲೆನ್​ನಂತಹ ಸ್ಪೋಟಕ ಆಟಗಾರರು ತಂಡದಲ್ಲಿದ್ದಾರೆ.

ದೌರ್ಬಲ್ಯ: ದೊಡ್ಡ ಪಂದ್ಯಗಳ ಒತ್ತಡವನ್ನು ಈ ತಂಡ ತಡೆದುಕೊಳ್ಳಲು ಸಾಧ್ಯವಾಗದೇ ಇರುವುದು ಹಲವು ಬಾರಿ ಸಂಭವಿಸಿದೆ. ಇದಕ್ಕೆ ಸಾಕ್ಷಿಯೇ 2015 ರ ಏಕದಿನ ವಿಶ್ವಕಪ್ ಮತ್ತು 2019 ಏಕದಿನ ವಿಶ್ವಕಪ್‌ನ ಫೈನಲ್. ಹಾಗೆಯೇ ಕಳೆದ ಬಾರಿಯ ಟಿ20 ವಿಶ್ವಕಪ್​​ನ ಫೈನಲ್​ನಲ್ಲೂ ಎಡವಿತ್ತು. ಹೀಗಾಗಿ ನಿರ್ಣಾಯಕ ಹಂತದಲ್ಲಿ ತಂಡ ಒತ್ತಡಕ್ಕೆ ಸಿಲುಕಿ ಸೋಲನುಭವಿಸಿದೆ ಅಚ್ಚರಿಪಡಬೇಕಿಲ್ಲ.

ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ