T20 World Cup 2022: ಟಿ20 ವಿಶ್ವಕಪ್‌ನಲ್ಲಿ ಅಕ್ಟೋಬರ್ 23 ರಂದು ಪಾಕ್ (India vs Pakistan) ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ (Team India) ಶುಭಾರಂಭ ಮಾಡುವ ಇರಾದೆಯಲ್ಲಿದೆ. ವಿಶೇಷ ಎಂದರೆ ಈ ಪಂದ್ಯವು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ (Rohit Sharma) ಕ್ಯಾಪ್ಟನ್ ಆಗಿ ಮೊದಲ ವಿಶ್ವಕಪ್ ಪಂದ್ಯ. ಹೀಗಾಗಿಯೇ ಹಿಟ್ಮ್ಯಾನ್ ಕೂಡ ಮೊದಲ ಪಂದ್ಯದಲ್ಲೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಮಾತನಾಡಿರುವ ರೋಹಿತ್ ಶರ್ಮಾ, ವಿಶ್ವಕಪ್‌ನಲ್ಲಿ ಭಾರತ ತಂಡದ ಯೋಜನೆ ಮತ್ತು ಸಿದ್ಧತೆಗಳ ಬಗ್ಗೆ ತಿಳಿಸಿದ್ದಾರೆ.
ನಾವು ಈಗ ಸೆಮಿಫೈನಲ್ ಮತ್ತು ಫೈನಲ್ ಬಗ್ಗೆ ಯೋಚಿಸುತ್ತಿಲ್ಲ. ಮೊದಲ ಸುತ್ತಿನಲ್ಲಿ ನಾವು ಪ್ರತಿ ಎದುರಾಳಿ ತಂಡವನ್ನು ಎದುರು ನೋಡುತ್ತಿದ್ದೇವೆ. ಅಲ್ಲದೆ ಎಲ್ಲಾ ಪಂದ್ಯವನ್ನು ಗೆಲ್ಲಲು ಗಮನ ಕೇಂದ್ರೀಕರಿಸುತ್ತೇವೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ವಿಭಿನ್ನ ರೀತಿಯ ಸವಾಲು ಇದೆ ಎಂದಿರುವ ಹಿಟ್ಮ್ಯಾನ್ ಕಳೆದ ಕೆಲ ವರ್ಷಗಳಿಂದ ವಿಶ್ವಕಪ್ ಗೆಲ್ಲದಿರುವ ಬಗ್ಗೆ ಕೂಡ ನಮಗೆಲ್ಲರಿಗೂ ಗೊತ್ತಿದೆ. ಹೀಗಾಗಿ ನಾವು ಇಲ್ಲಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಮೊದಲ ಬಾರಿಗೆ ಅನೇಕ ಆಟಗಾರರು ಇಲ್ಲಿಗೆ ಬಂದಿದ್ದಾರೆ. ಹೀಗಾಗಿ ಹೊಸ ಸವಾಲುಗಳೊಂದಿಗೆ ನಾವು ಪಂದ್ಯ ಗೆಲ್ಲ್ಲುವ ವಿಶ್ವಾಸವಿದೆ ಎಂದು ರೋಹಿತ್ ಶರ್ಮಾ ಹೇಳಿದರು.
ಇನ್ನು ಪಾಕ್ ವಿರುದ್ಧದ ಮೊದಲ ಪಂದ್ಯದ ಬಗ್ಗೆ ಮಾತನಾಡಿರುವ ಹಿಟ್ಮ್ಯಾನ್, ಎಂದಿನಂತೆ ಈ ಬಾರಿ ಕೂಡ ಇಂಡೊ-ಪಾಕ್ ಪಂದ್ಯ ಬ್ಲಾಕ್ ಬಸ್ಟರ್ ಆಗಿರಲಿದೆ. ಈ ಪಂದ್ಯವನ್ನು ನೋಡಲು ಹೆಚ್ಚಿನ ಅಭಿಮಾನಿಗಳು ಕೂಡ ಬರುತ್ತಾರೆ. ಆಟಗಾರನಾಗಿ, ಈ ಪಂದ್ಯ ಎಲ್ಲರಿಗೂ ಮುಖ್ಯವಾಗಿದೆ. ಅಲ್ಲದೆ ಪಾಕ್ ವಿರುದ್ಧದ ಗೆಲುವಿನೊಂದಿಗೆ ಟಿ20 ವಿಶ್ವಕಪ್ ಅಭಿಯಾನ ಆರಂಭಿಸುತ್ತೇವೆ ಎಂದು ತಿಳಿಸಿದರು.
ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶವನ್ನು ಹೊರತುಪಡಿಸಿ, ಭಾರತ ತಂಡವು ಸೂಪರ್-12 ರಲ್ಲಿ ಇತರ 2 ತಂಡಗಳ ವಿರುದ್ಧ ಕೂಡ ಆಡಬೇಕಿದೆ. ಈ ಗ್ರೂಪ್ನಿಂದ ಸೆಮಿಫೈನಲ್ ಪ್ರವೇಶಿಸುವ ತಂಡಗಳಲ್ಲಿ ನಾವು ಕೂಡ ಇರಲಿದ್ದೇವೆ ಎಂಬ ವಿಶ್ವಾಸವಿದೆ. ಆದರೆ ಸದ್ಯ ಮಟ್ಟಿಗೆ ನಾವು ಸೆಮಿಫೈನಲ್ ಹಾಗೂ ಫೈನಲ್ ಬಗ್ಗೆ ಯೋಚಿಸುತ್ತಿಲ್ಲ. ಬದಲಾಗಿ ಮೊದಲ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡುವುದೇ ನಮ್ಮ ಗುರಿ ಎಂದು ರೋಹಿತ್ ಶರ್ಮಾ ತಿಳಿಸಿದರು.
ಟಿ20 ವಿಶ್ವಕಪ್ ಟೀಮ್ ಇಂಡಿಯಾ ವೇಳಾಪಟ್ಟಿ:
ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್.