VIDEO : ತೂಫಾನ್ ಸಿಕ್ಸ್: ಪೊವೆಲ್ ಪವರ್ಗೆ ಚೆಂಡು ಮೈದಾನದ ಹೊರಕ್ಕೆ..!
T20 World Cup 2022: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್ ಕಲೆಹಾಕಿತು.
T20 World Cup 2022: ಟಿ20 ವಿಶ್ವಕಪ್ನಲ್ಲಿನ ಅರ್ಹತಾ ಸುತ್ತಿನ 8ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ದಾಂಡಿಗ ರೋವ್ಮನ್ ಪೊವೆಲ್ (Rovman Powell) ಸಿಡಿಸಿದ ಸಿಕ್ಸ್ ಎಲ್ಲರನ್ನೂ ದಂಗಾಗಿಸಿದೆ. ಜಿಂಬಾಬ್ವೆ ವಿರುದ್ಧ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ನಾಯಕ ನಿಕೋಲಸ್ ಪೂರನ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಜಾನ್ಸನ್ ಚಾರ್ಲ್ 45 ರನ್ ಬಾರಿಸುವ ಮೂಲಕ ಉತ್ತಮ ಆರಂಭ ಒದಗಿಸಿದ್ದರು.
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಕುಸಿತಕ್ಕೊಳಗಾದ ವೆಸ್ಟ್ ಇಂಡೀಸ್ ತಂಡಕ್ಕೆ ಅಂತಿಮ ಹಂತದಲ್ಲಿ ಸ್ಪೋಟಕ ಬ್ಯಾಟ್ಸ್ಮನ್ ರೋವ್ಮನ್ ಪೊವೆಲ್ ಆಸರೆಯಾದರು. ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಪೊವೆಲ್ ಕೊನೆಯ ಓವರ್ ವೇಳೆ ಅಬ್ಬರಿಸಿದರು.
ಬ್ಲೆಸಿಂಗ್ಸ್ ಮುಜರಬಾನಿ ಎಸೆದ 20ನೇ ಓವರ್ನ 3ನೇ ಎಸೆತದಲ್ಲಿ ರೋವ್ಮನ್ ಪೊವೆಲ್ ತಮ್ಮ ಮಸಲ್ ಪವರ್ ತೋರಿಸುವ ಮೂಲಕ ಪ್ರೇಕ್ಷಕರನ್ನು ದಂಗಾಗಿಸಿದರು. ಮುಜರಬಾನಿ ಎಸೆದ ಲೆಂಗ್ತ್ ಬಾಲ್ ಅನ್ನು ಸ್ಕ್ವೇರ್ ಲೆಗ್ ಓವರ್‌ನಲ್ಲಿ ಪೊವೆಲ್ ಭರ್ಜರಿ ಸಿಕ್ಸ್ ಸಿಡಿಸಿದರು. ಅಚ್ಚರಿ ಎಂದರೆ ಪೊವೆಲ್ ಪವರ್ಗೆ ಚೆಂಡು ಮೈದಾನದಿಂದ ಹೊರಕ್ಕೆ ಹೋಗಿ ಬಿತ್ತು. ನಾನ್ ಸ್ಟ್ರೈಕ್ನಲ್ಲಿ ಅಕೆಲ್ ಹೊಸೈನ್ ಈ ಸ್ಪೋಟಕ ಸಿಕ್ಸ್ ನೋಡಿ ದಿಗ್ಭ್ರಮೆಗೊಂಡರು.
ಇದೀಗ ಈ ತೂಫಾನ್ ಸಿಕ್ಸ್ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಪೊವೆಲ್ ಪವರ್ಗೆ ಅಭಿಮಾನಿಗಳು ತಲೆದೂಗಿದ್ದಾರೆ.
View this post on Instagram
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್ ಕಲೆಹಾಕಿತು. ಈ ಸಾಧಾರಣ ಸವಾಲು ಬೆನ್ನತ್ತಿದ ಜಿಂಬಾಬ್ವೆ ತಂಡವು 18.2 ಓವರ್ಗಳಲ್ಲಿ 122 ರನ್ಗಳಿಗೆ ಆಲೌಟ್ ಆಗುವ ಮೂಲಕ 31 ರನ್ಗಳಿಂದ ಸೋಲೊಪ್ಪಿಕೊಂಡಿತು.