VIDEO: ಸಹ ಆಟಗಾರನನ್ನು ‘ಘೇಂಡಾ’ ಎಂದು ಕರೆದ ಬಾಬರ್: ಅಭಿಮಾನಿಗಳ ಆಕ್ರೋಶ

| Updated By: ಡಾ. ಭಾಸ್ಕರ ಹೆಗಡೆ

Updated on: Jun 04, 2024 | 5:57 PM

T20 World Cup 2024: ಪಾಕಿಸ್ತಾನ್ ತಂಡವು ಜೂನ್ 6 ರಂದು ಯುಎಸ್ಎ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಹಾಗೆಯೇ ಜೂನ್ 9 ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ನ್ಯೂಯಾರ್ಕ್​ನ ನಸ್ಸೌ ಕೌಂಟಿ ಸ್ಟೇಡಿಯಂ ಆತಿಥ್ಯವಹಿಸಲಿದೆ.

VIDEO: ಸಹ ಆಟಗಾರನನ್ನು ಘೇಂಡಾ ಎಂದು ಕರೆದ ಬಾಬರ್: ಅಭಿಮಾನಿಗಳ ಆಕ್ರೋಶ
Follow us on

ಪಾಕಿಸ್ತಾನ್ ಕ್ರಿಕೆಟ್ ತಂಡದ ನಾಯಕ ಬಾಬರ್ ಆಝಂ (Babar Azam) ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ತನ್ನ ಸಹ ಆಟಗಾರನನ್ನು ಹೀಯಾಳಿಸುವ ಮೂಲಕ ಪಾಕ್ ನಾಯಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅಂದರೆ ಪಾಕ್ ತಂಡದ ಅಭ್ಯಾಸದ ವೇಳೆ ಆಝಂ ಖಾನ್ ಅವರನ್ನು ಬಾಬರ್ ಘೇಂಡಾ (ಘೇಂಡಾಮೃಗ) ಎಂದು ಕರೆದಿದ್ದಾರೆ.

ದಢೂತಿ ದೇಹ ಹೊಂದಿರುವ ಆಝಂ ಖಾನ್ ಅವರನ್ನು ಬಾಬರ್ ಆಝಂ ಘೇಂಡಾಮೃಗಕ್ಕೆ ಹೋಲಿಸಿರುವುದೇ ಈಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಪಾಕ್ ನಾಯಕನ ನಡೆಗೆ ಅನೇಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವರು ಬಾಬರ್ ಆಝಂ ಅವರ ಬೆಂಬಲಕ್ಕೆ ನಿಂತಿದ್ದು, ಇದು ಕೇವಲ ತಮಾಷೆಗೆ ಕರೆದಿರಬಹುದು ಎಂಬ ವಾದವನ್ನು ಮುಂದಿಟ್ಟಿದ್ದಾರೆ.
ಏಕೆಂದರೆ, ಈ ಹಿಂದೆ ಆಝಂ ಖಾನ್ ಅವರನ್ನು ಟೀಕಿಸಿದಾಗ ಬಾಬರ್ ಅವರ ಬೆಂಬಲಕ್ಕೆ ನಿಂತಿದ್ದರು. ಹೀಗಾಗಿ ಆಝಂ ಖಾನ್ ಅವರನ್ನು ಹೀಯಾಳಿಸುವ ಉದ್ದೇಶದಿಂದ ಕರೆದಿರುವ ಸಾಧ್ಯತೆಯಿಲ್ಲ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.

ಬಾಬರ್ ಆಝಂ ವಿಡಿಯೋ:

ಒಟ್ಟಿನಲ್ಲಿ ಟಿ20 ವಿಶ್ವಕಪ್​ನ ಮೊದಲ ಪಂದ್ಯಕ್ಕೂ ಮುನ್ನವೇ ಬಾಬರ್ ಆಝಂ ಹೊಸ ವಿವಾದದ ಸುಳಿಗೆ ಸಿಲುಕಿದ್ದು, ಈ ವಿವಾದಕ್ಕೆ ಏನು ಸ್ಪಷ್ಟನೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಪಾಕ್ ತಂಡದ ಮೊದಲ ಪಂದ್ಯ:

ಪಾಕಿಸ್ತಾನ್ ತಂಡವು ಜೂನ್ 6 ರಂದು ಯುಎಸ್ಎ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಹಾಗೆಯೇ ಜೂನ್ 9 ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ನ್ಯೂಯಾರ್ಕ್​ನ ನಸ್ಸೌ ಕೌಂಟಿ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಪಾಕಿಸ್ತಾನ್ ತಂಡದ ವೇಳಾಪಟ್ಟಿ:

ಇದನ್ನೂ ಓದಿ: Anrich Nortje: 18 ಡಾಟ್ ಬಾಲ್, 4 ವಿಕೆಟ್: ವಿಶ್ವ ದಾಖಲೆ ಬರೆದ ಅನ್ರಿಕ್ ನೋಕಿಯಾ

ಪಾಕಿಸ್ತಾನ್ ​ಟಿ20 ವಿಶ್ವಕಪ್ ತಂಡ: ಬಾಬರ್ ಆಝಂ (ನಾಯಕ), ಅಬ್ರಾರ್ ಅಹ್ಮದ್, ಆಝಂ ಖಾನ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಂ, ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಝ್ವಾನ್, ನಸೀಮ್ ಶಾ, ಸೈಮ್ ಅಯೂಬ್, ಶಾದಾಬ್ ಖಾನ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ಖಾನ್.

 

 

Published On - 12:05 pm, Tue, 4 June 24