T20 World Cup 2024: ಪಾಂಡ್ಯ ಪಂಚ್​​ಗೆ ನೆತ್ತರು ಚೆಲ್ಲಿದ ಬಾಂಗ್ಲಾ ಬೌಲರ್! ವಿಡಿಯೋ ನೋಡಿ

|

Updated on: Jun 01, 2024 | 11:17 PM

T20 World Cup 2024: ರಾಷ್ಟ್ರೀಯ ತಂಡಕ್ಕೆ ಮರಳಿದ ಬಳಿಕ ತನ್ನ ಹಳೆಯ ಫಾರ್ಮ್​ ಕಂಡುಕೊಂಡಿರುವ ಪಾಂಡ್ಯ ಬಾಂಗ್ಲಾ ಬೌಲರ್​ಗಳ ಮೇಲೆ ಸವಾರಿ ನಡೆಸಿದರು. ಇದಲ್ಲದೆ ತಮ್ಮ ಫವರ್ ಫುಲ್​ ಹೊಡೆತದ ಮೂಲಕ ಬಾಂಗ್ಲಾದೇಶ ತಂಡದ ಪ್ರಮುಖ ಬೌಲರ್​ನ ಕೈಗೆ ಗಾಯವನ್ನೂ ಮಾಡಿದರು.

T20 World Cup 2024: ಪಾಂಡ್ಯ ಪಂಚ್​​ಗೆ ನೆತ್ತರು ಚೆಲ್ಲಿದ ಬಾಂಗ್ಲಾ ಬೌಲರ್! ವಿಡಿಯೋ ನೋಡಿ
ಹಾರ್ದಿಕ್ ಪಾಂಡ್ಯ
Follow us on

ನ್ಯೂಯಾರ್ಕ್‌ನ ನಸ್ಸೌ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ (India vs Bangladesh)  ನಡುವೆ ನಡೆಯುತ್ತಿರುವ ಟಿ20 ವಿಶ್ವಕಪ್ (T20 World Cup 2024) ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿದೆ. ಲೀಗ್ ಪಂದ್ಯಕ್ಕೂ ಮುನ್ನ ತಂಡದ ಆಟಗಾರರ ಫಾರ್ಮ್​ ಕಂಡುಕೊಳ್ಳಲು ಇದು ಕೊನೆಯ ಅವಕಾಶವಾಗಿತ್ತು. ಹೀಗಾಗಿ ಇಂದು ಆಡಿದ ಎಲ್ಲಾ ಆಟಗಾರರ ಮೇಲೆ ಆಯ್ಕೆ ಮಂಡಳಿ ಹದ್ದಿನ ಕಣ್ಣಿಟ್ಟಿತ್ತು. ಅದರಲ್ಲೂ ತಂಡದ ಉಪನಾಯಕತ್ವವಹಿಸಿರುವ ಹಾರ್ದಿಕ್ ಪಾಂಡ್ಯಗೆ (Hardik Pandya) ಈ ಪಂದ್ಯ ಅತ್ಯಂತ ಮಹತ್ವದಾಗಿತ್ತು. ಏಕೆಂದರೆ ಪಾಂಡ್ಯ ಅವರ ಇತ್ತೀಚಿನ ಫಾರ್ಮ್​ ತೀರ ಕಳಪೆಯಾಗಿತ್ತು. ಆದರೀಗ ರಾಷ್ಟ್ರೀಯ ತಂಡಕ್ಕೆ ಮರಳಿದ ಬಳಿಕ ತನ್ನ ಹಳೆಯ ಫಾರ್ಮ್​ ಕಂಡುಕೊಂಡಿರುವ ಪಾಂಡ್ಯ ಬಾಂಗ್ಲಾ ಬೌಲರ್​ಗಳ ಮೇಲೆ ಸವಾರಿ ನಡೆಸಿದರು. ಇದಲ್ಲದೆ ತಮ್ಮ ಫವರ್ ಫುಲ್​ ಹೊಡೆತದ ಮೂಲಕ ಬಾಂಗ್ಲಾದೇಶ ತಂಡದ ಪ್ರಮುಖ ಬೌಲರ್​ನ ಕೈಗೆ ಗಾಯವನ್ನೂ ಮಾಡಿದರು.

ರಕ್ತ ಚೆಲ್ಲಿದ ಬಾಂಗ್ಲಾ ಬೌಲರ್

ಅಭ್ಯಾಸ ಪಂದ್ಯದಲ್ಲೇ ಬಾಂಗ್ಲಾದೇಶ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ತಂಡದ ಪ್ರಮುಖ ವೇಗದ ಬೌಲರ್ ಶೋರಿಫುಲ್ ಇಸ್ಲಾಂ ಅಂಗೈ ಗಾಯಕ್ಕೆ ತುತ್ತಾಗಿದ್ದಾರೆ. ಇದರಿಂದ ಅವರು ತಂಡದ ಮೊದಲ ಕೆಲವು ಪಂದ್ಯಗಳನ್ನು ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.ಭಾರತ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಸ್ಟ್ರೈಕ್​ನಲ್ಲಿದ್ದರು. ಬೌಲಿಂಗ್ ಜವಬ್ದಾರಿ ಹೊತ್ತ ಶೋರಿಫುಲ್ ಇಸ್ಲಾಂ ಐದನೇ ಎಸೆತವನ್ನು ಉತ್ತಮ ಯಾರ್ಕರ್ ಬೌಲ್ ಮಾಡಿದರು. ಈ ಎಸೆತವನ್ನು ಬಲವಾಗಿ ಪಾಂಡ್ಯ ಬೌಲರ್ ಕಡೆಗೆ ಹೊಡೆದರು. ವೇಗಿ ಶೋರಿಫುಲ್ ಇಸ್ಲಾಂ ಚೆಂಡನ್ನು ತಡೆಯಲು ಯತ್ನಿಸಿದರು. ಚೆಂಡು ರಬಸವಾಗಿ ಬಂದಿದ್ದರಿಂದ ಶೋರಿಫುಲ್ ಎಡಗೈಗೆ ಗಾಯವಾಯಿತು. ಬಳಿಕ ಕೈನಿಂದ ರಕ್ತ ಸುರಿಯಲಾರಂಭಿಸಿತು. ಬೌಲರ್ ಮೈದಾನದಲ್ಲಿ ನರಳುತ್ತಿರುವುದನ್ನು ನೋಡಿದ ಫಿಸಿಯೋ ತಕ್ಷಣವೇ ಮೈದಾನಕ್ಕೆ ಬಂದು ಶೋರಿಫುಲ್ ಅವರನ್ನು ಅಲ್ಲಿಂದ ಕರೆದೊಯ್ದರು. ನಂತರ ಆ ಓವರ್‌ನ ಉಳಿದ ಕೊನೆಯ ಎಸೆತವನ್ನು ತಂಜಿಮ್ ಹಸನ್ ಬೌಲ್ ಮಾಡಿದರು.

4 ಸಿಕ್ಸರ್‌ ಸಹಿತ ಅಜೇಯ 40 ರನ್

ಈ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಪಾಂಡ್ಯ 23 ಎಸೆತಗಳನ್ನು ಎದುರಿಸಿ 173.91 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿ 2 ಬೌಂಡರಿ ಮತ್ತು 4 ಸಿಕ್ಸರ್‌ ಸಹಿತ ಅಜೇಯ 40 ರನ್ ಚಚ್ಚಿದರು. ವಿಶ್ವಕಪ್​ ಲೀಗ್ ಹಂತ ಆರಂಭವಾಗುವುದಕ್ಕೂ ಮುನ್ನ ಪಾಂಡ್ಯ ಫಾರ್ಮ್​ ಕಂಡುಕೊಂಡಿರುವುದು ಟೀಂ ಇಂಡಿಯಾಕ್ಕೆ ಸಮಾಧಾನಕರ ಸಂಗತಿಯಾಗಿದ್ದರೆ, ಇನ್ನೊಂದೆಡೆ ಈ ಸ್ಫೋಟಕ ಬ್ಯಾಟಿಂಗ್ ಮೂಲಕ ಪಾಂಡ್ಯ ಟೀಕಾಕಾರರ ಬಾಯಿ ಕೂಡ ಮುಚ್ಚಿಸಿದರು.

17ನೇ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್

ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಒಂದೇ ಓವರ್‌ನಲ್ಲಿ ಸತತ 3 ಸಿಕ್ಸರ್‌ಗಳನ್ನು ಬಾರಿಸಿದರು. ಪಾಂಡ್ಯ 17ನೇ ಓವರ್‌ನಲ್ಲಿ ತನ್ವಿರ್ ಇಸ್ಲಾಂ ಬೌಲ್ ಮಾಡಿದ ಮೊದಲ, ಎರಡನೇ ಮತ್ತು ಮೂರನೇ ಎಸೆತಗಳಲ್ಲಿ ಆಕಾಶದ ಎತ್ತರದ ಸಿಕ್ಸರ್‌ಗಳನ್ನು ಬಾರಿಸಿದರು. ಇದಾದ ಬಳಿಕ ಹಾರ್ದಿಕ್ 19ನೇ ಓವರ್​ನ 5ನೇ ಎಸೆತದಲ್ಲಿ ನಾಲ್ಕನೇ ಸಿಕ್ಸರ್ ಬಾರಿಸಿದರು. ಇದಲ್ಲದೇ ಹಾರ್ದಿಕ್ ಬ್ಯಾಟ್​ನಿಂದಎರಡು ಬೌಂಡರಿಗಳು ಬಂದವು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:12 pm, Sat, 1 June 24