ಐಸಿಸಿ ವಿಶ್ವಕಪ್ ಟ್ರೋಫಿಗಳ ತಯಾರಕರು ಯಾರು? ಇದರ ತೂಕ, ಎತ್ತರ, ಗಾತ್ರ, ಬೆಲೆ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ

ICC World Cup Trophies: ಐಸಿಸಿ ನಡೆಸುವ ಏಕದಿನ ಹಾಗೂ ಟಿ20 ವಿಶ್ವಕಪ್ ಟೂರ್ನಿಗಳ ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತದೆ. ಆದರೆ ಈ ವಿಶ್ವಕಪ್ ಟ್ರೋಫಿ ಅಂತಿಮವಾಗಿ ಯಾರ ಬಳಿ ಉಳಿಯುತ್ತದೆ? ಇದರ ವಿನ್ಯಾಸಕರು ಯಾರು? ತಯಾರಕರು ಯಾರು? ಚಾಂಪಿಯನ್ ತಂಡಕ್ಕೆ ನೀಡುವ ಟ್ರೋಫಿಯ ಬೆಲೆ ಎಷ್ಟು? ಎಂಬ ಹಲವು ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಮೂಡುವುದು ಸಹಜ. ಹೀಗಾಗಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಇದಾಗಿದೆ.

ಐಸಿಸಿ ವಿಶ್ವಕಪ್ ಟ್ರೋಫಿಗಳ ತಯಾರಕರು ಯಾರು? ಇದರ ತೂಕ, ಎತ್ತರ, ಗಾತ್ರ, ಬೆಲೆ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ
ವಿಶ್ವಕಪ್ ಟ್ರೋಫಿಗಳೊಂದಿಗೆ ಧೋನಿ, ರೋಹಿತ್
Follow us
|

Updated on:Jul 01, 2024 | 3:13 PM

ಭಾರತ ತಂಡ 2024 ರ ಟಿ20 ವಿಶ್ವಕಪ್‌ನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಆಫ್ರಿಕಾ ತಂಡವನ್ನು ಮಣಿಸಿದ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ಟಿ20 ವಿಶ್ವಕಪ್‌ನ ಟ್ರೋಫಿಯನ್ನು ಹಸ್ತಾಂತರಿಸಲಾಯಿತು. ಆದರೆ ಬೆಳ್ಳಿಯಿಂದ ಮಾಡಿದ ಈ ವಿಶ್ವಕಪ್ ಟ್ರೋಫಿ ಅಂತಿಮವಾಗಿ ಯಾರ ಬಳಿ ಉಳಿಯುತ್ತದೆ? ಇದರ ವಿನ್ಯಾಸಕರು ಯಾರು? ತಯಾರಕರು ಯಾರು? ಚಾಂಪಿಯನ್ ತಂಡಕ್ಕೆ ನೀಡುವ ಟ್ರೋಫಿಯ ಬೆಲೆ ಎಷ್ಟು? ವಿಶ್ವಕಪ್‌ ಗೆದ್ದ ತಂಡದ ಆಟಗಾರರು ಯಾವ ಬಹುಮಾನವನ್ನು ಪಡೆಯುತ್ತಾರೆ? ಎಂಬ ಹಲವು ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಮೂಡುವುದು ಸಹಜ. ಹೀಗಾಗಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಇದಾಗಿದೆ.

ಟ್ರೋಫಿಯ ತಯಾರಕರು ಯಾರು?

ಟಿ20 ವಿಶ್ವಕಪ್‌ನ ಟ್ರೋಫಿಯು ಏಕದಿನ ವಿಶ್ವಕಪ್‌ಗಿಂತ ಭಿನ್ನವಾಗಿದೆ. ಏಕದಿನ ವಿಶ್ವಕಪ್ ಟ್ರೋಫಿ ಚಿನ್ನದಿಂದ ಮಾಡಲ್ಪಟ್ಟಿದ್ದರೆ, ಟಿ20 ವಿಶ್ವಕಪ್ ಟ್ರೋಫಿ ಬೆಳ್ಳಿಯಿಂದ ಮಾಡಲ್ಪಟ್ಟಿದೆ. ಟಿ20 ವಿಶ್ವಕಪ್‌ನ ಮೊದಲ ಆವೃತ್ತಿಯಲ್ಲಿ ಅಂದರೆ 2007 ರಲ್ಲಿ, ಈ ಟ್ರೋಫಿಯನ್ನು ಆಸ್ಟ್ರೇಲಿಯಾದ ಮಿನಾಲೆ ಬ್ರೈಸ್ ಡಿಸೈನ್ ಸ್ಟ್ರಾಟಜಿ ವಿನ್ಯಾಸಗೊಳಿಸಿದರು ಮತ್ತು ಇದನ್ನು ಅಮಿತ್ ಪಬುವಾಲ್ ಅವರು ಭಾರತದಲ್ಲಿ ತಯಾರಿಸಿದರು. ಇದರ ನಂತರ ಇದನ್ನು ಲಂಡನ್‌ನ ಲಿಂಕ್ಸ್‌ನಿಂದ ಉತ್ಪಾದಿಸಲು ಪ್ರಾರಂಭಿಸಲಾಯಿತು. 2021 ರಲ್ಲಿ, ಥಾಮಸ್ ಟ್ರೋಫಿಯ ಅಧಿಕೃತ ಸೃಷ್ಟಿಕರ್ತರಾದರು. ಈ ಟ್ರೋಫಿಯನ್ನು ಸಂಪೂರ್ಣವಾಗಿ ಬೆಳ್ಳಿ ಮತ್ತು ರೋಢಿಯಮ್‌ನಿಂದ ಮಾಡಲಾಗಿದೆ. ಇದರ ತೂಕ ಸುಮಾರು 12 ಕೆ.ಜಿ. ಇದರ ಎತ್ತರ 57.15 ಸೆಂ. ಅಗಲವು 16.5 ಸೆಂ.ಮೀ. ಮಾಧ್ಯಮ ವರದಿಗಳ ಪ್ರಕಾರ ಇದರ ಬೆಲೆ 15-20 ಲಕ್ಷ ರೂ. ಎಂದು ಹೇಳಲಾಗುತ್ತದೆ.

ತಂಡಕ್ಕೆ ನೀಡುವುದು ನಿಜವಾದ ಟ್ರೋಫಿಯ?

ಏಕದಿನ ವಿಶ್ವಕಪ್‌ನಂತೆ, ಟಿ20 ವಿಶ್ವಕಪ್‌ನ ನಿಜವಾದ ಟ್ರೋಫಿಯನ್ನು ತಂಡಕ್ಕೆ ನೀಡಲಾಗಿಲ್ಲ. ಬದಲಿಗೆ ಐಸಿಸಿ ಈ ಟ್ರೋಫಿಯನ್ನು ತನ್ನ ಬಳಿಯೇ ಇಟ್ಟುಕೊಂಡಿದೆ. ಆದರೆ ತದ್ರೂಪಿ ಟ್ರೋಫಿಯನ್ನು (ಒಂದೇ ತರ ಕಾಣುವ ಮತ್ತೊಂದು ಟ್ರೋಫಿ) ವಿಜೇತ ತಂಡಕ್ಕೆ ನೀಡಲಾಗುತ್ತದೆ. ಐಸಿಸಿ ಪ್ರತಿ ತಂಡಕ್ಕೆ ಅನುಗುಣವಾಗಿ ಎಲ್ಲಾ ಮೂಲ ಟ್ರೋಫಿಗಳನ್ನು ತನ್ನ ಬಳಿಯೇ ಇರಿಸಿಕೊಳ್ಳುತ್ತದೆ.

ತದ್ರೂಪಿ ಟ್ರೋಫಿ ಯಾರ ಬಳಿ ಉಳಿಯುತ್ತದೆ?

ವಿಜೇತ ತಂಡವು ಪಡೆಯುವ ತದ್ರೂಪಿ ಟ್ರೋಫಿಯನ್ನು ಯಾವುದೇ ಆಟಗಾರ, ನಾಯಕ ಅಥವಾ ಕೋಚ್‌ಗೆ ನೀಡಲಾಗುವುದಿಲ್ಲ. ಬದಲಿಗೆ ಆಯಾ ಚಾಂಪಿಯನ್ ತಂಡದ ಕ್ರಿಕೆಟ್ ಮಂಡಳಿ ಆ ಟ್ರೋಫಿಯನ್ನು ತನ್ನ ಬಳಿ ಇರಿಸಿಕೊಳ್ಳುತ್ತದೆ. ಇದಕ್ಕೂ ಮುನ್ನ ಭಾರತ 3 ವಿಶ್ವಕಪ್ ಗೆದ್ದಿದೆ. ಇವುಗಳಲ್ಲಿ 2007 ರ ಟಿ20 ವಿಶ್ವಕಪ್ ಮತ್ತು 1983 ಮತ್ತು 2011 ಏಕದಿನ ವಿಶ್ವಕಪ್ ಸೇರಿವೆ. ಈ ಮೂರು ವಿಶ್ವಕಪ್‌ ಟ್ರೋಫಿಗಳನ್ನು ಬಿಸಿಸಿಐ ತನ್ನ ಬಳಿ ಇರಿಸಿಕೊಂಡಿದೆ.

ಆಟಗಾರರಿಗೆ ಸಿಗುವುದೇನು?

ವಿಶ್ವಕಪ್ ವಿಜೇತ ತಂಡದ ಆಟಗಾರರಿಗೆ ಅಧಿಕೃತ ಪ್ರಮಾಣಪತ್ರಗಳು ಮತ್ತು ಪದಕಗಳನ್ನು ನೀಡಲಾಗುತ್ತದೆ. ಇದರೊಂದಿಗೆ ವಿಜೇತ ತಂಡ ಪಡೆದ ಮೊತ್ತವನ್ನೂ ಈ ಆಟಗಾರರಿಗೆ ಸಮನಾಗಿ ಹಂಚಲಾಗುತ್ತದೆ. ಪ್ರಸಕ್ತ ವಿಶ್ವಕಪ್ ವಿಜೇತ ತಂಡ 20.37 ಕೋಟಿ ರೂಪಾಯಿಗಳನ್ನು ಬಹುಮಾನವಾಗಿ ಪಡೆದಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ವಿಜೇತ ತಂಡಕ್ಕೆ 125 ಕೋಟಿ ರೂಪಾಯಿ ಬಹುಮಾನ ನೀಡಿದ್ದಾರೆ. ಈ ಎಲ್ಲಾ ಮೊತ್ತವನ್ನು ತಂಡದ ಆಟಗಾರರಿಗೆ ಹಂಚಲಾಗುತ್ತದೆ. ಅದೇ ಸಮಯದಲ್ಲಿ, ವಿವಿಧ ರಾಜ್ಯ ಸರ್ಕಾರಗಳು ತಮ್ಮ ಆಟಗಾರರಿಗೆ ಪ್ರಶಸ್ತಿಗಳನ್ನು ನೀಡುತ್ತವೆ. ಇದಲ್ಲದೇ, ಪಂದ್ಯವನ್ನು ಗೆದ್ದಿದ್ದಕ್ಕಾಗಿ ಆಟಗಾರರಿಗೆ ನೀಡಲಾಗುವ ಪಂದ್ಯಶ್ರೇಷ್ಠ ಪ್ರಶಸ್ತಿ ಸೇರಿದಂತೆ ಇತರ ಪ್ರಶಸ್ತಿಗಳಿಂದ ಬಂದ ಬಹುಮಾನ ಆಟಗಾರರ ಖಾತೆಗೆ ಜಮಾವಾಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:13 pm, Mon, 1 July 24

ತಾಜಾ ಸುದ್ದಿ
 ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು
 ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!
ವಿದ್ಯಾರ್ಥಿಗಳೊಂದಿಗೆ ಕುಣಿದು ಕುಪ್ಪಳಿಸಿದ ಶಾಸಕ ಸಮೃದ್ದಿ ಮಂಜುನಾಥ್
ವಿದ್ಯಾರ್ಥಿಗಳೊಂದಿಗೆ ಕುಣಿದು ಕುಪ್ಪಳಿಸಿದ ಶಾಸಕ ಸಮೃದ್ದಿ ಮಂಜುನಾಥ್
ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮೋದಿ ಮಾತು
ಮುಡಾ ಹಗರಣದ ಕಡತಗಳನ್ನು ಸಚಿವ ಸುರೇಶ್ ಬೆಂಗಳೂರುಗೆ ತಂದಿದ್ದಾರೆ: ವಿಜಯೇಂದ್ರ
ಮುಡಾ ಹಗರಣದ ಕಡತಗಳನ್ನು ಸಚಿವ ಸುರೇಶ್ ಬೆಂಗಳೂರುಗೆ ತಂದಿದ್ದಾರೆ: ವಿಜಯೇಂದ್ರ
ಉಡುಪಿ: ಬೈಕ್​ನ ಹೆಡ್ ಲೈಟ್ ವೈಸರ್​ನಲ್ಲಿ ಹಾವು ಪ್ರತ್ಯಕ್ಷ
ಉಡುಪಿ: ಬೈಕ್​ನ ಹೆಡ್ ಲೈಟ್ ವೈಸರ್​ನಲ್ಲಿ ಹಾವು ಪ್ರತ್ಯಕ್ಷ
‘ನನ್ನ ದೇವ್ರು’ ಮೂಲಕ ಕಿರತೆರೆಗೆ ಮರಳಿದ ಅಶ್ವಿನಿ ನಕ್ಷತ್ರದ ‘ಹೆಂಡ್ತಿ’
‘ನನ್ನ ದೇವ್ರು’ ಮೂಲಕ ಕಿರತೆರೆಗೆ ಮರಳಿದ ಅಶ್ವಿನಿ ನಕ್ಷತ್ರದ ‘ಹೆಂಡ್ತಿ’
ಯುವತಿಯರ ಮುಂದೆ ಬಾಡಿ ಪ್ರದರ್ಶಿಸುತ್ತಿದ್ದ ಯುವಕನಿಗೆ ಪಾಠ ಕಲಿಸಿದ  ಪೊಲೀಸರು
ಯುವತಿಯರ ಮುಂದೆ ಬಾಡಿ ಪ್ರದರ್ಶಿಸುತ್ತಿದ್ದ ಯುವಕನಿಗೆ ಪಾಠ ಕಲಿಸಿದ  ಪೊಲೀಸರು
‘ರೇಣುಕಾಸ್ವಾಮಿ ಮುಗ್ಧನಲ್ಲ, ವಿಕೃತಕಾಮಿ’; ವಿ ಮನೋಹರ್ ಹೇಳಿಕೆ
‘ರೇಣುಕಾಸ್ವಾಮಿ ಮುಗ್ಧನಲ್ಲ, ವಿಕೃತಕಾಮಿ’; ವಿ ಮನೋಹರ್ ಹೇಳಿಕೆ