T20 World cup 2024: ಟಿ20 ವಿಶ್ವಕಪ್ನ ಮೊದಲ ಸುತ್ತಿನ ಪಂದ್ಯಗಳು ಪೂರ್ಣಗೊಂಡಿವೆ. 20 ತಂಡಗಳ ಕದನದಲ್ಲಿ ಇದೀಗ 8 ತಂಡಗಳು ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಹಾಗೆಯೇ 12 ತಂಡಗಳು ಟಿ20 ವಿಶ್ವಕಪ್ನಿಂದ ಹೊರಬಿದ್ದಿದೆ. ಅದರಂತೆ ಜೂನ್ 19 ರಿಂದ ಸೂಪರ್-8 ಅಥವಾ ದ್ವಿತೀಯ ಸುತ್ತಿನ ಪಂದ್ಯಗಳು ಶುರುವಾಗಲಿದೆ. ಈ ಸುತ್ತಿನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ಸುತ್ತಿನ ಪಂದ್ಯಗಳ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ….
ಈ ಪ್ರಶ್ನೆಗೆ ಸರಳ ಉತ್ತರ 8 ತಂಡಗಳ ಮುಖಾಮುಖಿ. ಅಂದರೆ ಮೊದಲ ಸುತ್ತಿನಿಂದ 8 ತಂಡಗಳು ದ್ವಿತೀಯ ಸುತ್ತಿಗೆ ಅರ್ಹತೆ ಪಡೆದಿದೆ. ಈ ತಂಡಗಳ ಮುಖಾಮುಖಿಯನ್ನು ಸೂಪರ್-8 ಎಂದು ಕರೆಯಲಾಗುತ್ತದೆ.
ಸೂಪರ್-8 ಹಂತದಲ್ಲಿ ಒಟ್ಟು ಎಂಟು ತಂಡಗಳು ಕಣಕ್ಕಿಳಿಯಲಿದೆ. ಈ ತಂಡಗಳನ್ನು ಎರಡು ಗ್ರೂಪ್ಗಳಾಗಿ ವಿಂಗಡಿಸಲಾಗುತ್ತದೆ. ಇಲ್ಲಿ ಒಂದು ಗುಂಪಿನಲ್ಲಿ 4 ತಂಡಗಳಿರಲಿವೆ.
ಮೊದಲ ಸುತ್ತಿನಲ್ಲಿ ಒಂದೇ ಗುಂಪಿನಲ್ಲಿದ್ದ ತಂಡಗಳು ಸೂಪರ್-8 ಹಂತದಲ್ಲಿ ಮತ್ತೆ ಮುಖಾಮುಖಿಯಾಗುವುದಿಲ್ಲ. ಅಂದರೆ ಮೊದಲ ಸುತ್ತಿನಲ್ಲಿ ಭಾರತ ಮತ್ತು ಯುಎಸ್ಎ ತಂಡಗಳು ಗ್ರೂಪ್-ಎ ನಲ್ಲ್ಲಿತ್ತು. ಆದರೆ ದ್ವಿತೀಯ ಸುತ್ತಿನಲ್ಲಿ ಈ ತಂಡಗಳು ಪರಸ್ಪರ ಬೇರೆ ಬೇರೆ ಗ್ರೂಪ್ನಲ್ಲಿ ಕಾಣಿಸಿಕೊಳ್ಳಲಿದೆ.
ಇದನ್ನೂ ಓದಿ: T20 World Cup 2024: ವಿಶ್ವ ದಾಖಲೆಯ ವಿಜಯ ಸಾಧಿಸಿದ ಇಂಗ್ಲೆಂಡ್
ಇಲ್ಲಿ ಒಂದೇ ಗ್ರೂಪ್ನಲ್ಲಿರುವ ತಂಡಗಳ ನಡುವೆ ಪೈಪೋಟಿ ನಡೆಯಲಿದೆ. ಅಂದರೆ ಗ್ರೂಪ್-1 ರಲ್ಲಿರುವ ಭಾರತ ತಂಡವು, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ್ ಮತ್ತು ಬಾಂಗ್ಲಾದೇಶ್ ವಿರುದ್ಧ ಪಂದ್ಯಗಳನ್ನಾಡಲಿದೆ. ಗ್ರೂಪ್-2 ನಲ್ಲೂ ಇದೇ ಮಾದರಿಯಲ್ಲಿ 4 ತಂಡಗಳು ಮುಖಾಮುಖಿಯಾಗಲಿದೆ.
ಸೂಪರ್-8 ಸುತ್ತಿನಲ್ಲಿ ಎರಡು ಗ್ರೂಪ್ಗಳಲ್ಲೂ ಪಾಯಿಂಟ್ಸ್ ಟೇಬಲ್ ಇರಲಿದೆ. ಈ ಪಾಯಿಂಟ್ಸ್ ಟೇಬಲ್ಗಳಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮುಂದಿನ ಹಂತಕ್ಕೇರಲಿದೆ. ಅಂದರೆ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಲಿದೆ.
ಸೂಪರ್-8 ಸುತ್ತಿನ ವೇಳಾಪಟ್ಟಿ:
ದಿನಾಂಕ | ಪಂದ್ಯಗಳು | ಸ್ಥಳ |
ಜೂನ್ 19 | ಯುಎಸ್ಎ vs ಸೌತ್ ಆಫ್ರಿಕಾ | ಆಂಟಿಗುವಾ ಮತ್ತು ಬಾರ್ಬುಡಾ |
ಜೂನ್ 19 | ಇಂಗ್ಲೆಂಡ್ vs ವೆಸ್ಟ್ ಇಂಡೀಸ್ | ಸೇಂಟ್ ಲೂಸಿಯಾ |
ಜೂನ್ 20 | ಭಾರತ vs ಅಫ್ಘಾನಿಸ್ತಾನ್ | ಬಾರ್ಬಡೋಸ್ |
ಜೂನ್ 20 | ಆಸ್ಟ್ರೇಲಿಯಾ vs ಬಾಂಗ್ಲಾದೇಶ್ | ಆಂಟಿಗುವಾ ಮತ್ತು ಬಾರ್ಬುಡಾ |
ಜೂನ್ 21 | ಇಂಗ್ಲೆಂಡ್ vs ಸೌತ್ ಆಫ್ರಿಕಾ | ಸೇಂಟ್ ಲೂಸಿಯಾ |
ಜೂನ್ 21 | ಯುಎಸ್ಎ vs ವೆಸ್ಟ್ ಇಂಡೀಸ್ | ಬಾರ್ಬಡೋಸ್ |
ಜೂನ್ 22 | ಭಾರತ vs ಬಾಂಗ್ಲಾದೇಶ್ | ಆಂಟಿಗುವಾ ಮತ್ತು ಬಾರ್ಬುಡಾ |
ಜೂನ್ 22 | ಅಫ್ಘಾನಿಸ್ತಾನ್ vs ಆಸ್ಟ್ರೇಲಿಯಾ | ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ |
ಜೂನ್ 23 | ಯುಎಸ್ಎ vs ಇಂಗ್ಲೆಂಡ್ | ಬಾರ್ಬಡೋಸ್ |
ಜೂನ್ 23 | ವೆಸ್ಟ್ ಇಂಡೀಸ್ vs ಸೌತ್ ಆಫ್ರಿಕಾ | ಆಂಟಿಗುವಾ ಮತ್ತು ಬಾರ್ಬುಡಾ |
ಜೂನ್ 24 | ಆಸ್ಟ್ರೇಲಿಯಾ vs ಭಾರತ | ಸೇಂಟ್ ಲೂಸಿಯಾ |
ಜೂನ್ 24 | ಅಫ್ಘಾನಿಸ್ತಾನ್ vs ಬಾಂಗ್ಲಾದೇಶ್ | ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ |