T20 World Cup 2024: ವಿಶ್ವ ದಾಖಲೆಯ ವಿಜಯ ಸಾಧಿಸಿದ ಇಂಗ್ಲೆಂಡ್

T20 World Cup 2024: ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತೀ ಹೆಚ್ಚು ಎಸೆತಗಳನ್ನು ಬಾಕಿಯಿರಿಸಿ ಗೆದ್ದ ತಂಡವೆಂಬ ವಿಶ್ವ ದಾಖಲೆಯನ್ನು ಇಂಗ್ಲೆಂಡ್ ತಂಡ ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾ ತಂಡದ ಹೆಸರಿನಲ್ಲಿತ್ತು. ಇದೀಗ ಈ ದಾಖಲೆಯನ್ನು ಮುರಿದು ಹೊಸ ಇತಿಹಾಸ ಬರೆಯುವಲ್ಲಿ ಆಂಗ್ಲರು ಯಶಸ್ವಿಯಾಗಿದ್ದಾರೆ.

|

Updated on: Jun 15, 2024 | 10:08 AM

T20 World Cup 2024: ಟಿ20 ವಿಶ್ವಕಪ್​ನ 28ನೇ ಪಂದ್ಯದಲ್ಲಿ ಇಂಗ್ಲೆಂಡ್ (England) ತಂಡವು ಭರ್ಜರಿ ಜಯ ಸಾಧಿಸಿದೆ. ಆದರೆ ಅದು ಅಂತಿಂಥ ಗೆಲುವಲ್ಲ ಎಂಬುದು ವಿಶೇಷ. ಓಮಾನ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡಿದ್ದರು.

1 / 6
ಅದರಂತೆ ಮೊದಲು ಬ್ಯಾಟ್ ಮಾಡಿದ ಒಮಾನ್ ತಂಡವು ಇಂಗ್ಲೆಂಡ್ ಬೌಲರ್​ಗಳ ಕರಾರುವಾಕ್ ದಾಳಿಗೆ ಕಕ್ಕಾಬಿಕ್ಕಿಯಾಗಿದ್ದರು. ಪರಿಣಾಮ 13.2 ಓವರ್​ಗಳಲ್ಲಿ ಕೇವಲ 47 ರನ್​ಗಳಿಸಿ ಒಮಾನ್ ತಂಡವು ಆಲೌಟ್ ಆಯಿತು.

2 / 6
48 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಫಿಲ್ ಸಾಲ್ಟ್ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್​ನ ಮೊದಲೆರಡು ಎಸೆತಗಳಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಸಾಲ್ಟ್ ಅಬ್ಬರಿಸಿ ಔಟಾದರು. ಇನ್ನು ಜೋಸ್ ಬಟ್ಲರ್ 8 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 24 ರನ್ ಚಚ್ಚಿದರು. ಈ ಮೂಲಕ ಇಂಗ್ಲೆಂಡ್ ತಂಡವು 3.1 ಓವರ್​ಗಳಲ್ಲಿ 50 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು.

3 / 6
ಅಂದರೆ ಇಂಗ್ಲೆಂಡ್ ತಂಡವು ಈ ಪಂದ್ಯವನ್ನು ಕೇವಲ 19 ಎಸೆತಗಳಲ್ಲಿ ಮುಗಿಸಿದ್ದರು. ಇದರೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅಮೋಘ ಗೆಲುವು ದಾಖಲಿಸಿದ ವಿಶೇಷ ದಾಖಲೆಯೊಂದು ಇಂಗ್ಲೆಂಡ್ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾ ತಂಡದ ಹೆಸರಿನಲ್ಲಿತ್ತು.

4 / 6
2014 ರ ಟಿ20 ವಿಶ್ವಕಪ್​ನಲ್ಲಿ ಶ್ರೀಲಂಕಾ ವಿರುದ್ಧ ನೆದರ್​ಲೆಂಡ್ಸ್ ತಂಡವು ಕೇವಲ 39 ರನ್​ಗಳಿಗೆ ಆಲೌಟ್ ಆಗಿತ್ತು. ಈ ಗುರಿಯನ್ನು ಕೇವಲ 5 ಓವರ್​ಗಳಲ್ಲಿ (30 ಎಸೆತಗಳು) ಚೇಸ್​ ಮಾಡಿ ಶ್ರೀಲಂಕಾ ಭರ್ಜರಿ ಜಯ ಸಾಧಿಸಿತ್ತು. ಈ ಮೂಲಕ ಟಿ20 ವಿಶ್ವಕಪ್​ನಲ್ಲಿ ಅತೀ ಹೆಚ್ಚು ಬಾಲ್ ಬಾಕಿ ಉಳಿಸಿ ಗೆದ್ದ ವಿಶ್ವ ದಾಖಲೆಯನ್ನು ಶ್ರೀಲಂಕಾ ತಂಡ ನಿರ್ಮಿಸಿದ್ದರು.

5 / 6
ಇದೀಗ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಇಂಗ್ಲೆಂಡ್ ಬ್ಯಾಟರ್​ಗಳು ಯಶಸ್ವಿಯಾಗಿದ್ದಾರೆ. ಕೇವಲ 3.1 ಓವರ್​ಗಳಲ್ಲಿ 48 ರನ್​ಗಳ ಗುರಿಯನ್ನು ಚೇಸ್ ಮಾಡಿ ಇಂಗ್ಲೆಂಡ್ ಬ್ಯಾಟರ್​ಗಳು 101 ಎಸೆತಗಳನ್ನು ಬಾಕಿ ಉಳಿಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್​ ಇತಿಹಾಸದಲ್ಲೇ ಅಮೋಘ ಗೆಲುವು ದಾಖಲಿಸಿ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

6 / 6
Follow us
ಗಾಯಾಳು ನೆರವಿಗೆ ಧಾವಿಸದ ಪೊಲೀಸ್ರು, ಮಾನವೀಯತೆ ಮರೆತರಾ?

ಚುನಾವಣಾ ಸೋಲುಗಳಿಗೆ ಕುಮಾರಸ್ವಾಮಿ ಕುಟುಂಬ ಬೇರೆಯವರನ್ನು ದೂಷಿಸುತ್ತದೆ!

ಬೆಂಗಳೂರಲ್ಲಿ ಹೆಚ್ಚಿದ ಪುಂಡರ ಹುಚ್ಚಾಟ; ಕಾರಿನ ಹಿಂಭಾಗ ನೇತಾಡಿ ಪ್ರಯಾಣ

ಸದನದಲ್ಲಿ ‘ವಾಲ್ಮೀಕಿ' ಹಗರಣ ಗುದ್ದಾಟ: ಸಿದ್ದರಾಮಯ್ಯ ನೆಮ್ಮದಿಗೆ ಭಂಗವಿಲ್ಲ

ಶೇಕಡ 58ರಷ್ಟು ಹೆಚ್ಚಲಿದೆ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ!

ಜೈಲಿನಲ್ಲಿರುವ ಪ್ರಜ್ವಲ್​ ರೇವಣ್ಣಗೆ ಎರಡು ಬ್ಯಾಗ್​ನಲ್ಲಿ ಬಂತು ಸ್ಪೆಷಲ್ ಊಟ

ಶಿವಕುಮಾರ್ ಸದನದಲ್ಲಿ ಮಾತಾಡುವ ಶೈಲಿ ಬದಲಿಸದಿದ್ದರೆ ವಿಪಕ್ಷ ಅನುಕರಿಸುತ್ತದೆ

ಅಂಕೋಲಾ: ಹೆದ್ದಾರಿ ಮೇಲೆ ಗುಡ್ಡ ಕುಸಿದು 9 ಜನ ಮಣ್ಣಿನಡಿ ಸಿಲುಕಿರುವ ಶಂಕೆ

ಎಲ್​ಪಿಜಿ ಗ್ಯಾಸ್ ಕನೆಕ್ಷನ್ ಹೊಂದಿರುವವರು ಇಕೆವೈಸಿ ಅಪ್​ಡೇಟ್ ಮಾಡಬೇಕು!

ಅಶ್ವಥ್ ನಾರಾಯಣ ಲಂಚಕೋರರ ಪಿತಾಮಹ ಎಂದ ಶಿವಕುಮಾರ್, ಸಿಡಿದ ಬಿಜೆಪಿ ಶಾಸಕರು