T20 World Cup 2024: ಒಂದೇ ಓವರ್ನಲ್ಲಿ 36 ರನ್ ನೀಡಿದ ಅಫ್ಘಾನ್ ಬೌಲರ್
T20 World Cup 2024: ವೆಸ್ಟ್ ಇಂಡೀಸ್ ನೀಡಿದ 219 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಅಫ್ಘಾನಿಸ್ತಾನ್ ತಂಡವು ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಕೇವಲ 63 ರನ್ಗಳಿಗೆ 5 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟ ಸಿಲುಕಿದ ಅಫ್ಘಾನಿಸ್ತಾನ್ ವಿರುದ್ಧ ವೆಸ್ಟ್ ಇಂಡೀಸ್ ಬೌಲರ್ಗಳು ಪಾರಾಕ್ರಮ ಮೆರೆದರು. ಪರಿಣಾಮ 114 ರನ್ಗೆ ಅಫ್ಘಾನ್ ತಂಡ ಆಲೌಟ್ ಆಯಿತು.
T20 World Cup 2024: ಟಿ20 ವಿಶ್ವಕಪ್ನ ಮೊದಲ ಸುತ್ತಿನ ಕೊನೆಯ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ಬ್ಯಾಟರ್ಗಳು ಅಕ್ಷರಶಃ ಅಬ್ಬರಿಸಿದ್ದಾರೆ. ಸೆಂಟ್ ಲೂಸಿಯಾದ ಡಾರೆನ್ ಸ್ಯಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ತಂಡದ ನಾಯಕ ರಶೀದ್ ಖಾನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡಕ್ಕೆ ಜಾನ್ಸನ್ ಚಾರ್ಲ್ಸ್ಸ್ ಸ್ಪೋಟಕ ಆರಂಭ ಒದಗಿಸಿದ್ದರು.
ಕೇವಲ 27 ಎಸೆತಗಳನ್ನು ಎದುರಿಸಿದ ಜಾನ್ಸನ್ ಚಾರ್ಲ್ಸ್ 8 ಫೋರ್ಗಳೊಂದಿಗೆ 43 ರನ್ ಬಾರಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕೋಲಸ್ ಪೂರನ್ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದರು.
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಪೂರನ್ 53 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 98 ರನ್ ಚಚ್ಚಿದರು. ಅಲ್ಲದೆ ಕೇವಲ 2 ರನ್ಗಳಿಂದ ಶತಕ ವಂಚಿತರಾಗಿ ಪೆವಿಲಿಯನ್ಗೆ ಹಿಂತಿರುಗಿದರು.
ಇನ್ನು ರೋವ್ಮನ್ ಪೊವೆಲ್ (26) ಹಾಗೂ ಶಾಯ್ ಹೋಪ್ (25) ಕೊನೆಯ ಓವರ್ಗಳಲ್ಲಿ ಅಬ್ಬರಿಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಕಲೆಹಾಕಿತು.
ಒಂದೇ ಓವರ್ನಲ್ಲಿ 36 ರನ್ಗಳು:
ಈ ಪಂದ್ಯದ 4ನೇ ಓವರ್ನಲ್ಲಿ ಯುವ ವೇಗಿ ಅಝ್ಮತುಲ್ಲಾ ಒಮರ್ಝೈ ಬರೋಬ್ಬರಿ 36 ರನ್ ನೀಡಿ ಕಳಪೆ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡರು. ಈ ಓವರ್ನ ಮೊದಲ ಎಸೆತದಲ್ಲಿ ನಿಕೋಲಸ್ ಪೂರನ್ ಭರ್ಜರಿ ಸಿಕ್ಸ್ ಸಿಡಿಸಿದ್ದರು. ಇನ್ನು 2ನೇ ಎಸೆತದಲ್ಲಿ ನೋಬಾಲ್ಗೆ ಫೋರ್ ಬಾರಿಸಿದರು. ಆ ಬಳಿಕ ಎಸೆದ ಚೆಂಡು ವೈಡ್ ಆಗಿ ಬೌಂಡರಿ ಲೈನ್ ದಾಟಿತು. ಅದರಂತೆ 5 ರನ್ ಲಭಿಸಿದೆ.
ಇದಾದ ಬಳಿಕ ಎಸೆದ 2ನೇ ಮರು ಎಸೆತದಲ್ಲಿ ಯಾವುದೇ ರನ್ ನೀಡಲಿಲ್ಲ. 3ನೇ ಎಸೆತದಲ್ಲಿ ಲೈಗ್ ಬೈ ಫೋರ್. 4ನೇ ಎಸೆತದಲ್ಲಿ ಪೂರನ್ ಮತ್ತೊಂದು ಫೋರ್ ಬಾರಿಸಿದರು. 5ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು.
ಕೊನೆಯ ಎಸೆತದಲ್ಲಿ ನಿಕೋಲಸ್ ಪೂರನ್ ಲಾಂಗ್ ಆಫ್ನತ್ತ ಸಿಕ್ಸ್ ಸಿಡಿಸಿದರು. ಈ ಮೂಲಕ ಅಝ್ಮತುಲ್ಲಾ ಒಮರ್ಝೈ ಒಂದೇ ಓವರ್ನಲ್ಲಿ 36 ರನ್ ಬಿಟ್ಟು ಕೊಟ್ಟರು.
ಸೋತ ಅಫ್ಘಾನಿಸ್ತಾನ್:
ವೆಸ್ಟ್ ಇಂಡೀಸ್ ನೀಡಿದ 219 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಅಫ್ಘಾನಿಸ್ತಾನ್ ತಂಡವು ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಕೇವಲ 63 ರನ್ಗಳಿಗೆ 5 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟ ಸಿಲುಕಿದ ಅಫ್ಘಾನಿಸ್ತಾನ್ ವಿರುದ್ಧ ವಿಂಡೀಸ್ ಪಡೆ ಪಾರಾಕ್ರಮ ಮೆರೆದರು.
ಪರಿಣಾಮ 16.2 ಓವರ್ಗಳಲ್ಲಿ 114 ರನ್ಗಳಿಗೆ ಅಫ್ಘಾನಿಸ್ತಾನ್ ಆಲೌಟ್ ಆಯಿತು. ಈ ಮೂಲಕ ವೆಸ್ಟ್ ಇಂಡೀಸ್ ತಂಡವು 104 ರನ್ಗಳ ಭರ್ಜರಿ ಜಯ ಸಾಧಿಸಿದೆ.
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಬ್ರ್ಯಾಂಡನ್ ಕಿಂಗ್ , ಜಾನ್ಸನ್ ಚಾರ್ಲ್ಸ್ , ನಿಕೋಲಸ್ ಪೂರನ್ (ವಿಕೆಟ್ ಕೀಪರ್) , ಶಾಯ್ ಹೋಪ್ , ರೋವ್ಮನ್ ಪೊವೆಲ್ (ನಾಯಕ) , ಶೆರ್ಫೇನ್ ರುದರ್ಫೋರ್ಡ್ , ಆಂಡ್ರೆ ರಸೆಲ್ , ಅಕೇಲ್ ಹೋಸೇನ್ , ಅಲ್ಝಾರಿ ಜೋಸೆಫ್ , ಗುಡಕೇಶ್ ಮೋಟಿ , ಓಬೆಡ್ ಮೆಕಾಯ್.
ಇದನ್ನೂ ಓದಿ: Lockie Ferguson: ಟಿ20 ವಿಶ್ವಕಪ್ನಲ್ಲಿ ವಿಶ್ವ ದಾಖಲೆ ಬರೆದ ಲಾಕಿ ಫರ್ಗುಸನ್
ಅಫ್ಘಾನಿಸ್ತಾನ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ಇಬ್ರಾಹಿಂ ಝದ್ರಾನ್ , ಗುಲ್ಬದಿನ್ ನೈಬ್ , ಅಝ್ಮತುಲ್ಲಾ ಒಮರ್ಝೈ , ಮೊಹಮ್ಮದ್ ನಬಿ , ನಜಿಬುಲ್ಲಾ ಝದ್ರಾನ್ , ಕರೀಂ ಜನತ್ , ರಶೀದ್ ಖಾನ್ (ನಾಯಕ) , ನೂರ್ ಅಹ್ಮದ್ , ನವೀನ್-ಉಲ್-ಹಕ್ , ಫಝಲ್ಹಕ್ ಫಾರೂಖಿ.