AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World cup 2024: ಮೊದಲ ಸುತ್ತು ಮುಕ್ತಾಯ: ಹೇಗಿರಲಿದೆ ದ್ವಿತೀಯ ಸುತ್ತಿನ ಪೈಪೋಟಿ?

T20 World cup 2024: ಟಿ20 ವಿಶ್ವಕಪ್​ನಿಂದ ಪಾಕಿಸ್ತಾನ್, ನ್ಯೂಝಿಲೆಂಡ್, ನಮೀಬಿಯಾ, ಸ್ಕಾಟ್ಲೆಂಡ್, ಶ್ರೀಲಂಕಾ, ಪಪುವಾ ನ್ಯೂ ಗಿನಿಯಾ, ಕೆನಡಾ, ಐರ್ಲೆಂಡ್, ಒಮಾನ್, ಉಗಾಂಡ, ನೆದೆರ್​ಲೆಂಡ್, ನೇಪಾಳ ತಂಡಗಳು ಹೊರಬಿದ್ದಿದೆ. ಇನ್ನು ಭಾರತ, ಬಾಂಗ್ಲಾದೇಶ್, ಇಂಗ್ಲೆಂಡ್, ಅಫ್ಘಾನಿಸ್ತಾನ್, ಆಸ್ಟ್ರೇಲಿಯಾ, ಯುಎಸ್​ಎ, ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾ ತಂಡಗಳು ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ.

T20 World cup 2024: ಮೊದಲ ಸುತ್ತು ಮುಕ್ತಾಯ: ಹೇಗಿರಲಿದೆ ದ್ವಿತೀಯ ಸುತ್ತಿನ ಪೈಪೋಟಿ?
T20 World cup 2024
ಝಾಹಿರ್ ಯೂಸುಫ್
|

Updated on: Jun 18, 2024 | 2:23 PM

Share

T20 World cup 2024:  ಟಿ20 ವಿಶ್ವಕಪ್​ನ ಮೊದಲ ಸುತ್ತಿನ ಪಂದ್ಯಗಳು ಪೂರ್ಣಗೊಂಡಿವೆ. 20 ತಂಡಗಳ ಕದನದಲ್ಲಿ ಇದೀಗ 8 ತಂಡಗಳು ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಹಾಗೆಯೇ 12 ತಂಡಗಳು ಟಿ20 ವಿಶ್ವಕಪ್​ನಿಂದ ಹೊರಬಿದ್ದಿದೆ. ಅದರಂತೆ ಜೂನ್ 19 ರಿಂದ ಸೂಪರ್-8 ಅಥವಾ ದ್ವಿತೀಯ ಸುತ್ತಿನ ಪಂದ್ಯಗಳು ಶುರುವಾಗಲಿದೆ. ಈ ಸುತ್ತಿನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ಸುತ್ತಿನ ಪಂದ್ಯಗಳ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ….

ಸೂಪರ್-8 ಎಂದರೇನು?

ಈ ಪ್ರಶ್ನೆಗೆ ಸರಳ ಉತ್ತರ 8 ತಂಡಗಳ ಮುಖಾಮುಖಿ. ಅಂದರೆ ಮೊದಲ ಸುತ್ತಿನಿಂದ 8 ತಂಡಗಳು ದ್ವಿತೀಯ ಸುತ್ತಿಗೆ ಅರ್ಹತೆ ಪಡೆದಿದೆ. ಈ ತಂಡಗಳ ಮುಖಾಮುಖಿಯನ್ನು ಸೂಪರ್-8 ಎಂದು ಕರೆಯಲಾಗುತ್ತದೆ.

ಹೇಗಿರಲಿದೆ ಮುಖಾಮುಖಿ?

ಸೂಪರ್-8 ಹಂತದಲ್ಲಿ ಒಟ್ಟು ಎಂಟು ತಂಡಗಳು ಕಣಕ್ಕಿಳಿಯಲಿದೆ. ಈ ತಂಡಗಳನ್ನು ಎರಡು ಗ್ರೂಪ್​ಗಳಾಗಿ ವಿಂಗಡಿಸಲಾಗುತ್ತದೆ. ಇಲ್ಲಿ ಒಂದು ಗುಂಪಿನಲ್ಲಿ 4 ತಂಡಗಳಿರಲಿವೆ.

ಯಾರೆಲ್ಲಾ ಮುಖಾಮುಖಿ?

ಮೊದಲ ಸುತ್ತಿನಲ್ಲಿ ಒಂದೇ ಗುಂಪಿನಲ್ಲಿದ್ದ ತಂಡಗಳು ಸೂಪರ್-8 ಹಂತದಲ್ಲಿ ಮತ್ತೆ ಮುಖಾಮುಖಿಯಾಗುವುದಿಲ್ಲ. ಅಂದರೆ ಮೊದಲ ಸುತ್ತಿನಲ್ಲಿ ಭಾರತ ಮತ್ತು ಯುಎಸ್​ಎ ತಂಡಗಳು ಗ್ರೂಪ್-ಎ ನಲ್ಲ್ಲಿತ್ತು. ಆದರೆ ದ್ವಿತೀಯ ಸುತ್ತಿನಲ್ಲಿ ಈ ತಂಡಗಳು ಪರಸ್ಪರ ಬೇರೆ ಬೇರೆ ಗ್ರೂಪ್​ನಲ್ಲಿ ಕಾಣಿಸಿಕೊಳ್ಳಲಿದೆ.

ಯಾವ ಗ್ರೂಪ್​ನಲ್ಲಿ ಯಾವ ತಂಡ?

  • ಗ್ರೂಪ್-1
  • ಭಾರತ
  • ಆಸ್ಟ್ರೇಲಿಯಾ
  • ಅಫ್ಘಾನಿಸ್ತಾನ್
  • ಬಾಂಗ್ಲಾದೇಶ್

ಇದನ್ನೂ ಓದಿ: T20 World Cup 2024: ವಿಶ್ವ ದಾಖಲೆಯ ವಿಜಯ ಸಾಧಿಸಿದ ಇಂಗ್ಲೆಂಡ್

  • ಗ್ರೂಪ್-2
  • ಯುಎಸ್​ಎ
  • ವೆಸ್ಟ್ ಇಂಡೀಸ್
  • ಸೌತ್ ಆಫ್ರಿಕಾ
  • ಇಂಗ್ಲೆಂಡ್

4 ತಂಡಗಳ ಮುಖಾಮುಖಿ ಹೇಗೆ?

ಇಲ್ಲಿ ಒಂದೇ ಗ್ರೂಪ್​ನಲ್ಲಿರುವ ತಂಡಗಳ ನಡುವೆ ಪೈಪೋಟಿ ನಡೆಯಲಿದೆ. ಅಂದರೆ ಗ್ರೂಪ್-1 ರಲ್ಲಿರುವ ಭಾರತ ತಂಡವು, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ್ ಮತ್ತು ಬಾಂಗ್ಲಾದೇಶ್ ವಿರುದ್ಧ ಪಂದ್ಯಗಳನ್ನಾಡಲಿದೆ. ಗ್ರೂಪ್-2 ನಲ್ಲೂ ಇದೇ ಮಾದರಿಯಲ್ಲಿ 4 ತಂಡಗಳು ಮುಖಾಮುಖಿಯಾಗಲಿದೆ.

ಮುಂದಿನ ಹಂತಕ್ಕೇರುವುದು ಹೇಗೆ?

ಸೂಪರ್-8 ಸುತ್ತಿನಲ್ಲಿ ಎರಡು ಗ್ರೂಪ್​ಗಳಲ್ಲೂ ಪಾಯಿಂಟ್ಸ್ ಟೇಬಲ್ ಇರಲಿದೆ. ಈ ಪಾಯಿಂಟ್ಸ್​ ಟೇಬಲ್​ಗಳ​ಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮುಂದಿನ ಹಂತಕ್ಕೇರಲಿದೆ. ಅಂದರೆ ಸೆಮಿಫೈನಲ್​ ಸುತ್ತಿಗೆ ಪ್ರವೇಶಿಸಲಿದೆ.

ಸೂಪರ್-8 ಸುತ್ತಿನ ವೇಳಾಪಟ್ಟಿ:

ದಿನಾಂಕ  ಪಂದ್ಯಗಳು ಸ್ಥಳ
ಜೂನ್ 19 ಯುಎಸ್​ಎ vs ಸೌತ್ ಆಫ್ರಿಕಾ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 19 ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಸೇಂಟ್ ಲೂಸಿಯಾ
ಜೂನ್ 20 ಭಾರತ vs ಅಫ್ಘಾನಿಸ್ತಾನ್ ಬಾರ್ಬಡೋಸ್
ಜೂನ್ 20 ಆಸ್ಟ್ರೇಲಿಯಾ vs ಬಾಂಗ್ಲಾದೇಶ್ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 21 ಇಂಗ್ಲೆಂಡ್ vs ಸೌತ್ ಆಫ್ರಿಕಾ ಸೇಂಟ್ ಲೂಸಿಯಾ
ಜೂನ್ 21 ಯುಎಸ್​ಎ vs ವೆಸ್ಟ್ ಇಂಡೀಸ್ ಬಾರ್ಬಡೋಸ್
ಜೂನ್ 22 ಭಾರತ vs ಬಾಂಗ್ಲಾದೇಶ್ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 22 ಅಫ್ಘಾನಿಸ್ತಾನ್ vs ಆಸ್ಟ್ರೇಲಿಯಾ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 23 ಯುಎಸ್ಎ​ vs ಇಂಗ್ಲೆಂಡ್ ಬಾರ್ಬಡೋಸ್
ಜೂನ್ 23 ವೆಸ್ಟ್ ಇಂಡೀಸ್ vs ಸೌತ್ ಆಫ್ರಿಕಾ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 24 ಆಸ್ಟ್ರೇಲಿಯಾ vs ಭಾರತ ಸೇಂಟ್ ಲೂಸಿಯಾ
ಜೂನ್ 24 ಅಫ್ಘಾನಿಸ್ತಾನ್ vs ಬಾಂಗ್ಲಾದೇಶ್ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್

Follow Us
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ