T20 World Cup 2024: ಸೂಪರ್-8 ಆಡಲ್ಲಿರುವ ತಂಡಗಳನ್ನು ಹೆಸರಿಸಿದ ಮೊಹಮ್ಮದ್ ಶಮಿ

|

Updated on: May 29, 2024 | 11:06 PM

T20 World Cup 2024: ಪ್ರತಿ ಗುಂಪಿನಿಂದ 2 ತಂಡಗಳು ಸೂಪರ್-8 ಗೆ ಅರ್ಹತೆ ಪಡೆಯುತ್ತವೆ. ಈ 8 ತಂಡಗಳು ಯಾರಾಗಬಹುದು ಎಂಬುದರ ಕುರಿತು ಅನೇಕ ಆಟಗಾರರು ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಅವರಲ್ಲಿ ಟೀಂ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಕೂಡ ಒಬ್ಬರು.

T20 World Cup 2024: ಸೂಪರ್-8 ಆಡಲ್ಲಿರುವ ತಂಡಗಳನ್ನು ಹೆಸರಿಸಿದ ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ
Follow us on

ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ (T20 World Cup 2024) ಎಲ್ಲಾ ತಂಡಗಳು ನ್ಯೂಯಾರ್ಕ್‌ಗೆ ತಲುಪಿವೆ. ಈಗಾಗಲೇ ಅಭ್ಯಾಸ ಪಂದ್ಯಗಳು ಸಹ ಆರಂಭವಾಗಿವೆ. ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ 20 ತಂಡಗಳು ಸ್ಥಾನ ಪಡೆದಿವೆ. ಇವುಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ 5 ತಂಡಗಳನ್ನು ಇರಿಸಲಾಗಿದೆ. ಈ ತಂಡಗಳು ಪರಸ್ಪರರ ವಿರುದ್ಧ ಆಡಲಿವೆ. ಅಂದರೆ ಪ್ರತಿ ತಂಡವು ರೌಂಡ್-1 ರಲ್ಲಿ 4 ಪಂದ್ಯಗಳನ್ನು ಆಡಬೇಕಾಗುತ್ತದೆ. ಇದರ ನಂತರ, ಪ್ರತಿ ಗುಂಪಿನಿಂದ 2 ತಂಡಗಳು ಸೂಪರ್-8 ಗೆ ಅರ್ಹತೆ ಪಡೆಯುತ್ತವೆ. ಈ 8 ತಂಡಗಳು ಯಾರಾಗಬಹುದು ಎಂಬುದರ ಕುರಿತು ಅನೇಕ ಆಟಗಾರರು ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಅವರಲ್ಲಿ ಟೀಂ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ (Mohammed Shami) ಕೂಡ ಒಬ್ಬರು.

ಶಮಿ ಆಯ್ಕೆ ಮಾಡಿದ 8 ತಂಡಗಳಿವು

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಮಾತನಾಡಿದ ಮೊಹಮ್ಮದ್ ಶಮಿ, ಎ ಗುಂಪಿನಿಂದ ಭಾರತ-ಪಾಕಿಸ್ತಾನ, ಬಿ ಗುಂಪಿನಿಂದ ಆಸ್ಟ್ರೇಲಿಯಾ-ಇಂಗ್ಲೆಂಡ್, ಸಿ ಗುಂಪಿನಿಂದ ನ್ಯೂಜಿಲೆಂಡ್-ವೆಸ್ಟ್ ಇಂಡೀಸ್ ಮತ್ತು ಡಿ ಗುಂಪಿನಿಂದ ದಕ್ಷಿಣ ಆಫ್ರಿಕಾ-ಶ್ರೀಲಂಕಾ ತಂಡಗಳನ್ನು ಆಯ್ಕೆ ಮಾಡಿದ್ದಾರೆ.

ಯಾವ ಗುಂಪಿನಲ್ಲಿ ಯಾವ ತಂಡಗಳು?

ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಕೆನಡಾ, ಐರ್ಲೆಂಡ್ ಮತ್ತು ಯುಎಸ್ಎ ಸೇರಿವೆ. ಗುಂಪು-ಬಿ ಆಸ್ಟ್ರೇಲಿಯಾ, ಇಂಗ್ಲೆಂಡ್, ನಮೀಬಿಯಾ, ಓಮನ್ ಮತ್ತು ಸ್ಕಾಟ್ಲೆಂಡ್ ತಂಡವನ್ನು ಒಳಗೊಂಡಿದೆ. ಸಿ ಗುಂಪಿನಲ್ಲಿ ಅಫ್ಘಾನಿಸ್ತಾನ, ನ್ಯೂಜಿಲೆಂಡ್, ಪಪುವಾ ನ್ಯೂಗಿನಿಯಾ, ಉಗಾಂಡಾ ಮತ್ತು ವೆಸ್ಟ್ ಇಂಡೀಸ್ ಸೇರಿವೆ. ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನೇಪಾಳ ಮತ್ತು ನೆದರ್ಲೆಂಡ್ಸ್ ತಂಡಗಳು ಡಿ ಗುಂಪಿನಲ್ಲಿ ಸ್ಥಾನ ಪಡೆದಿವೆ.

T20 World Cup 2024: ಐಪಿಎಲ್‌ನಲ್ಲಿ ಅಬ್ಬರಿಸಿದ ಈ ಐವರು ಟಿ20 ವಿಶ್ವಕಪ್​ನಲ್ಲಿ ಕಾಣಸಿಗುವುದಿಲ್ಲ..!

ಚೇತರಿಸಿಕೊಳ್ಳುತ್ತಿರುವ ಶಮಿ

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ವೇಳೆ ಇಂಜುರಿಗೆ ತುತ್ತಾಗಿದ ಮೊಹಮ್ಮದ್ ಶಮಿ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದು ಗಮನಾರ್ಹ. ಗಾಯದ ಸಮಸ್ಯೆಯಿಂದಾಗಿ ಶಮಿ ಟಿ20 ವಿಶ್ವಕಪ್‌ನಿಂದ ಹೊರಗುಳಿಯಬೇಕಾಯಿತು. ಆದರೆ ಟೀಂ ಇಂಡಿಯಾಗೆ ಶುಭ ಹಾರೈಸಿರುವ ಶಮಿ, ‘ಭಾರತ ತಂಡ ಚಾಂಪಿಯನ್ ಆಗಬೇಕೆಂದು ನಾನು ಬಯಸುತ್ತೇನೆ. ಹಾಗೆಯೇ ಆಟಗಾರರು ತಮ್ಮ ಫಿಟ್ನೆಸ್ ಮತ್ತು ಚೇತರಿಕೆಯ ಬಗ್ಗೆ ಕಾಳಜಿ ವಹಿಸಿ ಎಂದು ತಂಡದ ಆಟಗಾರರಿಗೆ ಎಚ್ಚರಿಕೆ ಕೂಡ ನೀಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ