Natasa Stankovic: ಚಿಲ್ ಆಗಿದ್ದಾರೆ ನತಾಶಾ; ಹೊಸ ಫೋಟೋದಲ್ಲಿ ಹೇಗೆ ಕಾಣ್ತಿದ್ದಾರೆ ನೋಡಿ
ಬಿಳಿ ಟಾಪ್, ಜೀನ್ಸ್ ಧರಿಸಿದ್ದಾರೆ ನತಾಶಾ. ಕಣ್ಣಿಗೆ ಕನ್ನಡಕ ಧರಿಸಿದ್ದಾರೆ. ಈ ಫೋಟೋನ ಅವರು ಹಂಚಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಹುಲ್ಲುಗಾವಲಿನ ಮಧ್ಯೆ ಏಸುವಿನ ಜೊತೆ ಮಗು ನಡೆದು ಹೋಗುತ್ತಿರುವುದು ಇದೆ. ಈ ಫೋಟೋ ಕುತೂಹಲ ಮೂಡಿಸಿದೆ.
ನಟಿ ಹಾಗೂ ಹಾರ್ದಿಕ್ ಪಾಂಡ್ಯಾ (Hardik Pandya) ಪತ್ನಿ ನತಾಶಾ ಅವರ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ. ವಿಚ್ಛೇದನದ ಸುದ್ದಿ ಹುಟ್ಟಿಕೊಂಡಾಗಿನಿಂದಲೂ ಅವರು ಮೌನದ ಮೊರೆ ಹೋಗಿದ್ದಾರೆ. ಈವರೆಗೆ ಅವರು ಈ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಆಪ್ತ ಗೆಳೆಯ ಅಲೆಕ್ಸಾಂಡರ್ ಜೊತೆ ಅವರು ಸುತ್ತಾಟ ನಡೆಸುತ್ತಿದ್ದಾರೆ. ಈ ಮಧ್ಯೆ ನತಾಶಾ ಅವರು ಹೊಸ ಫೋಟೋ ಶೇರ್ ಮಾಡಿಕೊಂಡಿದ್ದು, ಇದರಲ್ಲಿ ಚಿಲ್ ಆಗಿದ್ದಾರೆ. ಲಿಫ್ಟ್ನಲ್ಲಿರೋ ಕನ್ನಡಿ ಎದುರು ಮಿರರ್ ಸೆಲ್ಫಿ ತೆಗೆದುಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯಾ ಹಾಗೂ ನತಾಶಾ ಪರಸ್ಪರ ಪ್ರೀತಿಸಿ ಎಂಗೇಜ್ಮೆಂಟ್ ಮಾಡಿಕೊಂಡರು. ಮಗು ಪಡೆದ ನಂತರ ಇವರು ಮದುವೆ ಆದರು. ಈ ವಿಚಾರ ಅನೇಕರಿಗೆ ಅಚ್ಚರಿ ತಂದಿತ್ತು. ಮಗು ಜನಿಸಿದ ಕೆಲವೇ ವರ್ಷಗಳಲ್ಲಿ ಇವರು ವಿಚ್ಛೇದನ ಪಡೆದುಕೊಳ್ಳುವ ನಿರ್ಧಾರಕ್ಕೆ ಬಂದರೇ ಎನ್ನುವ ಪ್ರಶ್ನೆ ಮೂಡಿದೆ. ಈಗ ನತಾಶಾ ಇನ್ಸ್ಟಾಗ್ರಾಮ್ನಲ್ಲಿ ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಬಿಳಿ ಟಾಪ್, ಜೀನ್ಸ್ ಧರಿಸಿದ್ದಾರೆ ನತಾಶಾ. ಕಣ್ಣಿಗೆ ಕನ್ನಡಕ ಧರಿಸಿದ್ದಾರೆ. ಈ ಫೋಟೋನ ಅವರು ಹಂಚಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಹುಲ್ಲುಗಾವಲಿನ ಮಧ್ಯೆ ಏಸುವಿನ ಜೊತೆ ಮಗು ನಡೆದು ಹೋಗುತ್ತಿರುವುದು ಇದೆ. ಈ ಫೋಟೋಗೆ ಕ್ಯಾಪ್ಶನ್ ನೀಡಿದ್ದರೆ ನತಾಶಾ ಭಾವನೆ ತಿಳಿಯುತ್ತಿತ್ತು ಎಂದು ಫ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ.
ನತಾಶಾ ಅವರು ಒಂದು ವಾರದ ಹಿಂದೆ ಜಾಹೀರಾತಿನ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಇದಾದ ಬಳಿಕ ಅವರ ವಿಚ್ಛೇದನದ ಸುದ್ದಿ ಹರಿದಾಡಿತು. ಅಲ್ಲಿಯವರೆಗೂ ನತಾಶಾ ಅವರು ಯಾವುದೇ ಫೋಟೋ ಪೋಸ್ಟ್ ಮಾಡಿರಲಿಲ್ಲ. ಈಗ ಅವರು ಹಂಚಿಕೊಂಡಿರೋ ಫೋಟೋ ಗಮನ ಸೆಳೆದಿದೆ.
ಇದನ್ನೂ ಓದಿ: ಅವನಲ್ಲಿ ಇವಳಿಲ್ಲಿ; ಹಾರ್ದಿಕ್-ನತಾಶಾ ವಿಚ್ಛೇದನ ವದಂತಿಯ ಬಗ್ಗೆ ಮೌನ ಮುರಿದ ಆಪ್ತ
ಕಮೆಂಟ್ ಬಾಕ್ಸ್ನಲ್ಲಿ ಹಾರ್ದಿಕ್ ಪಾಂಡ್ಯಾ ಅಭಿಮಾನಿಗಳು ಜಮಾಯಿಸಿದ್ದಾರೆ. ಅವರು ನಟಿಯ ವಿರುದ್ಧ ಅಪಸ್ವರ ಎತ್ತಿದ್ದಾರೆ. ಅಶ್ಲೀಲ ಕಮೆಂಟ್ಗಳನ್ನು ಹಾಕೋ ಕೆಲಸ ಮಾಡುತ್ತಿದ್ದಾರೆ. ಇದು ನತಾಶಾ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.