ಹಾರ್ದಿಕ್ ಜೊತೆ ಡೇಟ್ ಮಾಡುವಾಗಲೂ ಎಕ್ಸ್ ಬಾಯ್ಫ್ರೆಂಡ್ ಅಲಿನ ಭೇಟಿ ಮಾಡುತ್ತಿದ್ದ ನತಾಶಾ
ಹಾರ್ದಿಕ್ ಹಾಗೂ ನತಾಶಾ ಬೇರೆ ಆಗೋ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಹಾರ್ದಿಕ್ ಜೊತೆ ಡೇಟ್ ಮಾಡುತ್ತಿರುವಾಗಲೇ ನತಾಶಾ ಅವರು ಮಾಜಿ ಬಾಯ್ಫ್ರೆಂಡ್ ಅಲಿ ಅವರನ್ನು ಭೇಟಿ ಮಾಡುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನತಾಶಾ ಹಾಗೂ ಹಾರ್ದಿಕ್ ಪಾಂಡ್ಯ (Hardik Pandya) ಕುಟುಂಬದ ವಿಚಾರ ಬೀದಿಗೆ ಬಂದಿದೆ. ಇವರು ವಿಚ್ಛೇದನ ಪಡೆದುಕೊಳ್ಳುತ್ತಾರೆ ಅನ್ನೋ ಸುದ್ದಿ ಜೋರಾಗಿದೆ. ಹಾರ್ದಿಕ್ನ ಪ್ರೀತಿಸೋ ಮೊದಲು ನತಾಶಾ ಕಿರುತೆರೆ ನಟ ಅಲಿ ಗೂನಿ ಜೊತೆ ಡೇಟ್ ಮಾಡುತ್ತಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇವರ ನಡುವಿನ ಬ್ರೇಕಪ್ ಬಳಿಕ ನತಾಶಾಗೆ ಹಾರ್ದಿಕ್ ಸಿಕ್ಕರು. ಮೊದಲು ಪ್ರೀತಿಸುತ್ತಿದ್ದ ಇವರು ನಂತರ ಎಂಗೇಜ್ಮೆಂಟ್ ಮಾಡಿಕೊಂಡರು. ಮಗು ಪಡೆದ ಬಳಿಕ ಮದುವೆ ಆದರು. ಈಗ ಇವರು ಬೇರೆ ಆಗೋ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಹಾರ್ದಿಕ್ ಜೊತೆ ಡೇಟ್ ಮಾಡುತ್ತಿರುವಾಗಲೇ ನತಾಶಾ ಅವರು ಮಾಜಿ ಬಾಯ್ಫ್ರೆಂಡ್ ಅಲಿ ಅವರನ್ನು ಭೇಟಿ ಮಾಡುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನತಾಶಾ ಹಾಗೂ ಅಲಿ ಇಬ್ಬರೂ ‘ನಚ್ ಬಲಿಯೇ ಸೀಸನ್ 9’ ರಿಯಾಲಿಟಿ ಶೋಗೆ ಒಟ್ಟಾಗಿ ಬಂದಿದ್ದರು. ಈ ರಿಯಾಲಿಟಿ ಶೋ ನಡೆದಿದ್ದು 2018ರಲ್ಲಿ. ಈ ವಿಡಿಯೋದಲ್ಲಿ ಜಡ್ಜ್ ಅಹ್ಮದ್ ಖಾನ್ ಅವರು ಅಲಿ ಹಾಗೂ ನತಾಶಾಗೆ ಪ್ರಶ್ನೆ ಮಾಡಿದ್ದಾರೆ. ‘ನೀವು ರಿಲೇಶನ್ಶಿಪ್ನಲ್ಲಿದ್ದು ಐದು ವರ್ಷಗಳ ಬಳಿಕ ಬ್ರೇಕಪ್ ಮಾಡಿಕೊಂಡಿರೇ’ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಅಲಿ, ‘ನಾವು ಬ್ರೇಕಪ್ ಮಾಡಿಕೊಂಡು 4 ವರ್ಷ ಕಳೆದಿದೆ. ಆಗಾಗ ಭೇಟಿ ಆಗುತ್ತ ಇರುತ್ತೇವೆ’ ಎಂದರು. ‘ನಾವು ಎರಡು ಬಾರಿ ರಿಲೇಶನ್ಶಿಪ್ನಲ್ಲಿ ಇದ್ದೆವು’ ಎಂದು ನತಾಶಾ ಹೇಳುವಾಗ ಅಹ್ಮದ್ ಖಾನ್ ಗೊಂದಲಕ್ಕೆ ಒಳಗಾದರು.
Even after marriage with Hardik Pandya, Natasha stankovic meets her ex-boyfriend Aly Goni.
Never trust foreign women. 😏 pic.twitter.com/oAFc7hmeqw
— Radhika Chaudhary (@Radhika8057) May 25, 2024
‘ನಿಮ್ಮ ರಿಲೇಶನ್ಶಿಪ್ ಸ್ಟೇಟಸ್ ಏನು ಹೇಳಿ’ ಎಂದು ಅಹ್ಮದ್ ಕೇಳಿದರು. ‘ನನಗೂ ಗೊತ್ತಿಲ್ಲ’ ಎನ್ನುವ ಉತ್ತರ ಅಲಿ ಕಡೆಯಿಂದ ಬಂತು. 2018ರಲ್ಲಿ ಹಾರ್ದಿಕ್ ಹಾಗೂ ನತಾಶಾ ಲವ್ ಸ್ಟೋರಿ ಆರಂಭ ಆಗಿತ್ತು. ಆದಾಗ್ಯೂ ನತಾಶಾ ಎಕ್ ಬಾಯ್ಫ್ರೆಂಡ್ನ ಏಕೆ ಭೇಟಿ ಮಾಡುತ್ತಿದ್ದರು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಚಿಲ್ ಆಗಿದ್ದಾರೆ ನತಾಶಾ; ಹೊಸ ಫೋಟೋದಲ್ಲಿ ಹೇಗೆ ಕಾಣ್ತಿದ್ದಾರೆ ನೋಡಿ
ನತಾಶಾ ಹಾಗೂ ಹಾರ್ದಿಕ್ ಪಾಂಡ್ಯ ಜನವರಿ 2020ರಲ್ಲಿ ಎಂಗೇಜ್ ಆದರು. ಆ ಬಳಿಕ ಅವರು ಮಗುವನ್ನು ಪಡೆದರು. ಮಗನಿಗೆ ಅಗಸ್ತ್ಯ ಎಂದು ಹೆಸರು ಇಡಲಾಗಿದೆ. ಆ ಬಳಿಕ ಈ ಜೋಡಿ ಮದುವೆ ಆಗಿದೆ. 2023ರಲ್ಲಿ ರಾಜಸ್ಥಾನದ ಉದಯ್ಪುರದಲ್ಲಿ ಇವರು ಮದುವೆ ಆಗಿದ್ದಾರೆ. ಹಾರ್ದಿಕ್ ಪಾಂಡ್ಯಾ ಟಿ20 ವಿಶ್ವಕಪ್ ಆಡಲು ಟೀಂ ಇಂಡಿಯಾ ಜೊತೆ ಅಮೆರಿಕ ತೆರಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:09 am, Thu, 30 May 24