AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತಪ್ಪಾದ ಆ್ಯಂಗಲ್​ನಲ್ಲಿ ವಿಡಿಯೋ ಮಾಡಬೇಡಿ’; ಎದೆ, ಹಿಂಭಾಗ ಜೂಮ್ ಮಾಡುವವರಿಗೆ ಜಾನ್ವಿ ಎಚ್ಚರಿಕೆ

ಸಿನಿಮಾ ಪ್ರಚಾರಕ್ಕಾಗಿ ಜಾನ್ವಿ ಪಾಪರಾಜಿಗಳಿಗೆ ಆಮಂತ್ರಣ ನೀಡುತ್ತಿದ್ದಾರೆ. ವಿಮಾನ ನಿಲ್ದಾಣ, ಪ್ರೆಸ್​ಮೀಟ್ ನಡೆಯೋ ಜಾಗಗಳಲ್ಲಿ ಪಾಪರಾಜಿಗಳು ಕಾಣಿಸುತ್ತಿದ್ದಾರೆ. ಇತ್ತೀಚೆಗೆ ಜಾನ್ವಿ ನಡೆದು ಹೋಗುತ್ತಿದ್ದರು. ಈ ವೇಳೆ ಅವರು ‘ತಪ್ಪಾದ ಆ್ಯಂಗಲ್​ನಲ್ಲಿ ವಿಡಿಯೋ ಮಾಡಬೇಡಿ’ ಎಂದು ಅವರು ಕೋರಿದ್ದಾರೆ.

‘ತಪ್ಪಾದ ಆ್ಯಂಗಲ್​ನಲ್ಲಿ ವಿಡಿಯೋ ಮಾಡಬೇಡಿ’; ಎದೆ, ಹಿಂಭಾಗ ಜೂಮ್ ಮಾಡುವವರಿಗೆ ಜಾನ್ವಿ ಎಚ್ಚರಿಕೆ
ಜಾನ್ವಿ
ರಾಜೇಶ್ ದುಗ್ಗುಮನೆ
|

Updated on:May 30, 2024 | 9:02 AM

Share

ಬಾಲಿವುಡ್​ನಲ್ಲಿ ಪಾಪರಾಜಿ ಸಂಸ್ಕೃತಿ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ನಟಿಯರು ಎಲ್ಲೇ ಹೋದರು ಅವರನ್ನು ಹಿಂಬಾಲಿಸುತ್ತಾರೆ. ನಟಿಯರು ಜಿಮ್ ಹೋಗುವಾಗ ಟೈಟ್ ಡ್ರೆಸ್ ಹಾಕಿರುತ್ತಾರೆ. ಈ ವೇಳೆ ಪಾಪರಾಜಿಗಳು ಎದೆ ಭಾಗ, ಹಿಂಭಾಗ ಜೂಮ್ ಮಾಡಿ ವಿಡಿಯೋ ಮಾಡುತ್ತಾರೆ ಎನ್ನುವ ಆರೋಪ ಇದೆ. ಈ ಬಗ್ಗೆ ನಟಿಯರಿಗೆ ಭಯ ಇದೆ. ಹೀಗಾಗಿ, ಪಾಪರಾಜಿಗಳು ಕಂಡಾಗ ಅವರಿಗೆ ಎಚ್ಚರಿಕೆ ನೀಡೋ ಕೆಲಸವನ್ನು ಮಾಡುತ್ತಿದ್ದಾರೆ. ಹೀಗಾಗಿ ಜಾನ್ವಿ ಕಪೂರ್ (Janhvi Kapoor) ಅವರು ಇತ್ತೀಚೆಗೆ ಪಾಪರಾಜಿಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದರು.

ಜಾನ್ವಿ ಕಪೂರ್ ಅವರು ಸದ್ಯ ‘ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಮೇ 31ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಪ್ರಚಾರಕ್ಕಾಗಿ ಅವರು ಪಾಪರಾಜಿಗಳಿಗೆ ಆಮಂತ್ರಣ ನೀಡುತ್ತಿದ್ದಾರೆ. ವಿಮಾನ ನಿಲ್ದಾಣ, ಪ್ರೆಸ್​ಮೀಟ್ ನಡೆಯೋ ಜಾಗಗಳಲ್ಲಿ ಪಾಪರಾಜಿಗಳು ಕಾಣಿಸುತ್ತಿದ್ದಾರೆ. ಇತ್ತೀಚೆಗೆ ಜಾನ್ವಿ ನಡೆದು ಹೋಗುತ್ತಿದ್ದರು. ಈ ವೇಳೆ ಅವರು ‘ತಪ್ಪಾದ ಆ್ಯಂಗಲ್​ನಲ್ಲಿ ವಿಡಿಯೋ ಮಾಡಬೇಡಿ’ ಎಂದು ಅವರು ಕೋರಿದ್ದಾರೆ.

ನಟಿಯರು ಟೈಟ್ ಡ್ರೆಸ್ ಹಾಕಿ ಹೋಗುವಾಗ ಹಿಂಬದಿಯಿಂದ ಶೂಟ್ ಮಾಡುವ ಕೆಲಸವನ್ನು ಪಾಪರಾಜಿಗಳು ಮಾಡುತ್ತಿದ್ದಾರೆ. ಇದು ಅನೇಕರಿಗೆ ಮುಜುಗರ ತಂದಿದೆ. ಜಾನ್ವಿ ಕಪೂರ್ ಮಾತ್ರವಲ್ಲ ನೋರಾ ಫತೇಹಿ, ಮೃಣಾಲ್ ಠಾಕೂರ್ ಅವರು ಕೂಡ ಇದೇ ರೀತಿಯ ಆರೋಪ ಮಾಡಿದ್ದು ಇದೆ.

ಜಾನ್ವಿ ಕಪೂರ್ ಅವರು ಈ ಬಗ್ಗೆ ಓಪನ್ ಆಗಿ ಮಾತನಾಡಿದ್ದರು. ‘ನಾನು ಸಾರ್ವಜನಿಕವಾಗಿ ನಡೆದಾಡುವಾಗ ಆತ್ಮಸ್ಥೈರ್ಯದಿಂದ ನಡೆಯಲು ಸಾಧ್ಯವಾಗುತ್ತಿಲ್ಲ. ತಪ್ಪಾದ ಆ್ಯಂಗಲ್​ನಿಂದ ವಿಡಿಯೋ ಮಾಡಿದರೆ ಎನ್ನುವ ಭಯ ಕಾಡುತ್ತದೆ. ಇದು ಗೌರವಯುತವಾದ ಬೆಳವಣಿಗೆ ಅಲ್ಲ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ‘ಎಲ್ಲವನ್ನೂ ತೋರಿಸೋಕೆ ಟೈಟ್ ಡ್ರೆಸ್ ಹಾಕ್ತಾರೆ ಅಂದ್ರು’; ಜಾನ್ವಿ ಕಪೂರ್ ಬೇಸರ

ಜಾನ್ವಿ ಕಪೂರ್ ತೆರಳೋ ಜಿಮ್ ಬಳಿ ಪಾಪರಾಜಿಗಳು ಬರುತ್ತಿದ್ದರು. ಅವರ ಬಳಿ ಬರದಂತೆ ಜಾನ್ವಿ ಕಪೂರ್ ಅವರು ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಪಾಪರಾಜಿಗಳು ಸ್ವೀಕರಿಸಿದ್ದಾರೆ. ಅವರು ಈಗ ಜಿಮ್ ಬಳಿ ಬಂದು ಜಾನ್ವಿ ವಿಡಿಯೋ ಮಾಡುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:01 am, Thu, 30 May 24