AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೇದಿಕೆ ಮೇಲೇ ನಟಿಯನ್ನು ತಳ್ಳಿದ ಬಾಲಯ್ಯ; ಶಾಕಿಂಗ್ ವಿಡಿಯೋ ವೈರಲ್

ಅಂಜಲಿ, ನೇಹಾ ಶೆಟ್ಟಿ ಮೊದಲಾದವರು ವೇದಿಕೆ ಮೇಲೆ ನಿಂತಿದ್ದರು. ಬಾಲಯ್ಯ ಅವರು ಅಂಜಲಿಗೆ ಏನನ್ನೋ ಹೇಳುವ ಪ್ರಯುತ್ನ ಮಾಡಿದ್ದಾರೆ. ಆದರೆ, ಅವರಿಗೆ ಇದು ಕೇಳಿಲ್ಲ. ಇದರಿಂದ ಸಿಟ್ಟಾದ ಬಾಲಯ್ಯ ಅವರು ಅಂಜಲಿಯನ್ನು ತಳ್ಳಿದ್ದಾರೆ.

ವೇದಿಕೆ ಮೇಲೇ ನಟಿಯನ್ನು ತಳ್ಳಿದ ಬಾಲಯ್ಯ; ಶಾಕಿಂಗ್ ವಿಡಿಯೋ ವೈರಲ್
ಅಂಜಲಿ
ರಾಜೇಶ್ ದುಗ್ಗುಮನೆ
|

Updated on: May 30, 2024 | 10:34 AM

Share

ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಅವರಿಗೆ ಮುಂಗೋಪ ಜಾಸ್ತಿ. ಅವರು ಸಹ ನಟರ ಮೇಲೆ, ಫ್ಯಾನ್ಸ್ ಮೇಲೆ ರೇಗಾಡಿದ ಸಾಕಷ್ಟು ಉದಾಹರಣೆ ಇದೆ. ಈಗ ಅವರು ನಟಿ ಅಂಜಲಿ ಅವರನ್ನು ತಳ್ಳಿದ ವಿಡಿಯೋ ವೈರಲ್ ಆಗಿದೆ. ಬಾಲಯ್ಯ ಅವರು ಅಂಜಲಿ ನಟನೆಯ ‘ಗ್ಯಾಂಗ್ ಆಫ್ ಗೋದಾವರಿ’ ಚಿತ್ರದ ಈವೆಂಟ್​ಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಚಿತ್ರದಲ್ಲಿ ವಿಶ್ವಕ್ ಸೇನ್ ಹಾಗೂ ನೇಹಾ ಶೆಟ್ಟಿ (Neha Shetty) ಕೂಡ ನಟಿಸಿದ್ದಾರೆ. ಈ ಸಿನಿಮಾದ ಕಾರ್ಯಕ್ರಮದ ವೇದಿಕೆ ಮೇಲೆ ನಡೆದ ಘಟನೆ ಅನೇಕರನ್ನು ಬೆಚ್ಚಿ ಬೀಳಿಸಿದೆ.

ಅಂಜಲಿ, ನೇಹಾ ಶೆಟ್ಟಿ ಮೊದಲಾದವರು ವೇದಿಕೆ ಮೇಲೆ ನಿಂತಿದ್ದರು. ಬಾಲಯ್ಯ ಅವರು ಅಂಜಲಿಗೆ ಏನನ್ನೋ ಹೇಳುವ ಪ್ರಯುತ್ನ ಮಾಡಿದ್ದಾರೆ. ಆದರೆ, ಅವರಿಗೆ ಇದು ಕೇಳಿಲ್ಲ. ಇದರಿಂದ ಸಿಟ್ಟಾದ ಬಾಲಯ್ಯ ಅವರು ಅಂಜಲಿಯನ್ನು ತಳ್ಳಿದ್ದಾರೆ. ಅಲ್ಲೇ ಇದ್ದ ನೇಹಾ ಶೆಟ್ಟಿ ಈ ಘಟನೆಯಿಂದ ಶಾಕ್ ಆದರು. ಆದರೆ, ಅಂಜಲಿ ಅವರು ಏನನ್ನೂ ತೋರಿಸಿಕೊಳ್ಳದೆ ನಕ್ಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಅನೇಕರು ಟೀಕೆ ವ್ಯಕ್ತಪಡಿಸಿದ್ದಾರೆ.

‘ಬಾಲಯ್ಯ ಅವರು ಈ ರೀತಿ ಮಾಡಿದ್ದು ಸರಿ ಅಲ್ಲ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ಬಾಲಯ್ಯ ಅವರು ಈ ರೀತಿ ನಡೆದುಕೊಳ್ಳುತ್ತಿರುವುದು ಹೊಸದಲ್ಲ’ ಎಂದಿದ್ದಾರೆ. ‘ಹಿರಿಯ ನಟನಾಗಿ ಹೇಗೆ ನಡೆದುಕೊಳ್ಳಬೇಕು ಅನ್ನೋದು ಗೊತ್ತಿಲ್ಲ’ ಎಂದು ಅನೇಕರು ಬಾಲಯ್ಯ ಅವರನ್ನು ಟೀಕಿಸುತ್ತಿದ್ದಾರೆ.

ಇದನ್ನೂ ಓದಿ: ಚುನಾವಣೆ ಮುಗಿದರಾಗಿಲ್ಲ, ಫಲಿತಾಂಶವೂ ಬರಬೇಕು; ಸಿನಿಮಾದಿಂದ ದೂರವೇ ಉಳಿದ ಬಾಲಯ್ಯ 

ಬಾಲಯ್ಯ ಅವರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಅಖಂಡ’, ‘ವೀರಸಿಂಹ ರೆಡ್ಡಿ, ‘ಭಗವಾನ್ ಕೇಸರಿ’ ಮೊದಲಾದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿವೆ. 2023ರಲ್ಲಿ ರಿಲೀಸ್ ಆದ ‘ವೀರಸಿಂಹ ರೆಡ್ಡಿ’ ಅವರ ನಟನೆಯ ಕೊನೆಯ ಸಿನಿಮಾ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 132 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ‘ಅಖಂಡ 2’ ಚಿತ್ರದಲ್ಲಿ ಬಾಲಯ್ಯ ನಟಿಸಲಿದ್ದಾರೆ. ಇತ್ತೀಚೆಗೆ ಬೇರೊಂದು ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಅವರು, ‘ಹೊಸ ಚಿತ್ರದ ಕೆಲಸ ಆರಂಭ ಆಗಿಲ್ಲ. ಚುನಾವಣಾ ಫಲಿತಾಂಶ ಬಂದ ಬಳಿಕವೇ ಕೆಲಸ ಶುರು ಮಾಡುತ್ತೇನೆ’ ಎಂದು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್