‘ಎಲ್ಲವನ್ನೂ ತೋರಿಸೋಕೆ ಟೈಟ್ ಡ್ರೆಸ್ ಹಾಕ್ತಾರೆ ಅಂದ್ರು’; ಜಾನ್ವಿ ಕಪೂರ್ ಬೇಸರ
‘ಪ್ರತಿ ಸೆಲೆಬ್ರಿಟಿಗಳಿಗಳಿಗೆ ಅವರದ್ದೇ ಆದ ಬೆಲೆ ಇರುತ್ತದೆ. ಅವರ ಫೋಟೋ ನಿರ್ದಿಷ್ಟ ಮೊತ್ತಕ್ಕೆ ಮಾರಾಟ ಆಗುತ್ತದೆ. ನಿಮ್ಮ ಬೆಲೆ ಹೆಚ್ಚಿದ್ದರೆ ಅವರು ನಿಮ್ಮ ಕಾರನ್ನು ಫಾಲೋ ಮಾಡುತ್ತಾರೆ. ಒಂದೊಮ್ಮೆ ನಿಮಗೆ ಬೆಲೆ ಇಲ್ಲ ಎಂದರೆ ನೀವೇ ಅವರನ್ನು ಆಮಂತ್ರಿಸಬೇಕಾಗುತ್ತದೆ’ ಎಂದಿದ್ದಾರೆ ಜಾನ್ವಿ ಕಪೂರ್.
ಬಾಲಿವುಡ್ನಲ್ಲಿ ಪಾಪರಾಜಿ ಸಂಪ್ರದಾಯ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಪಾಪರಾಜಿಗಳು ಅವರನ್ನು ಮುತ್ತಿಕೊಳ್ಳುತ್ತಾರೆ. ಸೆಲೆಬ್ರಿಟಿಗಳೇ ಹಣ ಕೊಟ್ಟು ಪಾಪರಾಜಿಗಳನ್ನು ಕರೆಸುತ್ತಾರೆ ಎನ್ನುವ ವಾದವೂ ಇದೆ. ಈ ಬಗ್ಗೆ ಜಾನ್ವಿ ಕಪೂರ್ (Janhvi Kapoor) ಅವರು ಮಾತನಾಡಿದ್ದಾರೆ. ಪಾಪರಾಜಿ ಸಂಸ್ಕೃತಿ ಯಾವ ರೀತಿಯಲ್ಲಿ ನಡೆಯುತ್ತದೆ ಎನ್ನುವುದನ್ನು ಅವರು ವಿವರಿಸಿದ್ದಾರೆ. ‘ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಪ್ರಚಾರದ ವೇಳೆ ಅವರು ಈ ಬಗ್ಗೆ ಮಾತನಾಡಿದ್ದಾರೆ.
‘ಪ್ರತಿ ಸೆಲೆಬ್ರಿಟಿಗಳಿಗಳಿಗೆ ಅವರದ್ದೇ ಆದ ಬೆಲೆ ಇರುತ್ತದೆ. ಅವರ ಫೋಟೋ ನಿರ್ದಿಷ್ಟ ಮೊತ್ತಕ್ಕೆ ಮಾರಾಟ ಆಗುತ್ತದೆ. ನಿಮ್ಮ ಬೆಲೆ ಹೆಚ್ಚಿದ್ದರೆ ಅವರು ನಿಮ್ಮ ಕಾರನ್ನು ಫಾಲೋ ಮಾಡುತ್ತಾರೆ. ಒಂದೊಮ್ಮೆ ನಿಮಗೆ ಬೆಲೆ ಇಲ್ಲ ಎಂದರೆ ನೀವೇ ಅವರನ್ನು ಆಮಂತ್ರಿಸಬೇಕಾಗುತ್ತದೆ’ ಎಂದಿದ್ದಾರೆ ಜಾನ್ವಿ ಕಪೂರ್. ಅವರದ್ದೇ ಉದಾಹರಣೆಯನ್ನು ಜಾನ್ವಿ ನೀಡಿದ್ದಾರೆ. ‘ಈಗ ಸಿನಿಮಾ ಪ್ರಚಾರ ಮಾಡುತ್ತಿದ್ದೇನೆ. ಅವರನ್ನು ವಿಮಾನ ನಿಲ್ದಾಣಕ್ಕೆ ಆಮಂತ್ರಿಸಲಾಯಿತು. ಅವರು ಫೋಟೋ ಕ್ಲಿಕ್ ಮಾಡಿದರು’ ಎಂದಿದ್ದಾರೆ ಜಾನ್ವಿ.
‘ನಾನು ಸಿನಿಮಾ ಪ್ರಮೋಷನ್ ಮಾಡುತ್ತಿಲ್ಲ, ಯಾವುದೇ ಶೂಟ್ಗೆ ಹೋಗುತ್ತಿಲ್ಲ ಎಂದರೆ ನಾನು ಆದಷ್ಟು ಅವರ ಕಣ್ಣಿನಿಂದ ದೂರ ಇರಲು ಬಯಸುತ್ತೇನೆ. ಆಗ ಅವರು ಹೆಚ್ಚಿನ ಶ್ರಮ ಹಾಕುತ್ತಾರೆ. ನಮ್ಮ ವಾಹನವನ್ನು ಅವರು ಫಾಲೋ ಮಾಡುತ್ತಾರೆ. ನಮ್ಮ ಫೋಟೋದಿಂದ ಅವರಿಗೆ ಹಣ ಸಿಗುತ್ತದೆ’ ಎಂದಿದ್ದಾರೆ ಜಾನ್ವಿ.
‘ನಾನು ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ ಚಿತ್ರದ ಪ್ರಮೋಷನ್ಗೆ 25-30 ಬಾರಿ ವಿಮಾನ ನಿಲ್ದಾಣಕ್ಕೆ ಬಂದಿದ್ದೇನೆ. ಆದರೆ, ನಾನು ಅವರ ಕಣ್ಣಿಗೆ ಬಿದ್ದಿದ್ದು 5-6 ಬಾರಿ ಮಾತ್ರ. ನನ್ನ ಜಿಮ್ ಹೊರಗೆ ಬರಬೇಡಿ ಎಂದು ಕೋರಿಕೊಂಡಿದ್ದೆ. ಅವರು ಇದನ್ನು ಒಪ್ಪಿದರು. ಅವರು ಈಗ ಜಿಮ್ ಹೊರಗೆ ಬರುತ್ತಿಲ್ಲ. ಜಿಮ್ ಹೊರಗೆ ಟೈಟ್ ಡ್ರೆಸ್ನಲ್ಲಿ ಅವರು ನನ್ನನ್ನು ನೋಡೋದು ಇಷ್ಟ ಇಲ್ಲ. ನಾನು ಟೈಟ್ ಡ್ರೆಸ್ ಹಾಕಿ ತೋರಿಸೋಕೆ ಈ ರೀತಿ ಮಾಡ್ತಾರೆ ಎಂಬ ಮಾತು ಕೇಳಿ ಬಂದವು. ನಾನು ಅವರ ಬಳಿ ಬನ್ನಿ ಎಂದು ಹೇಳಿರಲಿಲ್ಲ. ಈಗ ಬರಬೇಡಿ ಎಂದಿದ್ದೇನೆ. ಅದನ್ನು ಫಾಲೋ ಮಾಡುತ್ತಿದ್ದಾರೆ’ ಎಂದಿದ್ದಾರೆ ಜಾನ್ವಿ.
ಮುಂಬೈ ಇಂಡಿಯನ್ಸ್ ಮ್ಯಾಚ್ ನೋಡಲು ಜಾನ್ವಿ ಹೋಗಿದ್ದರು. ಇದರಿಂದಲೇ ಮುಂಬೈ ಟೀಂ ಸೋತಿತ್ತು ಎಂದು ಕೆಲವರು ಹೇಳಿದ್ದರಂತೆ. ಇದನ್ನು ಜಾನ್ವಿ ಕಪೂರ್ ನೆಗ್ಲೆಕ್ಟ್ ಆಡಿದ್ದಾರೆ.
ಇದನ್ನೂ ಓದಿ: ಜಾನ್ವಿ ಕಪೂರ್ ಬೆನ್ನಿನಲ್ಲಿ ಕ್ರಿಕೆಟ್ ಬಾಲ್ಗಳ ಸಾಲು; ಇದೆಂಥಾ ಡ್ರೆಸ್?
‘ಜಾನ್ವಿ ಕಪೂರ್ ಹಾಗೂ ರಾಜ್ಕುಮಾರ್ ರಾವ್ ನಟನೆಯ ‘ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ’ ಸಿನಿಮಾ ಮೇ 31ರಂದು ರಿಲೀಸ್ ಆಗುತ್ತಿದೆ. ಇದು ಕ್ರಿಕೆಟ್ ಆಧಾರಿತ ಸಿನಿಮಾ. ಅವರು ‘ದೇವರ’ ಸಿನಿಮಾ ಮೂಲಕ ತೆಲುಗಿಗೆ ಕಾಲಿಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.