ಕನ್ನಡದ ನಿರ್ದೇಶಕನ ಜೊತೆ ಅಜಯ್​ ದೇವಗನ್​ ಸಿನಿಮಾ? ನಡೆಯುತ್ತಿದೆ ಮಾತುಕಥೆ

ಅಜಯ್​ ದೇವಗನ್​ ಅವರು ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವುಗಳ ನಡುವೆ ಕನ್ನಡದ ನಿರ್ದೇಶಕನ ಜೊತೆಗೂ ಅವರು ಸಿನಿಮಾ ಮಾಡಲು ಆಸಕ್ತಿ ತೋರಿಸಿದ್ದಾರೆ. ಈಗಾಗಲೇ ಮಾತುಕಥೆ ಆರಂಭ ಆಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2025ರ ಆರಂಭದಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಆ ನಿರ್ದೇಶಕನ ಬಗ್ಗೆ ಇಲ್ಲಿದೆ ಮಾಹಿತಿ..

ಕನ್ನಡದ ನಿರ್ದೇಶಕನ ಜೊತೆ ಅಜಯ್​ ದೇವಗನ್​ ಸಿನಿಮಾ? ನಡೆಯುತ್ತಿದೆ ಮಾತುಕಥೆ
ಅಜಯ್​ ದೇವಗನ್​
Follow us
ಮದನ್​ ಕುಮಾರ್​
|

Updated on: May 29, 2024 | 7:22 PM

ಬಾಲಿವುಡ್​ನ ಸ್ಟಾರ್​ ನಟ ಅಜಯ್​ ದೇವಗನ್​ (Ajay Devgn) ಅವರು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ವಿಶೇಷ ಏನೆಂದರೆ, ಈಗ ಅವರು ಕನ್ನಡದ ನಿರ್ದೇಶಕನ ಜೊತೆ ಮಾತುಕಥೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಮುಂದಿನ ಸಿನಿಮಾ (Ajay Devgn Upcoming Movie) ಸಲುವಾಗಿ ಈ ಮೀಟಿಂಗ್​ ನಡೆದಿದೆ. ಕನ್ನಡದ ನಿರ್ದೇಶಕ ಹೇಳಿದ ಕಥೆ ಕೂಡ ಅಜಯ್​ ದೇವಗನ್​ ಅವರಿಗೆ ಇಷ್ಟ ಆಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಅವರಿಂದ ಗ್ರೀನ್​ ಸಿಗ್ನಲ್​ ಸಿಗಲಿದೆ. ಅಷ್ಟಕ್ಕೂ ಆ ಕನ್ನಡದ ನಿರ್ದೇಶಕ ಯಾರು? ಜಗನ್ ಶಕ್ತಿ! ಹೌದು, ಜಗನ್​ ಶಕ್ತಿ (Jagan Shakti) ಮತ್ತು ಅಜಯ್​ ದೇವಗನ್​ ಅವರು ಹೊಸ ಸಿನಿಮಾ ಕುರಿತು ಈಗಾಗಲೇ ಒಂದು ಸುತ್ತಿನ ಮಾತುಕಥೆ ನಡೆಸಿದ್ದಾರೆ ಎನ್ನಲಾಗಿದೆ.

ಜಗನ್​ ಶಕ್ತಿ ಅವರು ಅಪ್ಪಟ ಕನ್ನಡದ ಪ್ರತಿಭೆ. ಬೆಂಗಳೂರಿನಲ್ಲಿ ಬೆಳೆದ ಅವರು ತುಂಬ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. ಆದರೆ ಅವರು ವೃತ್ತಿಜೀವನ ಆರಂಭಿಸಿದ್ದು ಬಾಲಿವುಡ್​ನಲ್ಲಿ. ನಿರ್ದೇಶಕ ಆರ್​. ಬಾಲ್ಕಿ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಜಗನ್​ ಶಕ್ತಿ ಅವರಿಗೆ ಇತ್ತು. ಬಳಿಕ ಅವರು ‘ಮಿಷನ್​ ಮಂಗಲ್​’ ಸಿನಿಮಾಗೆ ನಿರ್ದೇಶನ ಮಾಡಿ ದೊಡ್ಡ ಗೆಲುವು ಕಂಡರು.

ಜಗನ್​ ಶಕ್ತಿ

‘ಮಿಷನ್​ ಮಂಗಲ್​’ ಸಿನಿಮಾ ತೆರೆಕಂಡಿದ್ದು 2019ರಲ್ಲಿ. ಈಗ ದೊಡ್ಡ ಗ್ಯಾಪ್​ ಬಳಿಕ ಅವರು ಅಜಯ್​ ದೇವಗನ್​ ಜೊತೆ ಸಿನಿಮಾ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಕಥೆ, ಪಾತ್ರ ಎಲ್ಲವೂ ಒಪ್ಪಿಗೆಯಾದರೆ ಅಜಯ್​ ದೇವಗನ್​ ಅವರು ಈ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ನಿರ್ಮಾಣವನ್ನು ಕೂಡ ಮಾಡಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: IPL ಪ್ರಸಾರದ ವೇಳೆ ಜಾಹೀರಾತು; ಮುಂಚೂಣಿಯಲ್ಲಿ ಶಾರುಖ್​, ಅಜಯ್​ ದೇವಗನ್​

ಮೊದಲ ಸಿನಿಮಾ ‘ಮಿಷನ್​ ಮಂಗಲ್​’ನಲ್ಲಿ ಕನ್ನಡಿಗ ಜಗನ್​ ಶಕ್ತಿ ಅವರು ಮಂಗಳಯಾನದ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಈಗ ಅವರು ಅಜಯ್​ ದೇವಗನ್​ ಜೊತೆ ಮಾಡುವ ಸಿನಿಮಾ ಯಾವ ಶೈಲಿಯಲ್ಲಿ ಇರಲಿದೆ ಎಂಬುದು ಸದ್ಯಕ್ಕೆ ರಿವೀಲ್​ ಆಗಿಲ್ಲ. ‘ಮಿಷನ್​ ಮಂಗಲ್​’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಬಾಕ್ಸ್​ ಆಫೀಸ್​ನಲ್ಲಿ 200 ಕೋಟಿ ರೂಪಾಯಿ ಗಳಿಸಿತ್ತು. ಹಾಗಾಗಿ ಜಗನ್​ ಶಕ್ತಿ ಅವರ ಮೇಲೆ ಜನರಿಗೆ ಒಂದು ಭರವಸೆ ಇದೆ. ಅಜಯ್​ ದೇವಗನ್​ ಜೊತೆ ಅವರು ಕೈ ಜೋಡಿಸುವ ಸಾಧ್ಯತೆ ಇದೆ ಎಂಬ ಸುದ್ದಿಯನ್ನು ಕೇಳಿ ಅಭಿಮಾನಿಗಳಿಗೆ ಖುಷಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್