ಅವನಲ್ಲಿ ಇವಳಿಲ್ಲಿ; ಹಾರ್ದಿಕ್-ನತಾಶಾ ವಿಚ್ಛೇದನ ವದಂತಿಯ ಬಗ್ಗೆ ಮೌನ ಮುರಿದ ಆಪ್ತ

Natasa Stankovic and Hardik Pandya: ಆಪ್ತ ಗೆಳೆಯನ ಹೇಳಿಕೆಯ ಪ್ರಕಾರ, ದಂಪತಿಗಳ ನಡುವೆ ಕೆಲವು ಸಮಸ್ಯೆಗಳಿವೆ. ಅಲ್ಲದೆ ನತಾಶಾ ಅವರೇ ಹಾರ್ದಿಕ್ ಪಾಂಡ್ಯರನ್ನು ತೊರೆದು ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಇವರಿಬ್ಬರು ಮತ್ತೆ ಒಂದಾಗುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಇಬ್ಬರ ನಡುವೆ ಭಿನ್ನಾಭಿಪ್ರಾಯವಿರುವುದಂತು ಸತ್ಯ ಎಂದು ಹೇಳಿದ್ದಾರೆ.

ಅವನಲ್ಲಿ ಇವಳಿಲ್ಲಿ; ಹಾರ್ದಿಕ್-ನತಾಶಾ ವಿಚ್ಛೇದನ ವದಂತಿಯ ಬಗ್ಗೆ ಮೌನ ಮುರಿದ ಆಪ್ತ
ಹಾರ್ದಿಕ್-ನತಾಶಾ
Follow us
ಪೃಥ್ವಿಶಂಕರ
|

Updated on: May 29, 2024 | 5:57 PM

ಟೀಂ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ (Natasa Stankovic and Hardik Pandya) ವಿಚ್ಛೇದನದ ಹಾದಿ ಹಿಡಿದಿದ್ದಾರೆ ಎಂಬ ಸುದ್ದಿ ಸಧ್ಯಕ್ಕೆ ಎಲ್ಲೆಡೆ ಹರಿದಾಡುತ್ತಿದೆ. ವರದಿ ಪ್ರಕಾರ ಶೀಘ್ರದಲ್ಲೇ ಈ ದಂಪತಿಗಳು ವಿಚ್ಛೇದನ ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತವಾಗಿ ದಂಪತಿಯಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. ಈ ನಡುವೆ ಈ ಇಬ್ಬರ ಆಪ್ತಸ್ನೇಹಿತರೊಬ್ಬರು ಈ ವದಂತಿಯ ಬಗ್ಗೆ ಮಾತನಾಡಿದ್ದು, ದಂಪತಿಗಳಿಬ್ಬರು ಈಗಾಗಲೇ ಕೆಲವು ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ಎಂದು ವರದಿಯಾಗಿದೆ.

ಪ್ರತ್ಯೇಕವಾಗಿ ವಾಸ

ರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಹಾರ್ದಿಕ್ ಮತ್ತು ನತಾಶಾ ಕಳೆದ ಕೆಲವು ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಇವರಿಬ್ಬರ ಆಪ್ತ ಸ್ನೇಹಿತ ಹೇಳಿದ್ದಾರೆ ಎಂದು ವರದಿಯಾಗಿದೆ. ಆಪ್ತ ಗೆಳೆಯನ ಹೇಳಿಕೆಯ ಪ್ರಕಾರ, ದಂಪತಿಗಳ ನಡುವೆ ಕೆಲವು ಸಮಸ್ಯೆಗಳಿವೆ. ಅಲ್ಲದೆ ನತಾಶಾ ಅವರೇ ಹಾರ್ದಿಕ್ ಪಾಂಡ್ಯರನ್ನು ತೊರೆದು ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಇವರಿಬ್ಬರು ಮತ್ತೆ ಒಂದಾಗುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಇಬ್ಬರ ನಡುವೆ ಭಿನ್ನಾಭಿಪ್ರಾಯವಿರುವುದಂತು ಸತ್ಯ ಎಂದು ಹೇಳಿದ್ದಾರೆ.

ಅನುಮಾನ ಮೂಡಿಸಿದ ನತಾಶಾ ನಡೆ

ವಾಸ್ತವವಾಗಿ ಈ ಇಬ್ಬರ ನಡುವೆ ಯಾವುದು ಸರಿ ಇಲ್ಲ ಎಂಬುದಕ್ಕೆ ಇತ್ತೀಚೆಗಷ್ಟೇ ನತಾಶಾ ತನ್ನ ಇನ್‌ಸ್ಟಾಗ್ರಾಮ್‌ನಿಂದ ಪಾಂಡ್ಯ ಅವರ ಉಪನಾಮವನ್ನು ತೆಗೆದುಹಾಕಿದ್ದರು. ಅಲ್ಲದೆ ಇಡೀ ಐಪಿಎಲ್‌ನಲ್ಲಿ ಒಮ್ಮೆಯೂ ನತಾಶಾ ಕಾಣಿಸಿಕೊಂಡಿರಲಿಲ್ಲ. ಇದು ಸಾಲದೆಂಬಂತೆ ವಿಚ್ಛೇದನದ ವದಂತಿ ಜೋರಾದ ಬಳಿಕ ನತಾಶಾ ಅವರ ಫಿಟ್‌ನೆಸ್ ತರಬೇತುದಾರರೊಂದಿಗೆ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಅವರಿಬ್ಬರು ಜೊತೆಗೆ ಓಡಾಡುತ್ತಿರುವ ವಿಡಿಯೋವೊಂದು ಹೊರಬಿದ್ದಿತ್ತು. ಅದರಲ್ಲಿ ಪಾಪರಾಜಿಗಳು ಪಾಂಡ್ಯ ಬಗ್ಗೆ ಪ್ರಶ್ನೆ ಕೇಳಿದಾಗ ನತಾಶಾ ‘ಧನ್ಯವಾದ’ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದರು. ಹೀಗಾಗಿ ನತಾಶಾ ಮೌನವೂ ಈ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

ದ್ವಂದ್ವ ಹುಟ್ಟಿಸಿದ್ದ ನತಾಶಾ ಕಾಮೆಂಟ್

ಈ ಊಹಾಪೋಹಗಳ ನಡುವೆ ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದ ಫೋಟೋಗೆ ನತಾಶಾ ಪ್ರತಿಕ್ರಿಯಿಸಿದ್ದರು. ಕೃನಾಲ್ ತಮ್ಮ ಮಗ ಕವಿರ್ ಮತ್ತು ಸೋದರಳಿಯ ಅಗಸ್ತ್ಯ ಜೊತೆಗಿನ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ನತಾಶಾ ಹೃದಯದ ಎಮೋಜಿ ಹಾಕುವ ಮೂಲಕ ಕಾಮೆಂಟ್ ಮಾಡಿದ್ದರು. ಇದು ವಿಚ್ಛೇದನದ ವದಂತಿಯ ನಡುವೆ ನೆಟ್ಟಿಗರಲ್ಲಿ ದ್ವಂದ್ವ ಹುಟ್ಟಿಸಿತ್ತು. ಈ ವದಂತಿಗಳಿಗೆ ಕೊನೆ ಸಿಗಬೇಕೆಂದರೆ ಈ ಇಬ್ಬರಲ್ಲಿ ಒಬ್ಬರು ಸತ್ಯಾಂಶವನ್ನು ಬಹಿರಂಗಪಡಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಇವರಿಬ್ಬರ ನಡುವಿನ ವಿರಸ ಯಾವ ರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ