ಫಾಫ್ ಡು ಪ್ಲೆಸಿಸ್: ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಆರ್‌ಸಿಬಿ ಪ್ಲೇಆಫ್ ತಲುಪಿತ್ತು. ನಾಯಕತ್ವ ಮಾತ್ರವಲ್ಲದೆ ಬ್ಯಾಟಿಂಗ್ನಲ್ಲಿ ಮಿಂಚಿದ್ದ ಫಾಫ್, 438 ರನ್‌ಗಳ ಕೊಡುಗೆ ನೀಡಿದ್ದರು. ಟಿ20 ಕ್ರಿಕೆಟ್ಗೆ ಹೆಚ್ಚು ಗಮನ ಹರಿಸುವ ಸಲುವಾಗಿ ಫಾಫ್ ಟೆಸ್ಟ್‌ನಿಂದ ನಿವೃತ್ತರಾದರು. ಆದರೆ, ಅಂದಿನಿಂದ ಅವರು ಟಿ20 ಆಡಲು ದಕ್ಷಿಣ ಆಫ್ರಿಕಾ ತಂಡದಲ್ಲಿ ಆಯ್ಕೆಯಾಗಿಲ್ಲ.