
ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ 2026 ರ ಟಿ20 ವಿಶ್ವಕಪ್‌ಗಾಗಿ (T2o World Cup 20206) ಕೆನಡಾ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ತಿಂಗಳ ಕೊನೆಯಲ್ಲಿ 23ನೇ ವಸಂತಕ್ಕೆ ಕಾಲಿಡುವ ದಿಲ್‌ಪ್ರೀತ್ ಬಾಜ್ವಾ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಗಿದೆ.ಕೆನಡಾ ತಂಡವು ಎಲ್ಲಾ ಆರು ಪಂದ್ಯಗಳನ್ನು ಗೆಲ್ಲುವ ಮೂಲಕ ಈ ಆವೃತ್ತಿಯ ಐಸಿಸಿ ಪುರುಷರ ಟಿ20 ವಿಶ್ವಕಪ್ ಅಮೆರಿಕಾಸ್ ಪ್ರಾದೇಶಿಕ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು. ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಟಿ20 ವಿಶ್ವಕಪ್‌ಗೆ ಅರ್ಹತೆಯನ್ನು ಪಡೆದುಕೊಂಡಿದೆ.
ಈ ತಂಡದಲ್ಲಿ ಬರೋಡಾ ಪರ ದೇಶೀಯ ಕ್ರಿಕೆಟ್ ಆಡಿದ್ದ ಅಂಶ್ ಪಟೇಲ್ ಕೂಡ ಇದ್ದಾರೆ. ಐಪಿಎಲ್ 2022 ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಅವರನ್ನು 20 ಲಕ್ಷಕ್ಕೆ ಖರೀದಿಸಿತು. ಆದಾಗ್ಯೂ, ಅವರಿಗೆ ಆಡಲು ಅವಕಾಶ ಸಿಗಲಿಲ್ಲ , ಮುಂದಿನ ಆವೃತ್ತಿಗೂ ಮುನ್ನ ಫ್ರಾಂಚೈಸಿ ಅವರನ್ನು ತಂಡದಿಂದ ಬಿಡುಗಡೆ ಮಾಡಿತು. ಕಳೆದ ವರ್ಷ ಕೆನಡಾ ಪರ ಪಾದಾರ್ಪಣೆ ಮಾಡಿದ ಅಂಶ್, ಎರಡು ಏಕದಿನ ಮತ್ತು ಐದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅತಿ ಕಡಿಮೆ ಮಾದರಿಯ ಕ್ರಿಕೆಟ್‌ನಲ್ಲಿ, ಅವರು ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಪ್ರತಿ ವಿಕೆಟ್‌ಗೆ ಸರಾಸರಿ 7 ರನ್‌ಗಳಂತೆ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.
ಕೆನಡಾ ತಂಡವು ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ ಮತ್ತು ಯುಎಇ ಜೊತೆಗೆ ಗ್ರೂಪ್ ಡಿಯಲ್ಲಿ ಸ್ಥಾನ ಪಡೆದಿದೆ. ಕೆನಡಾ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 9 ರಂದು ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ನಂತರ ಯುಎಇ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಇದು ಕೆನಡಾದ ಎರಡನೇ ಟಿ20 ವಿಶ್ವಕಪ್ ಆಗಿದ್ದು , ಈ ಹಿಂದೆ 2024 ರ ಆವೃತ್ತಿಯಲ್ಲಿ ಐರ್ಲೆಂಡ್ ತಂಡವನ್ನು ಸೋಲಿಸಿತ್ತು.
T20 World Cup: ಭಾರತಕ್ಕೆ ಬರಲ್ಲ ಎನ್ನುತ್ತಲೇ ಟಿ20 ವಿಶ್ವಕಪ್‌ಗೆ ತಂಡ ಪ್ರಕಟಿಸಿದ ಬಾಂಗ್ಲಾ
ದಿಲ್‌ಪ್ರೀತ್ ಬಾಜ್ವಾ (ನಾಯಕ), ಅಜಯ್‌ವೀರ್ ಹುಂದಾಲ್, ಅಂಶ್ ಪಟೇಲ್, ದಿಲನ್ ಹೇಳೈಗರ್, ಹರ್ಷ್ ಠಾಕರ್, ಜಸ್ಕರನ್‌ದೀಪ್ ಬಟ್ಟಾರ್, ಕಲೀಮ್ ಸನಾ, ಕನ್ವರ್‌ಪಾಲ್ ತತ್‌ಗುರ್, ನವನೀತ್ ಧಲಿವಾಲ್, ನಿಕೋಲಸ್ ಕಿರ್ಟನ್, ರವೀಂದರ್‌ಪಾಲ್ ಸಿಂಗ್, ಸಾದ್ ಬಿನ್ ಜಾಫರ್, ಶಿವಂ ಶರ್ಮಾ, ಶ್ರೇಯಸ್ ಮೊವ್ವಾ, ಯುವರಾಜ್ ಸಾಮ್ರಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Thu, 15 January 26