ಟಿ20 ವಿಶ್ವಕಪ್​ಗೂ ತಟ್ಟಿದ ಯುದ್ಧದ ತಾಪ..!

Iran Strikes: ಫೆಬ್ರವರಿ 28, 2026 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಬೃಹತ್ ಕ್ಷಿಪಣಿ ದಾಳಿಗಳನ್ನು ನಡೆಸಿವೆ. ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಮೃತಪಟ್ಟಿದ್ದಾರೆ . ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳಲ್ಲಿರುವ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ಮಾಡಿದೆ.

ಟಿ20 ವಿಶ್ವಕಪ್​ಗೂ ತಟ್ಟಿದ ಯುದ್ಧದ ತಾಪ..!
T20 World Cup 2026

Updated on: Mar 01, 2026 | 2:17 PM

ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ವಾಯು ದಾಳಿ ಮುಂದುವರೆಸಿದೆ. ಈ ವಾಯು ದಾಳಿಗೆ ಪ್ರತೀಕಾರವಾಗಿ ಗಲ್ಫ್ ದೇಶಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನಿ ಪ್ರತಿ ದಾಳಿ ನಡೆಸಿದೆ. ಈ ದಾಳಿಗಳಿಂದಾಗಿ ವಾಯು ಸಂಚಾರದ ಮೇಲೆ ಪರಿಣಾಮ ಬೀರುತ್ತಿದ್ದು, ಅನೇಕ ವಿಮಾನ ನಿಲ್ದಾಣಗಳು ಬಂದ್ ಆಗಿವೆ. ಇನ್ನು ಕೆಲ ವಿಮಾನಯಾನಗಳನ್ನು ರದ್ದುಗೊಳಿಸಲಾಗಿದೆ. ಈ ರದ್ದಾಗುವಿಕೆಯು ಟಿ20 ವಿಶ್ವಕಪ್ ಮೇಲೂ ಪರಿಣಾಮ ಬೀರಿದೆ.

ಇರಾನ್ ಮತ್ತು ಗಲ್ಫ್ ಪ್ರದೇಶದ ವೈಮಾನಿಕ ಮಾರ್ಗಗಳನ್ನು ಮುಚ್ಚಿರುವುದರಿಂದ ದುಬೈ ಮತ್ತು ಕತಾರ್ ಮೂಲಕ ಹಾದುಹೋಗುವ ವಿಮಾನಯಾನಗಳಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಇತ್ತ ಭಾರತ ಮತ್ತು ಶ್ರೀಲಂಕಾ ಆಯೋಜಿಸಿದ ಟಿ20 ವಿಶ್ವಕಪ್​ನಲ್ಲಿ ಭಾಗವಹಿಸಿದ ಕೆಲ ತಂಡಗಳು ಹಾಗೂ ಸಿಬ್ಬಂದಿಗಳು ಇದೇ ವಾಯು ಮಾರ್ಗದ ಮೂಲಕ ಸಂಚರಿಸಬೇಕಿರುವುದರಿಂದ ಸಮಸ್ಯೆ ಎದುರಾಗಿದೆ.

ಪರ್ಯಾಯ ವಿಮಾನ ಮಾರ್ಗಗಳು:

ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ಗಾಗಿ ಬಂದಿರುವ ಆಟಗಾರರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸುರಕ್ಷತೆಗಾಗಿ ಐಸಿಸಿ (ICC) ‘ಪರ್ಯಾಯ ವಿಮಾನ ಯೋಜನೆ’ ಗಳನ್ನು ರೂಪಿಸುತ್ತಿದೆ.

ಗಲ್ಫ್ ರಾಷ್ಟ್ರಗಳ ವಾಯುಪ್ರದೇಶ ಅಪಾಯಕಾರಿಯಾಗಿರುವುದರಿಂದ, ತಂಡಗಳನ್ನು ಯುರೋಪ್ ಅಥವಾ ಆಗ್ನೇಯ ಏಷ್ಯಾದ ಸುರಕ್ಷಿತ ಮಾರ್ಗಗಳ ಮೂಲಕ ಕಳುಹಿಸಲು ಐಸಿಸಿ ಮುಂದಾಗಿದೆ.

ಯುದ್ಧದ ಹೊರತಾಗಿಯೂ, ಭಾರತದಲ್ಲಿ ನಡೆಯುತ್ತಿರುವ ಪಂದ್ಯಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಐಸಿಸಿ ಸ್ಪಷ್ಟಪಡಿಸಿದೆ. ಏಕೆಂದರೆ ಟೂರ್ನಿಯು ಅಂತಿಮ ಹಂತಕ್ಕೆ ತಲುಪಿದ್ದು, ಇನ್ನು ಕೇವಲ 4 ತಂಡಗಳು ಮಾತ್ರ ತವರಿಗೆ ತೆರಳಬೇಕಿದೆ.

ಈ ತಂಡಗಳನ್ನು ಸುರಕ್ಷಿತವಾಗಿ ಕಳುಹಿಸಿಕೊಡಲು ಐಸಿಸಿ ಪರ್ಯಾಯ ವಿಮಾನ ಮಾರ್ಗಗಳಿಗಾಗಿ ಮಾತುಕತೆ ನಡೆಸುತ್ತಿದೆ. ಅದರಂತೆ ಟಿ20 ವಿಶ್ವಕಪ್​ನಲ್ಲಿ ಉಳಿದಿರುವ ತಂಡಗಳನ್ನು ಯುರೋಪ್ ಅಥವಾ ಆಗ್ನೇಯ ಏಷ್ಯಾದ ಸುರಕ್ಷಿತ ಮಾರ್ಗಗಳ ಮೂಲಕ ಕಳುಹಿಸಲು ಐಸಿಸಿ ಪ್ಲ್ಯಾನ್ ರೂಪಿಸುತ್ತಿದೆ.

ಖಮೇನಿ ಹತ್ಯೆ:

ಫೆಬ್ರವರಿ 28, 2026 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಬೃಹತ್ ಕ್ಷಿಪಣಿ ದಾಳಿಗಳನ್ನು ನಡೆಸಿವೆ. ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಮೃತಪಟ್ಟಿದ್ದಾರೆ . ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳಲ್ಲಿರುವ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ಮಾಡಿದೆ. ಈ ದಾಳಿಯು ಮುಂದುವರೆಯುವ ಸಾಧ್ಯತೆಯಿದೆ.

ಇತ್ತ ಟಿ20 ವಿಶ್ವಕಪ್​ ಮಾರ್ಚ್ 8 ರಂದು ಮುಗಿಯಲಿದೆ. ಇಲ್ಲಿ ಭಾರತ ತಂಡವನ್ನು ಹೊರತುಪಡಿಸಿ ನ್ಯೂಝಿಲೆಂಡ್, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾ ತಂಡಗಳು ತವರಿಗೆ ವಾಪಾಸ್ಸಾಗಬೇಕಿದೆ. ಹೀಗಾಗಿ ಪರ್ಯಾಯ ವ್ಯವಸ್ಥೆಯನ್ನು ರೂಪಿಸಲು ಐಸಿಸಿ ನಿರ್ಧರಿಸಿದ್ದು, ಅದರಂತೆ ಉಳಿದಿರುವ ತಂಡಗಳನ್ನು ಯುರೋಪ್ ವಾಯು ಮಾರ್ಗಗಳ ಮೂಲಕ ಕಳುಹಿಸಿಕೊಡುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: Auqib Nabi: 18 ಪಂದ್ಯಗಳಲ್ಲಿ ಬರೋಬ್ಬರಿ 104 ವಿಕೆಟ್ಸ್..!

ಸೆಮಿಫೈನಲ್ ವೇಳಾಪಟ್ಟಿ:

  • ಮಾರ್ಚ್ 4, ಮೊದಲ ಸೆಮಿಫೈನಲ್: ಸೌತ್ ಆಫ್ರಿಕಾ vs ನ್ಯೂಝಿಲೆಂಡ್ (ಈಡನ್ ಗಾರ್ಡನ್ಸ್ ಮೈದಾನ, ಕೊಲ್ಕತ್ತಾ)
  • ಮಾರ್ಚ್ 5, ದ್ವಿತೀಯ ಸೆಮಿಫೈನಲ್: ಇಂಗ್ಲೆಂಡ್ vs ಭಾರತ ಅಥವಾ ವೆಸ್ಟ್ ಇಂಡೀಸ್ (ವಾಂಖೆಡೆ ಸ್ಟೇಡಿಯಂ, ಮುಂಬೈ)
  • ಮಾರ್ಚ್ 8, ಫೈನಲ್ ಪಂದ್ಯ-  ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್​.

 

Follow Us