T20 World Cup: ರನ್, ಶತಕ, ಸಿಕ್ಸರ್‌, ಜೊತೆಯಾಟ; ಟಿ20 ವಿಶ್ವಕಪ್​ನಲ್ಲಿ ದಾಖಲಾಗಿರುವ ವಿಶಿಷ್ಟ ದಾಖಲೆಗಳಿವು..!

| Updated By: ಪೃಥ್ವಿಶಂಕರ

Updated on: Oct 19, 2021 | 3:38 PM

T20 World Cup: ಟಿ 20 ವಿಶ್ವಕಪ್​ನಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. 2014 ಟಿ 20 ವಿಶ್ವಕಪ್‌ನಲ್ಲಿ ಅವರು 6 ಇನ್ನಿಂಗ್ಸ್‌ಗಳಲ್ಲಿ 319 ರನ್ ಗಳಿಸಿದ್ದರು.

T20 World Cup: ರನ್, ಶತಕ, ಸಿಕ್ಸರ್‌, ಜೊತೆಯಾಟ; ಟಿ20 ವಿಶ್ವಕಪ್​ನಲ್ಲಿ ದಾಖಲಾಗಿರುವ ವಿಶಿಷ್ಟ ದಾಖಲೆಗಳಿವು..!
ವಿರಾಟ್ ಕೊಹ್ಲಿ, ಕ್ರಿಸ್ ಗೇಲ್
Follow us on

ವಿಶ್ವ ಟಿ 20 ಕ್ರಿಕೆಟ್​ನಲ್ಲಿ ಹಲವು ವಿಶೇಷ ದಾಖಲೆಗಳನ್ನು ನಿರ್ಮಿಸಲಾಗಿದೆ. ವಿಶ್ವದ ಮೊದಲ ಟಿ 20 ಪಂದ್ಯವು 2004 ರಲ್ಲಿ ಆಕ್ಲೆಂಡ್‌ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೊದಲ ಸ್ನೇಹಪರ ಟಿ 20 ಪಂದ್ಯವಾಗಿತ್ತು. ಈ ಸ್ವರೂಪದ ಜನಪ್ರಿಯತೆಯು ಹೆಚ್ಚಾಗುತ್ತಿದ್ದಂತೆ, ಇದನ್ನು ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸೇರಿಸಲು ನಿರ್ಧರಿಸಲಾಯಿತು. ಇದು ಬಹಳಷ್ಟು ಜನರನ್ನು ಆಕರ್ಷಿಸಿತು. ಇಂತಹ ಟಿ 20 ಕ್ರಿಕೆಟ್ ಇತಿಹಾಸದಲ್ಲಿ ನಿರ್ಮಾಣಗೊಂಡ ಅದ್ಭುತ ದಾಖಲೆಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.

ಅತ್ಯಧಿಕ ರನ್: ಟಿ 20 ವಿಶ್ವಕಪ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಶ್ರೀಲಂಕಾದ ಮಹೇಲಾ ಜಯವರ್ಧನೆ ಅವರ ಹೆಸರಿನಲ್ಲಿದೆ. ಅವರು 31 ಇನಿಂಗ್ಸ್‌ಗಳಲ್ಲಿ 39.07 ಸರಾಸರಿಯಲ್ಲಿ 6 ಅರ್ಧಶತಕ ಮತ್ತು 1 ಶತಕದೊಂದಿಗೆ 1,016 ರನ್ ಗಳಿಸಿದ್ದಾರೆ. ಆದರೆ, ಟೀಂ ಇಂಡಿಯಾದ ವಿರಾಟ್ ಕೊಹ್ಲಿ ಮಾತ್ರ ಟಿ 20 ವಿಶ್ವಕಪ್​ನಲ್ಲಿ ಟಾಪ್ 5 ಪಟ್ಟಿಯಲ್ಲಿದ್ದಾರೆ. ಅವರು 16 ಪಂದ್ಯಗಳಲ್ಲಿ 86.33 ಸರಾಸರಿಯಲ್ಲಿ 777 ರನ್ ಗಳಿಸಿದ್ದಾರೆ.

ಅತ್ಯಧಿಕ ವೈಯಕ್ತಿಕ ಸ್ಕೋರ್: ಟಿ 20 ವಿಶ್ವಕಪ್​ನಲ್ಲಿ ಬ್ರೆಂಡನ್ ಮೆಕಲಮ್ ಅತ್ಯಧಿಕ ವೈಯಕ್ತಿಕ ಸ್ಕೋರ್ ಹೊಂದಿದ್ದಾರೆ. 2012 ರಲ್ಲಿ ಬಾಂಗ್ಲಾದೇಶದ ವಿರುದ್ಧ ಮೆಕಲಮ್ 58 ಎಸೆತಗಳಲ್ಲಿ 123 ರನ್ ಗಳಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ ಅವರು 11 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಬಾರಿಸಿದರು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ 59 ರನ್​ಗಳ ಜಯ ಸಾಧಿಸಿತು.

ಅತಿ ಹೆಚ್ಚು ಶತಕ: ವೆಸ್ಟ್ ಇಂಡೀಸ್ ಟಿ 20 ದಂತಕಥೆ ಕ್ರಿಸ್ ಗೇಲ್ ಟಿ 20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ಟಿ 20 ವಿಶ್ವಕಪ್‌ನಲ್ಲಿ ಗೇಲ್ ಎರಡು ಶತಕಗಳನ್ನು ಗಳಿಸಿದ್ದಾರೆ. ಶತಕಗಳ ಪಟ್ಟಿಯಲ್ಲಿ ಇತರ ದೇಶಗಳ ಆಟಗಾರರು ತಲಾ ಆರು ಶತಕಗಳನ್ನು ಹೊಂದಿದ್ದಾರೆ.

ವೇಗದ ಶತಕ: ಕ್ರಿಸ್ ಗೇಲ್ 2016 ರಲ್ಲಿ ಇಂಗ್ಲೆಂಡ್ ವಿರುದ್ಧ 48 ಎಸೆತಗಳಲ್ಲಿ ಶತಕ ಗಳಿಸಿದರು.

ಅತಿ ವೇಗದ ಅರ್ಧಶತಕ: 2007 ರ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಸಿಂಗ್ ಒಂದು ಓವರ್​ನಲ್ಲಿ 6 ಸಿಕ್ಸರ್ ಬಾರಿಸಿದರು. ಇದರೊಂದಿಗೆ ಯುವಿ ಕೇವಲ 12 ಎಸೆತಗಳಲ್ಲಿ ಅತಿ ವೇಗದ ಅರ್ಧಶತಕ ದಾಖಲಿಸಿದರು.

ಅತ್ಯಧಿಕ ಪಾಲುದಾರಿಕೆ: 2010 ರ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಜಯವರ್ದನೆ ಮತ್ತು ಸಂಗಕ್ಕಾರ ಎರಡನೇ ವಿಕೆಟ್​ಗೆ 166 ರನ್ ಗಳಿಸಿದರು. ಇದು ಟಿ 20 ವಿಶ್ವಕಪ್‌ನಲ್ಲಿ ಅತಿದೊಡ್ಡ ಪಾಲುದಾರಿಕೆ.

ಅತ್ಯಧಿಕ ಅರ್ಧ ಶತಕಗಳು: ಮ್ಯಾಥ್ಯೂ ಹೇಡನ್ ಮತ್ತು ವಿರಾಟ್ ಕೊಹ್ಲಿ 28 ಅರ್ಧ ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಟೂರ್ನಿಯಲ್ಲಿ ಅತ್ಯಧಿಕ ರನ್: ಟಿ 20 ವಿಶ್ವಕಪ್​ನಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. 2014 ಟಿ 20 ವಿಶ್ವಕಪ್‌ನಲ್ಲಿ ಅವರು 6 ಇನ್ನಿಂಗ್ಸ್‌ಗಳಲ್ಲಿ 319 ರನ್ ಗಳಿಸಿದ್ದರು.

ಅತ್ಯಧಿಕ ಸಿಕ್ಸರ್: ಕ್ರಿಸ್ ಗೇಲ್ ಟಿ 20 ವಿಶ್ವಕಪ್​ನಲ್ಲಿ 60 ಸಿಕ್ಸರ್ ಬಾರಿಸಿದರು.