Jasprit Bumrah: ಟಿ20 ವಿಶ್ವಕಪ್ನಲ್ಲಿ ಥೇಟ್ ಜಸ್ಪ್ರೀತ್ ಬುಮ್ರಾ ರೀತಿ ಬೌಲಿಂಗ್ ಮಾಡುತ್ತಿರುವ ಅಫ್ಘಾನ್ ಬೌಲರ್
ಅಫ್ಘಾನಿಸ್ತಾನ ತಂಡದ ಬೌಲರ್ ನವೀನ್ ಉಲ್ ಹಖ್ ಅವರ ಬೌಲಿಂಗ್ ಶೈಲಿ ಕೂಡ ಥೇಟ್ ಜಸ್ಪ್ರೀತ್ ಬುಮ್ರಾ ರೀತಿಯಲ್ಲೇ ಇದೆ. ಐಸಿಸಿ ಈ ಬಗ್ಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬುಮ್ರಾ ಮತ್ತು ನವೀನ್ ಅವರ ಬೌಲಿಂಗ್ ಆಕ್ಷನ್ನ ವಿಡಿಯೋ ಹಂಚಿಕೊಂಡಿದೆ.
ಟೀಮ್ ಇಂಡಿಯಾ (Team India) ಸ್ಟಾರ್ ವೇಗಿ, ಯಾರ್ಕರ್ ಕಿಂಗ್ ಎಂದೇ ಪ್ರಸಿದ್ಧಿ ಪಡೆದಿರುವ ಜಸ್ಪ್ರೀತ್ ಬುಮ್ರಾ (Jasprit Bumrah) ಎಷ್ಟು ಪ್ರಸಿದ್ಧಿಯೋ ಅವರ ಬೌಲಿಂಗ್ ಶೈಲಿ ಕೂಡ ಅಷ್ಟೇ ಫೇಮಸ್ ಆಗಿದೆ. ಈ ಹಿಂದೆ ಬುಮ್ರಾ ರೀತಿಯಲ್ಲಿ ಅನೇಕರು ಬೌಲಿಂಗ್ ಆಕ್ಷನ್ (Bumrah Bowling Action) ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಸದ್ಯ ಸಾಗುತ್ತಿರುವ ಟಿ20 ವಿಶ್ವಕಪ್ನಲ್ಲಿ ಕೂಡ ಥೇಟ್ ಬುಮ್ರಾ ಮಾದರಿಯಲ್ಲೇ ಬೌಲಿಂಗ್ ಮಾಡುವ ಬೌಲರ್ನ ವಿಡಿಯೋವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಹಂಚಿಕೊಂಡಿದೆ. ಇತ್ತೀಚೆಗಷ್ಟೆ ಮುಕ್ತಾಯಗೊಂಡ ಭಾರತ ಹಾಗೂ ಅಫ್ಘಾನಿಸ್ತಾನ (India vs Afghanistan) ನಡುವಣ ಪಂದ್ಯದಲ್ಲಿ ಈ ಘಟನೆ ನಡೆದಿದೆ.
ಅಫ್ಘಾನಿಸ್ತಾನ ತಂಡದ ಬೌಲರ್ ನವೀನ್ ಉಲ್ ಹಖ್ ಅವರ ಬೌಲಿಂಗ್ ಶೈಲಿ ಕೂಡ ಥೇಟ್ ಜಸ್ಪ್ರೀತ್ ಬುಮ್ರಾ ರೀತಿಯಲ್ಲೇ ಇದೆ. ಐಸಿಸಿ ಈ ಬಗ್ಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬುಮ್ರಾ ಮತ್ತು ನವೀನ್ ಅವರ ಬೌಲಿಂಗ್ ಆಕ್ಷನ್ನ ವಿಡಿಯೋ ಹಂಚಿಕೊಂಡಿದೆ.
View this post on Instagram
ಬುಮ್ರಾ ರೀತಿಯ ಬೌಲಿಂಗ್ ಆಕ್ಷನ್ ಇದ್ದರೂ ನವೀನ್ ಅವರು ಭಾರತ ವಿರುದ್ಧದ ಪಂದ್ಯದಲ್ಲಿ ದುಬಾರಿಯಾದರು. ನವೀನ್ 4 ಓವರ್ಗೆ ಬರೋಬ್ಬರಿ 59 ರನ್ ನೀಡಿದರು. ಈ ಪಂದ್ಯದಲ್ಲಿ ಬುಮ್ರಾ 4 ಓವರ್ಗೆ 25 ರನ್ ನೀಡಿದ್ದರಷ್ಟೆ.
ಅಫ್ಘಾನಿಸ್ತಾನ ವಿರುದ್ಧ ಗೆಲ್ಲುವ ಮೂಲಕ ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಭಾರತ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಡೆಗೂ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. ಆರಂಭಿಕರಾದ ರೋಹಿತ್ ಶರ್ಮ (74 ರನ್, 47 ಎಸೆತ, 8 ಬೌಂಡರಿ, 3 ಸಿಕ್ಸರ್) ಹಾಗೂ ಕೆಎಲ್ ರಾಹುಲ್ (69 ರನ್, 48 ಎಸೆತ, 6 ಬೌಂಡರಿ, 2 ಸಿಕ್ಸರ್) ಜೋಡಿಯ ಅಬ್ಬರದ ಬ್ಯಾಟಿಂಗ್ ಮತ್ತು 4 ವರ್ಷಗಳ ಬಳಿಕ ನಿಗದಿತ ಓವರ್‌ಗಳ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಆರ್. ಅಶ್ವಿನ್ (14ಕ್ಕೆ 2) ಸ್ಪಿನ್ ದಾಳಿಯಿಂದ ಭಾರತ ತಂಡ ಅಫ್ಘಾನಿಸ್ತಾನ ತಂಡವನ್ನು 66 ರನ್‌ಗಳಿಂದ ಮಣಿಸಿತು.
ಈ ಜಯದೊಂದಿಗೆ ಟೀಮ್ ಇಂಡಿಯಾದ ಸೆಮೀಸ್ ಆಸೆ ಜೀವಂತವಾಗಿ ಉಳಿಯಿತು. ಟೀಮ್ ಇಂಡಿಯಾ ಇಂದು ಸ್ಕಾಟ್ಲೆಂಡ್ ವಿರುದ್ಧ ಮತ್ತೊಂದು ಮಾಡು ಇಲ್ಲವೇ ಮಡಿ ಪಂದ್ಯವನ್ನಾಡಲಿದೆ.
(T20 World Cup ICC shared a split-screen video of Jasprit Bumrah and Naveen-ul-Haq in tandem)