ಟಿ-20 ವಿಶ್ವಕಪ್​ಗೆ ಟೀಮ್ ಇಂಡಿಯಾ ಸೇರಲಿದ್ದಾರೆ ಮೂವರು ಹೊಸ ಆಟಗಾರರು: ಯಾರು ಗೊತ್ತೇ?

| Updated By: Vinay Bhat

Updated on: Jul 31, 2021 | 9:59 AM

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಟಿ-20 ಸರಣಿ ಭಾರತದ ಕೊನೆಯ ಚುಟುಕು ಪಂದ್ಯವಾಗಿದೆ. ಈ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರು ಟಿ-20 ವಿಶ್ವಕಪ್​ಗೆ ಆಯ್ಕೆಯಾಗುವ ಸಾಧ್ಯತೆ ಇದೆ.

ಟಿ-20 ವಿಶ್ವಕಪ್​ಗೆ ಟೀಮ್ ಇಂಡಿಯಾ ಸೇರಲಿದ್ದಾರೆ ಮೂವರು ಹೊಸ ಆಟಗಾರರು: ಯಾರು ಗೊತ್ತೇ?
ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಸ್ಪಿನ್ನರ್​ ಆಗಿ ಯಜುವೇಂದ್ರ ಚಹಲ್ ತಂಡದಲ್ಲಿರಲಿದ್ದಾರೆ. ಇನ್ನು ವೇಗಿಗಳಾಗಿ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ (ಸಂಪೂರ್ಣ ಫಿಟ್ ಆಗಿದ್ದರೆ) ವೇಗದ ಬೌಲಿಂಗ್ ವಿಭಾಗದಲ್ಲಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
Follow us on

ಕ್ರಿಕೆಟ್ ಅಭಿಮಾನಿಗಳ ಕಿಚ್ಚು ಹೆಚ್ಚಿಸಲು ಸಾಲು ಸಾಲು ಟಿ-20 ಕ್ರಿಕೆಟ್ ಪಂದ್ಯಗಳು ಮತ್ತೆ ಬರುತ್ತಿದೆ. ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯು (T20 World Cup) ಅಕ್ಟೋಬರ್ 17ರಿಂದ ಯುಎಇನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಐಪಿಎಲ್‌ ಟೂರ್ನಿ ಶುರುವಾಗಲಿದೆ. ಐಪಿಎಲ್ (IPL 2021) ಫೈನಲ್‌ ಪಂದ್ಯ ಮುಗಿದ ಕೆಲವೇ ದಿನಗಳಲ್ಲಿ ವಿಶ್ವಕಪ್‌ ಆರಂಭಗೊಳ್ಳಲಿದೆ.

ಭಾರತದ ಆತಿಥ್ಯದಲ್ಲಿ ನಡೆಯಬೇಕಿದ್ದ ಐಸಿಸಿ ಟಿ-20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯನ್ನು ಕೊರೋನಾ ವೈರಸ್‌ ಕಾರಣ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ಗೆ ವರ್ಗಾಯಿಸಲಾಗಿದೆ. ಮುಖ್ಯವಾಗಿ ಇಂಡೊ-ಪಾಕ್ ಟಿ20 ಕ್ರಿಕೆಟ್ ಕದನ ಖಾತ್ರಿಯಾಗಿದ್ದು, ಗ್ರೂಪ್‌ 2ನಲ್ಲಿ ಎರಡೂ ತಂಡಗಳು ಸ್ಥಾನ ಪಡೆದಿವೆ. ಹೀಗಾಗಿ ಟಿ-20 ವಿಶ್ವಕಪ್​ಗೆ ಟೀಮ್ ಇಂಡಿಯಾ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಬೇಕಿದೆ.

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಟಿ-20 ಸರಣಿ ಭಾರತದ ಕೊನೆಯ ಚುಟುಕು ಪಂದ್ಯವಾಗಿದೆ. ಈ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರು ಟಿ-20 ವಿಶ್ವಕಪ್​ಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಹಾಗಾದ್ರೆ ಈ ಸರಣಿಯಲ್ಲಿ ಮೋಡಿ ಮಾಡಿ ಟಿ-20 ವಿಶ್ವಕಪ್​ಗೆ ಆಯ್ಕೆ ಆಗಬಹುದಾದ ಪ್ರಮುಖ 3 ಆಟಗಾರರು ಯಾರು ಎಂಬುದನ್ನು ನೋಡೋಣ.

ಪೃಥ್ವಿ ಶಾ: ಲಂಕಾ ವಿರುದ್ಧದ ಟಿ-20 ಸರಣಿಯಲ್ಲಿ ಪೃಥ್ವಿ ಶಾ ಆಡಿದ್ದು ಒಂದೇ ಪಂದ್ಯ, ಗಳಿಸಿದ್ದು 0 ರನ್. ಆದರೆ, ಏಕದಿನ ಸರಣಿಯಲ್ಲಿ ಇವರು ಥೇಟ್ ಟಿ-20 ಮಾದರಿಯಲ್ಲಿ ಬ್ಯಾಟ್ ಬೀಸಿದ್ದು ಮರೆಯುವಂತಿಲ್ಲ. 125.000 ಸ್ಟ್ರೈಕ್​ರೇಟ್​ನಲ್ಲಿ ಶಾ 105 ರನ್ ಗಳಿಸಿದ್ದರು. ಟಿ-20 ವಿಶ್ವಕಪ್​ನಲ್ಲಿ ಶಿಖರ್ ಧವನ್ ಬದಲು ಪೃಥ್ವಿ ಶಾ ಅವರು ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.

ಸೂರ್ಯಕುಮಾರ್ ಯಾದವ್: ಅನೇಕ ವರ್ಷಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದ ಸೂರ್ಯಕುಮಾರ್ ಯಾದವ್​ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕಾಗಿದೆ. ಸಿಕ್ಕ ಅವಕಾಶವನ್ನಂತು ಎರಡೂ ಕೈಗಳಿಂದ ಬಾಜಿಕೊಂಡರು. ಟಿ-20, ಏಕದಿನ ಎರಡೂ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಟಿ-20 ವಿಶ್ವಕಪ್​ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಯಾದವ್​ಗೆ ಸ್ಥಾನ ಖಚಿತ ಎಂದೇ ಹೇಳಬಹುದು.

ರಾಹುಲ್ ಚಹರ್: ಯುವ ಲೆಗ್ ಸ್ಪಿನ್ನರ್ ರಾಹುಲ್ ಚಹರ್ ಕೂಡ ತಾನೊಬ್ಬ ವಿಕೆಟ್ ಟೇಕಿಂಗ್ ಬೌಲರ್ ಎಂಬುದನ್ನು ಸಾಭೀತು ಮಾಡಿದ್ದಾರೆ. ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಪ್ರಮುಖ 3 ಬ್ಯಾಟ್ಸ್​ಮನ್​ಗಳನ್ನು ಔಟ್ ಮಾಡಿದ್ದ ಚಹರ್ ಟಿ-20 ಯಲ್ಲೂ 4 ವಿಕೆಟ್ ಕಿತ್ತರು. ಒಟ್ಟು 7 ವಿಕೆಟ್ ಪಡೆದು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನಿಡಿದ್ದರು. ಹೀಗಾಗಿ ಇವರುಕೂಡ ಟಿ-20 ವಿಶ್ವಕಪ್​ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

Tokyo Olympics: ಡಿಸ್ಕಸ್ ಥ್ರೋ ಫೈನಲ್ ಪ್ರವೇಶಿಸಿದ ಭಾರತದ ಕಮಲ್​ಪ್ರೀತ್: ಪ್ರೀ ಕ್ವಾರ್ಟರ್ಸ್​ನಲ್ಲಿ ಅತನು, ಅಮಿತ್​ಗೆ ಸೋಲು

Team India: 3 ಆಟಗಾರರನ್ನು ಲಂಕಾದಲ್ಲೇ ಬಿಟ್ಟು ತವರಿಗೆ ಹಿಂತಿರುಗಿದ ಟೀಮ್ ಇಂಡಿಯಾ

(T20 World Cup These 3 Indian players can make it to T20 World Cup squad after impressive performance vs Sri Lanka Series)