ಕಾಶ್ಮೀರ ಪ್ರೀಮಿಯರ್ ಲೀಗ್‌ನಲ್ಲಿ ಆಡದಂತೆ ಬಿಸಿಸಿಐ ನನಗೆ ಬೆದರಿಕೆ ಒಡ್ಡುತ್ತಿದೆ; ದಕ್ಷಿಣ ಆಫ್ರಿಕಾ ಕ್ರಿಕೆಟಿಗನ ಗಂಭೀರ ಆರೋಪ
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷಲ್ ಗಿಬ್ಸ್, ಬಿಸಿಸಿಐ ನನಗೆ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ. ಕಾಶ್ಮೀರ ಪ್ರೀಮಿಯರ್ ಲೀಗ್‌ನಲ್ಲಿ ಆಡುವುದನ್ನು ತಡೆಯಲು ಭಾರತೀಯ ಕ್ರಿಕೆಟ್ ಮಂಡಳಿ ಶತಪ್ರಯತ್ನ ಮಾಡುತ್ತಿದೆ ಎಂಬುದು ಅವರ ಆರೋಪವಾಗಿದೆ. ಈ ಹಿಂದೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಕೂಡ ಬಿಸಿಸಿಐ ವಿರುದ್ಧ ಇದೇ ರೀತಿಯ ಆರೋಪ ಮಾಡಿದ್ದರು. ಕೆಪಿಎಲ್ ಅಂದರೆ ಕಾಶ್ಮೀರ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಲು ಹೊರಟಿರುವ ಆ ದೇಶಗಳ ಕ್ರಿಕೆಟ್ ಮಂಡಳಿಗಳಿಗೆ ಬಿಸಿಸಿಐ ಎಚ್ಚರಿಕೆ ನೀಡುತ್ತಿದೆ ಎಂದು ಅವರು […]
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷಲ್ ಗಿಬ್ಸ್, ಬಿಸಿಸಿಐ ನನಗೆ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ. ಕಾಶ್ಮೀರ ಪ್ರೀಮಿಯರ್ ಲೀಗ್‌ನಲ್ಲಿ ಆಡುವುದನ್ನು ತಡೆಯಲು ಭಾರತೀಯ ಕ್ರಿಕೆಟ್ ಮಂಡಳಿ ಶತಪ್ರಯತ್ನ ಮಾಡುತ್ತಿದೆ ಎಂಬುದು ಅವರ ಆರೋಪವಾಗಿದೆ. ಈ ಹಿಂದೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಕೂಡ ಬಿಸಿಸಿಐ ವಿರುದ್ಧ ಇದೇ ರೀತಿಯ ಆರೋಪ ಮಾಡಿದ್ದರು. ಕೆಪಿಎಲ್ ಅಂದರೆ ಕಾಶ್ಮೀರ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಲು ಹೊರಟಿರುವ ಆ ದೇಶಗಳ ಕ್ರಿಕೆಟ್ ಮಂಡಳಿಗಳಿಗೆ ಬಿಸಿಸಿಐ ಎಚ್ಚರಿಕೆ ನೀಡುತ್ತಿದೆ ಎಂದು ಅವರು ಹೇಳಿದ್ದರು.
ಲತೀಫ್ ನಂತರ, ಈಗ ಗಿಬ್ಸ್ ಕೂಡ ಟ್ವೀಟ್ ಮೂಲಕ ಬಿಸಿಸಿಐ ಮೇಲೆ ಆರೋಪ ಹೊರಿಸಿದ್ದಾರೆ. ಪಾಕಿಸ್ತಾನದೊಂದಿಗಿನ ಕೆಟ್ಟ ರಾಜಕೀಯ ಸಮೀಕರಣಗಳನ್ನು ಉಲ್ಲೇಖಿಸಿ ಬಿಸಿಸಿಐ ನನ್ನನ್ನು ಕೆಪಿಎಲ್‌ನಲ್ಲಿ ಆಡಲು ಬಿಡುತ್ತಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಹಾಗೆಯೇ ಬಿಸಿಸಿಐ, ಭಾರತದಲ್ಲಿ ಯಾವುದೇ ಕ್ರಿಕೆಟ್ ಸಂಬಂಧಿತ ಕೆಲಸಕ್ಕೆ ನನಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ ಎಂಬ ಆರೋಪವನ್ನು ಹೊರಿಸಿದ್ದಾರೆ. ಹರ್ಷಲ್ ಗಿಬ್ಸ್, ಮಾಂಟಿ ಪನೇಸರ್, ತಿಲಕರತ್ನೆ ದಿಲ್ಶಾನ್ ಅವರಂತಹ ಆಟಗಾರರನ್ನು ಕಾಶ್ಮೀರ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗಿದೆ.
ಕೆಪಿಎಲ್ 6 ತಂಡಗಳ ಪಂದ್ಯಾವಳಿಯಾಗಿದೆ ಕಾಶ್ಮೀರ ಪ್ರೀಮಿಯರ್ ಲೀಗ್ ಪಾಕಿಸ್ತಾನದ ರಾಜಕಾರಣಿ ಶಹರ್ಯಾರ್ ಖಾನ್ ಅಫ್ರಿದಿ ಅವರ ಕನಸಿನ ಕೂಸು. ಈ ಪಂದ್ಯಾವಳಿಯಲ್ಲಿ 6 ತಂಡಗಳು ಆಡುತ್ತವೆ. ಓವರ್ಸೀಸ್ ವಾರಿಯರ್ಸ್, ಮುಜಾಫರಾಬಾದ್ ಟೈಗರ್ಸ್, ರಾವಲ್ಕೋಟ್ ಹಾಕ್ಸ್, ಬಾಗ್ ಸ್ಟಾಲಿಯನ್ಸ್, ಮಿರ್ಪುರ್ ರಾಯಲ್ಸ್ ಮತ್ತು ಕೊಟ್ಲಿ ಲಯನ್ಸ್. ಇಮಾದ್ ವಾಸಿಂ, ಮೊಹಮ್ಮದ್ ಹಫೀಜ್, ಶಾಹಿದ್ ಅಫ್ರಿದಿ, ಶಾದಬ್ ಖಾನ್, ಶೋಯೆಬ್ ಮಲಿಕ್ ಮತ್ತು ಕಮ್ರಾನ್ ಅಕ್ಮಲ್ ಈ 6 ತಂಡಗಳ ನಾಯಕರಾಗಿದ್ದಾರೆ.
ಪಂದ್ಯಾವಳಿಯಲ್ಲಿ, ಪ್ರತಿ ತಂಡವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) 5 ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ. ಪಿಒಕೆ ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದ ಇರುವ ಪ್ರದೇಶವಾಗಿದೆ. ಪಂದ್ಯಾವಳಿಯ ಎಲ್ಲಾ ಪಂದ್ಯಗಳನ್ನು ಮುಜಾಫರಾಬಾದ್‌ನ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಲಾಗುತ್ತದೆ.
ಇದನ್ನೂ ಓದಿ:ಐಪಿಎಲ್‌ಗೆ ಹೆದರಿ ಪಿಎಸ್‌ಎಲ್ -7ನೇ ಆವೃತ್ತಿಯ ವೇಳಾಪಟ್ಟಿ ಬದಲಾಯಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ