Sanju Samson: ಸಂಜು ಸ್ಯಾಮ್ಸನ್ ಸೋಮಾರಿ ಎಂದ ಕಳ್ಳಾಟವಾಡಿದ ಕ್ರಿಕೆಟಿಗ
Salman Butt: 2010 ರಲ್ಲಿ ಇಂಗ್ಲೆಂಡ್ ವಿರುದ್ದ ಟೆಸ್ಟ್ ಪಂದ್ಯದಲ್ಲಿ ಸಲ್ಮಾನ್ ಭಟ್ ಸ್ಪಾಟ್ ಫಿಕ್ಸಿಂಗ್ ಮಾಡಿದ್ದರು. ಕಳ್ಳಾಟ ಆಡಿದ್ದಕ್ಕಾಗಿ ಅವರನ್ನು 5 ವರ್ಷಗಳ ಕಾಲ ಕ್ರಿಕೆಟ್ನಿಂದ ಬ್ಯಾನ್ ಮಾಡಲಾಗಿತ್ತು.
ಭಾರತ-ಶ್ರೀಲಂಕಾ ನಡುವಣ ಸರಣಿ ಮುಗಿದರೂ ಚರ್ಚೆಗಳು ಇನ್ನೂ ನಿಂತಿಲ್ಲ. ಈ ಪ್ರವಾಸದಲ್ಲಿ ಭಾರತ ಏಕದಿನ ಸರಣಿ ವಶಪಡಿಸಿಕೊಂಡರೆ, ಶ್ರೀಲಂಕಾ ಟಿ20 ಸರಣಿ ಗೆದ್ದುಕೊಂಡಿತು. ಆದರೆ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ಪ್ರದರ್ಶನದ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಅದರಲ್ಲೂ ತಂಡದಲ್ಲಿ ಅನುಭವಿ ಆಟಗಾರ ಸಂಜು ಸ್ಯಾಮ್ಸನ್ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಕೂಡ ಸಂಜು ಸ್ಯಾಮ್ಸನ್ ಬಗ್ಗೆ ಬಾಯಿ ಹರಿಬಿಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಸಲ್ಮಾನ್ ಬಟ್, ನನ್ನ ಪ್ರಕಾರ ಸಂಜು ಸ್ಯಾಮ್ಸನ್ ಸೋಮಾರಿ ಬ್ಯಾಟ್ಸ್ಮನ್. ಆತನ ಬ್ಯಾಟಿಂಗ್ನಲ್ಲಿ ಹಲವು ನ್ಯೂನತೆಗಳಿವೆ. ಹಸರಂಗ ಎಸೆತವನ್ನೇ ಆತನಿಗೆ ಗುರುತಿಸಲು ಸಾಧ್ಯವಾಗುತ್ತಿಲ್ಲ. ಅಂತಹ ಬೌಲಿಂಗ್ ವೇಳೆ ಪಾದಗಳ ಚಲನೆ ಇರಬೇಕಾಗುತ್ತದೆ. ಆದರೆ ಸೋಮಾರಿಯಾದ ಕಾರಣ ಸ್ಯಾಮ್ಸನ್ ನಿಂತಲ್ಲೇ ಆಡಿದ್ದಾರೆ ಎಂದು ಬಟ್ ಟೀಕಿಸಿದ್ದಾರೆ.
ಬ್ಯಾಟಿಂಗ್ ವೇಳೆ ಆತ ಅಸಡ್ಡೆ ಹೊಂದಿರುವುದು ಕಂಡು ಬರುತ್ತದೆ. ಒಂದು ತಂಡದಲ್ಲಿ ಕೇವಲ 5 ಬ್ಯಾಟ್ಸ್‌ಮನ್‌ಗಳಿರುವಾಗ, ಅದರಲ್ಲಿ ಒಂದಿಬ್ಬರು ಔಟ್ ಆದಾಗ ಸ್ವಲ್ಪ ಎಚ್ಚರಿಕೆಯಿಂದ ಆಡಬೇಕು. ಆದರೆ ಅಂತಹ ಯಾವುದೇ ಮನೋಭಾವ ಸಂಜು ಸ್ಯಾಮ್ಸನ್ನಲ್ಲಿ ನಾನು ಕಾಣಲಿಲ್ಲ ಎಂದು ಸಲ್ಮಾನ್ ಬಟ್ ಹೇಳಿದರು.
ಸಂಜು ಸ್ಯಾಮ್ಸನ್ ಶ್ರೀಲಂಕಾ ವಿರುದ್ಧ 3 ಟಿ20 ಪಂದ್ಯಗಳಲ್ಲಿ ಕೇವಲ 34 ರನ್ ಬಾರಿಸಿದ್ದರು. ಅದರಲ್ಲೂ ಕೊನೆಯ ಟಿ20 ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು. ಇದೀಗ ಹಲವು ಮಾಜಿ ಕ್ರಿಕೆಟರುಗಳಿಂದ ಸ್ಯಾಮ್ಸನ್ ಪ್ರದರ್ಶನದ ಬಗ್ಗೆ ವಿಮರ್ಶೆಗಳು ಕೇಳಿ ಬರುತ್ತಿದೆ. ಅದರಲ್ಲೂ ಸ್ಯಾಮ್ಸನ್ಗೆ ಅನೇಕ ಅವಕಾಶ ನೀಡಲಾಗಿದ್ದು, ಇನ್ನದಾದರೂ ಇನ್ನಿತರ ಕ್ರಿಕೆಟಿಗರಿಗೆ ಚಾನ್ಸ್ ನೀಡುವುದು ಸೂಕ್ತ ಎಂಬ ಮಾತುಗಳು ಕೇಳಿ ಬಂದಿವೆ.
ಇದೀಗ ಪಾಕ್ ಕ್ರಿಕೆಟಿಗ ಸಲ್ಮಾನ್ ಬಟ್ ಕೂಡ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಶೈಲಿ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಬಟ್ ಅವರ ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಪಾಕ್ ಮಾಜಿ ಬ್ಯಾಟ್ಸ್ಮನ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 2010 ರಲ್ಲಿ ಇಂಗ್ಲೆಂಡ್ ವಿರುದ್ದ ಟೆಸ್ಟ್ ಪಂದ್ಯದಲ್ಲಿ ಸಲ್ಮಾನ್ ಭಟ್ ಸ್ಪಾಟ್ ಫಿಕ್ಸಿಂಗ್ ಮಾಡಿದ್ದರು. ಕಳ್ಳಾಟ ಆಡಿದ್ದಕ್ಕಾಗಿ ಅವರನ್ನು 5 ವರ್ಷಗಳ ಕಾಲ ಕ್ರಿಕೆಟ್ನಿಂದ ಬ್ಯಾನ್ ಮಾಡಲಾಗಿತ್ತು. ಇದೀಗ ಕಳ್ಳಾಟವಾಡಿದ ಕ್ರಿಕೆಟಿಗ ಇತರರಿಗೆ ಕ್ಲಾಸ್ ತೆಗೆಯುವುದು ಎಷ್ಟು ಸರಿ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕಡಿಮೆ ಬೆಲೆಯ ಪವರ್ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್ಟಾಪ್ನ್ನು ಚಾರ್ಜ್ ಮಾಡಬಹುದು
ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ
Published On - 10:13 pm, Sat, 31 July 21