IND vs SL: ಟಿ20 ವಿಶ್ವಕಪ್ ಎಫೆಕ್ಟ್; ಟೀಂ ಇಂಡಿಯಾ ಜೆರ್ಸಿಯಲ್ಲಿ ಮಹತ್ವದ ಬದಲಾವಣೆ; ವಿಡಿಯೋ ನೋಡಿ
IND vs SL: ವಿಶೇಷ ಜೆರ್ಸಿ ಧರಿಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರವೇಶಿಸಲಿದೆ. ವಾಸ್ತವವಾಗಿ, ಈ ಜೆರ್ಸಿಯಲ್ಲಿ ಎರಡು ಸ್ಟಾರ್‌ಗಳನ್ನು ಮುದ್ರಿಸಲಾಗಿದೆ. ಟೀಮ್ ಇಂಡಿಯಾದ ಜೆರ್ಸಿಯಲ್ಲಿರುವ ಈ ಎರಡು ಸ್ಟಾರ್‌ಗಳು ಟೀಂ ಇಂಡಿಯಾ ಎರಡು ಬಾರಿ ಟಿ20 ವಿಶ್ವ ಚಾಂಪಿಯನ್ ಆಗಿರುವುದನ್ನು ಸಂಕೇತಿಸುತ್ತದೆ. ಟಿ20 ವಿಶ್ವಕಪ್ 2024 ರ ಮೊದಲು, ಟೀಂ ಇಂಡಿಯಾದ ಜೆರ್ಸಿಯ ಮೇಲೆ ಕೇವಲ ಒಂದು ಸ್ಟಾರ್ ಮಾತ್ರ ಇತ್ತು.
ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿ ಜುಲೈ 27 ರಿಂದ ಆರಂಭವಾಗಲಿದೆ. ಈ ಸರಣಿಯೊಂದಿಗೆ ಟೀಂ ಇಂಡಿಯಾದ ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅಧಿಕಾರಾವಧಿಯೂ ಸಹ ಆರಂಭವಾಗಲಿದೆ. ಉಭಯ ತಂಡಗಳು ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲು ಸರ್ವ ತಯಾರಿ ಮಾಡಿಕೊಂಡಿವೆ. ಈ ನಡುವೆ ಶ್ರೀಲಂಕಾ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ಜೆರ್ಸಿಯಲ್ಲಿ ಮಹತ್ತರ ಬದಲಾವಣೆಯಾಗಿದೆ. 2024 ರ ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಆಗಿರುವ ಟೀಂ ಇಂಡಿಯಾದ ಜೆರ್ಸಿಯಲ್ಲಿ ಕೊಂಚ ಬದಲಾವಣೆಯಾಗಿದ್ದು, ಹೊಸ ಜೆರ್ಸಿಯೊಂದಿಗೆ ಮೈದಾನಕ್ಕಿಳಿಯಲಿದೆ.
ಟೀಂ ಇಂಡಿಯಾದ ವಿಶೇಷ ಜರ್ಸಿ
ವಿಶೇಷ ಜೆರ್ಸಿ ಧರಿಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರವೇಶಿಸಲಿದೆ. ವಾಸ್ತವವಾಗಿ, ಈ ಜೆರ್ಸಿಯಲ್ಲಿ ಎರಡು ಸ್ಟಾರ್‌ಗಳನ್ನು ಮುದ್ರಿಸಲಾಗಿದೆ. ಟೀಮ್ ಇಂಡಿಯಾದ ಜೆರ್ಸಿಯಲ್ಲಿರುವ ಈ ಎರಡು ಸ್ಟಾರ್‌ಗಳು ಟೀಂ ಇಂಡಿಯಾ ಎರಡು ಬಾರಿ ಟಿ20 ವಿಶ್ವ ಚಾಂಪಿಯನ್ ಆಗಿರುವುದನ್ನು ಸಂಕೇತಿಸುತ್ತದೆ. ಟಿ20 ವಿಶ್ವಕಪ್ 2024 ರ ಮೊದಲು, ಟೀಂ ಇಂಡಿಯಾದ ಜೆರ್ಸಿಯ ಮೇಲೆ ಕೇವಲ ಒಂದು ಸ್ಟಾರ್ ಮಾತ್ರ ಇತ್ತು.
WORLD CUP WINNER SIRAJ IN TEAM INDIA JERSEY WITH 2 STARS. 🔥 pic.twitter.com/qRyUkySbSp
— Johns. (@CricCrazyJohns) July 25, 2024
ಆದರೆ ಜೂನ್ 29 ರಂದು ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿತ್ತು. ಹೀಗಾಗಿ ತಂಡದ ಜರ್ಸಿಗೆ ಮತ್ತೊಂದು ಸ್ಟಾರ್ ಸೇರ್ಪಡೆಗೊಂಡಿದೆ. ಬೇಸರದ ವಿಷಯವೆಂದರೆ ಈ ಒಂದು ಸ್ಟಾರ್ ಸಿಗಲು ಪ್ರಮುಖ ಪಾತ್ರವಹಿಸಿದ್ದ ವಿರಾಟ್ ಮತ್ತು ರೋಹಿತ್ ಈ ಜರ್ಸಿಯನ್ನು ಧರಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಈ ಇಬ್ಬರೂ ಟಿ20 ಸ್ವರೂಪಕ್ಕೆ ವಿದಾಯ ಹೇಳಿದ್ದಾರೆ.
Lights 💡Camera 📸Headshots ✅#TeamIndia all set for the #SLvIND T20I series 🙌 pic.twitter.com/VW9w61WjU4
— BCCI (@BCCI) July 25, 2024
ಹೊಸ ನಾಯಕ, ಹೊಸ ಆರಂಭ
ರೋಹಿತ್ ಶರ್ಮಾ ನಿವೃತ್ತಿಯೊಂದಿಗೆ ಟೀಂ ಇಂಡಿಯಾದ ನಾಯಕನೂ ಬದಲಾಗಿದ್ದಾರೆ. ಇದೀಗ ಟೀಂ ಇಂಡಿಯಾದ ಕಮಾಂಡ್ ಸೂರ್ಯಕುಮಾರ್ ಯಾದವ್ ಕೈಯಲ್ಲಿದೆ. ಶುಭ್ಮನ್ ಗಿಲ್ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ. ಇತ್ತ ನಾಯಕತ್ವ ಸಿಗುವ ಆಸೆಯಲ್ಲಿದ್ದ ಹಾರ್ದಿಕ್ ಪಾಂಡ್ಯಗೆ ಉಪನಾಯಕತ್ವವೂ ಸಿಗದಂತ್ತಾಗಿದೆ.
ಭಾರತ-ಶ್ರೀಲಂಕಾ ಟಿ20, ಏಕದಿನ ಸರಣಿ ವೇಳಾಪಟ್ಟಿ
ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯ ಜುಲೈ 27 ರಂದು ನಡೆಯಲಿದೆ. ಎರಡನೇ ಟಿ20 ಪಂದ್ಯ ಜುಲೈ 28 ರಂದು ಮತ್ತು ಮೂರನೇ ಟಿ20 ಪಂದ್ಯ ಜುಲೈ 29 ರಂದು ನಡೆಯಲಿದೆ. ಎಲ್ಲಾ ಮೂರು ಪಂದ್ಯಗಳು ಪಲ್ಲೆಕೆಲೆಯಲ್ಲಿ ನಡೆಯಲಿವೆ. ಇದಾದ ಬಳಿಕ ಕೊಲಂಬೊದಲ್ಲಿ ಏಕದಿನ ಸರಣಿ ನಡೆಯಲಿದ್ದು, ಮೊದಲ ಪಂದ್ಯ ಆಗಸ್ಟ್ 2ರಿಂದ ನಡೆಯಲಿದೆ. ಎರಡನೇ ಏಕದಿನ ಪಂದ್ಯ ಆಗಸ್ಟ್ 4 ರಂದು ಮತ್ತು ಮೂರನೇ ಏಕದಿನ ಪಂದ್ಯ ಆಗಸ್ಟ್ 7 ರಂದು ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ