IND vs SL: ಲಂಕಾ ತಂಡಕ್ಕೆ ಎರಡೆರಡು ಆಘಾತ; ಸರಣಿಯಿಂದ ಹೊರಬಿದ್ದ ಮತ್ತೊಬ್ಬ ಸ್ಟಾರ್ ವೇಗಿ

IND vs SL: ಶ್ರೀಲಂಕಾ ತಂಡಕ್ಕೆ ಆಘಾತ ಎದುರಾಗಿದ್ದು, ಇಬ್ಬರು ಸ್ಟಾರ್ ವೇಗಿಗಳು ಇಂಜುರಿಯಿಂದಾಗಿ ಇಡೀ ಟಿ20 ಸರಣಿಯಿಂದಲೇ ಹೊರಬಿದ್ದಿದ್ದಾರೆ. ಈ ಮೊದಲು ವೇಗಿ ದುಶ್ಮಂತ ಚಮೀರಾ ಇಂಜುರಿಯಿಂದಾಗಿ ಸರಣಿಗೆ ಅಲಭ್ಯರಾಗಿದ್ದರು. ಇದೀಗ ಅವರ ಸಾಲಿಗೆ ಸೇರಿರುವ ಮತ್ತೊಬ್ಬ ವೇಗಿ ನುವಾನ್ ತುಷಾರ ಕೂಡ ಇಂಜುರಿಗೆ ತುತ್ತಾಗಿದ್ದು, ಸರಣಿಯಿಂದ ಹೊರಬಿದ್ದಿದ್ದಾರೆ.

IND vs SL: ಲಂಕಾ ತಂಡಕ್ಕೆ ಎರಡೆರಡು ಆಘಾತ; ಸರಣಿಯಿಂದ ಹೊರಬಿದ್ದ ಮತ್ತೊಬ್ಬ ಸ್ಟಾರ್ ವೇಗಿ
ನುವಾನ್ ತುಷಾರ
Follow us
ಪೃಥ್ವಿಶಂಕರ
|

Updated on:Jul 25, 2024 | 2:38 PM

ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯ ಆರಂಭಕ್ಕೆ ಇನ್ನು ಎರಡು ದಿನ ಮಾತ್ರ ಉಳಿದಿವೆ. ಉಭಯ ತಂಡಗಳ ನಡುವಿನ ಮೊದಲ ಟಿ20 ಪಂದ್ಯ ಜುಲೈ 27 ರಂದು ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಡೆಯಲಿದೆ. ಈ ಪಂದ್ಯಕ್ಕೆ ಎರಡೂ ತಂಡಗಳು ಅಂತಿಮ ಸಿದ್ದತೆಯಲ್ಲಿ ತೊಡಗಿವೆ. ಆದರೆ ಈ ನಡುವೆ ಶ್ರೀಲಂಕಾ ತಂಡಕ್ಕೆ ಆಘಾತ ಎದುರಾಗಿದ್ದು, ಇಬ್ಬರು ಸ್ಟಾರ್ ವೇಗಿಗಳು ಇಂಜುರಿಯಿಂದಾಗಿ ಇಡೀ ಟಿ20 ಸರಣಿಯಿಂದಲೇ ಹೊರಬಿದ್ದಿದ್ದಾರೆ. ಈ ಮೊದಲು ವೇಗಿ ದುಷ್ಮಂತ ಚಮೀರಾ ಇಂಜುರಿಯಿಂದಾಗಿ ಸರಣಿಗೆ ಅಲಭ್ಯರಾಗಿದ್ದರು. ಇದೀಗ ಅವರ ಸಾಲಿಗೆ ಸೇರಿರುವ ಮತ್ತೊಬ್ಬ ವೇಗಿ ನುವಾನ್ ತುಷಾರ ಕೂಡ ಇಂಜುರಿಗೆ ತುತ್ತಾಗಿದ್ದು, ಸರಣಿಯಿಂದ ಹೊರಬಿದ್ದಿದ್ದಾರೆ. ಇದು ಲಂಕಾ ತಂಡದ ಸಂಕಷ್ಟವನ್ನು ಹೆಚ್ಚಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ, ‘ತಂಡದ ವೇಗದ ಬೌಲರ್ ನುವಾನ್ ತುಷಾರ ಅಭ್ಯಾಸದ ವೇಳೆ ಎಡಗೈ ಬೆರಳಿನ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಅವರು ಬೌಲಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಗಾಯ ಗಂಭೀರವಾಗಿರುವ ಕಾರಣ ಅವರನ್ನು ಟಿ20 ಸರಣಿಯಿಂದ ಹೊರಗಿಡಲಾಗಿದ್ದು, ಇದರಿಂದಾಗಿ ಭಾರತ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಇದೀಗ ಅವರ ಬದಲಿ ಆಟಗಾರನಾಗಿ ವೇಗಿ ದಿಲ್ಶನ್ ಮಧುಶಂಕ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ’ ಎಂದಿದೆ.

ಚಮೀರಾ ಕೂಡ ಅಲಭ್ಯ

ತುಷಾರಗೂ ಮೊದಲು ತಂಡದ ಅನುಭವಿ ವೇಗಿ ದುಷ್ಮಂತ ಚಮೀರಾ ಅನಾರೋಗ್ಯದ ಕಾರಣದಿಂದಾಗಿ ಟಿ20 ಸರಣಿಯಿಂದ ಹೊರಗುಳಿದಿದ್ದರು. ಈ ಕಾರಣದಿಂದಾಗಿ ಟಿ20 ಸರಣಿಗೆ ದುಷ್ಮಂತ ಚಮೀರಾ ಬದಲಿಗೆ ಅಸಿತ ಫೆರ್ನಾಂಡೋ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.

ಟಿ20 ಸರಣಿ ವೇಳಾಪಟ್ಟಿ

  1. ಜುಲೈ 27, ಮೊದಲ ಟಿ20 ಪಂದ್ಯ
  2. ಜುಲೈ 28, ಎರಡನೇ ಟಿ20 ಪಂದ್ಯ
  3. ಜುಲೈ 30, ಮೂರನೇ ಟಿ20 ಪಂದ್ಯ

ಶ್ರೀಲಂಕಾ ನವೀಕೃತ ತಂಡ: ಚರಿತ್ ಅಸಲಂಕಾ (ನಾಯಕ), ಪಾತುಮ್ ನಿಸ್ಸಾಂಕ, ಕುಸಲ್ ಜನಿತ್ ಪೆರೇರಾ, ಅವಿಷ್ಕ ಫೆರ್ನಾಂಡೋ, ಕುಸಲ್ ಮೆಂಡಿಸ್, ದಿನೇಶ್ ಚಾಂಡಿಮಲ್, ಕಮಿಂದು ಮೆಂಡಿಸ್, ದಸುನ್ ಶನಕ, ವನಿಂದು ಹಸರಂಗ, ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ಚಾಮಿಂದು ವಿಕ್ರಮಸಿಂಗ, ಮಥೀಶ ಪತಿರಾನ, ದಿಲ್ಶನ್ ಮಧುಶಂಕ, ಅಸಿತ ಫೆರ್ನಾಂಡೋ, ಬಿನೂರ ಫೆರ್ನಾಂಡೋ.

ಟಿ20 ಸರಣಿಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಬ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:24 pm, Thu, 25 July 24

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ