IPL 2025: ಭಾರತೀಯ ಕೋಚ್​ಗಳತ್ತ ಮುಖ ಮಾಡಿದ ಐಪಿಎಲ್ ಫ್ರಾಂಚೈಸಿ

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಆರಂಭಕ್ಕೂ ಮುನ್ನವೇ ಕೆಲ ಫ್ರಾಂಚೈಸಿಗಳು ಹೊಸ ಕೋಚ್​ಗಳ ನೇಮಕಕ್ಕೆ ಮುಂದಾಗಿದೆ. ಈ ಮೂಲಕ ಮೆಗಾ ಹರಾಜಿಗೂ ಮುನ್ನ ಭರ್ಜರಿ ಪ್ಲ್ಯಾನ್ ರೂಪಿಸಲು ಯೋಜನೆ ಹಾಕಿಕೊಂಡಿದೆ. ಅದರಂತೆ ಮೆಗಾ ಹರಾಜಿಗೂ ಮುನ್ನ ಕೆಲ ಫ್ರಾಂಚೈಸಿಗಳ ವಿದೇಶಿ ಕೋಚ್​ಗಳಿಗೆ ಗೇಟ್ ಪಾಸ್ ಸಿಗುವುದು ಖಚಿತ ಎನ್ನಲಾಗುತ್ತಿದೆ.

IPL 2025: ಭಾರತೀಯ ಕೋಚ್​ಗಳತ್ತ ಮುಖ ಮಾಡಿದ ಐಪಿಎಲ್ ಫ್ರಾಂಚೈಸಿ
ಸಾಂದರ್ಭಿಕ ಚಿತ್ರ (ಯುವಿ-ದ್ರಾವಿಡ್)
Follow us
|

Updated on: Jul 25, 2024 | 11:39 AM

ಐಪಿಎಲ್ 2025ರ ಆರಂಭಕ್ಕೂ ಮುನ್ನ ಕೆಲ ತಂಡಗಳಲ್ಲಿ ಮಹತ್ವದ ಬದಲಾವಣೆ ಕಂಡು ಬರುವುದು ಖಚಿತವಾಗಿದೆ. ಅದರಲ್ಲೂ ಮುಖ್ಯವಾಗಿ ತಂಡಗಳ ಕೋಚ್​ಗಳು ಬದಲಾಗುವುದು ಕನ್ಫರ್ಮ್​. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಮುಖ್ಯ ಕೋಚ್ ಹುದ್ದೆಯಿಂದ ರಿಕಿ ಪಾಂಟಿಂಗ್ ಅವರನ್ನು ಕೆಳಗಿಳಿಸಿದೆ. ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಸಹ ಕೋಚ್ ಹುದ್ದೆಯಿಂದ ಟ್ರೆವರ್ ಬೇಲಿಸ್ ಅವರನ್ನು ವಜಾಗೊಳಿಸಲಿದೆ ಎಂದು ವರದಿಯಾಗಿದೆ. ಹಾಗೆಯೇ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ಕೋಚ್​ಗಳು ಕೂಡ ಬದಲಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಬದಲಾವಣೆ ಯಾಕೆ?

ಕೆಲ ಫ್ರಾಂಚೈಸಿಗಳು ವಿದೇಶಿ ಕೋಚ್​ಗಳನ್ನು ತೆಗೆದು ಹಾಕಲು ಮುಂದಾಗಿದೆ. ಅಲ್ಲದೆ ಆ ಸ್ಥಾನಕ್ಕೆ ಭಾರತೀಯ ಕೋಚ್​ಗಳ ನೇಮಕಕ್ಕೆ ಆಸಕ್ತಿ ಹೊಂದಿದೆ. ಇದಕ್ಕೆ ಮುಖ್ಯ ಕಾರಣ ಕೆಲ ತಂಡಗಳ ಯಶಸ್ಸು. ಐಪಿಎಲ್ 2022 ರಲ್ಲಿ ಚೊಚ್ಚಲ ಬಾರಿ ಕಾಣಿಸಿಕೊಂಡ ಗುಜರಾತ್ ಟೈಟಾನ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ವೇಳೆ ಗುಜರಾತ್ ಟೈಟಾನ್ಸ್ ತಂಡದ ಮುಖ್ಯ ಕೋಚ್ ಆಗಿದ್ದವರು ಟೀಮ್ ಇಂಡಿಯಾದ ಮಾಜಿ ಆಟಗಾರ ಆಶಿಶ್ ನೆಹ್ರಾ. ಇನ್ನು ನೆಹ್ರಾ ನೇತೃತ್ವದಲ್ಲೇ ಐಪಿಎಲ್ 2023 ರಲ್ಲೂ ಗುಜರಾತ್ ಟೈಟಾನ್ಸ್ ಫೈನಲ್​ಗೆ ಪ್ರವೇಶಿಸಿತ್ತು.

ಮತ್ತೊಂದೆಡೆ ಕಳೆದ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್. ಗೌತಮ್ ಗಂಭೀರ್-ಚಂದ್ರಕಾಂತ್ ಪಂಡಿತ್ ಜೋಡಿಯು ಕೆಕೆಆರ್ ತಂಡವನ್ನು 10 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು.

ಹೀಗಾಗಿಯೇ ಇದೀಗ ಐಪಿಎಲ್ ಫ್ರಾಂಚೈಸಿಗಳು ಭಾರತೀಯ ಕೋಚ್​ಗಳತ್ತ ಮುಖ ಮಾಡಿದ್ದಾರೆ. ಅದರಲ್ಲೂ ರಾಜಸ್ಥಾನ್ ರಾಯಲ್ಸ್ ಸೇರಿದಂತೆ ಕೆಲ ಫ್ರಾಂಚೈಸಿಗಳು ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ನೇಮಕಕ್ಕೆ ಆಸಕ್ತಿವಹಿಸಿದೆ ಎಂದು ವರದಿಯಾಗಿದೆ.

ಇನ್ನೊಂದೆಡೆ ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಶಿಶ್ ನೆಹ್ರಾಗೆ ಬೇರೊಂದು ಫ್ರಾಂಚೈಸಿಯಿಂದ ಬಿಗ್ ಆಫರ್ ಸಿಕ್ಕಿದ್ದು, ಹೀಗಾಗಿ ಅವರು ಜಿಟಿ ತಂಡ ತೊರೆಯಲಿದ್ದಾರೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಯುವರಾಜ್ ಸಿಂಗ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿಕೊಳ್ಳಲು ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ. ಹಾಗೆಯೇ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಕೂಡ ಭಾರತೀಯ ಕೋಚ್ ನೇಮಕಕ್ಕೆ ಆಸಕ್ತಿವಹಿಸಿದೆ.

ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಗುಡ್ ಬೈ?

ಅಂದರೆ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಕೆಲ ಫ್ರಾಂಚೈಸಿಗಳು ವಿದೇಶಿ ಕೋಚ್​ಗಳಿಗೆ ಗೇಟ್ ಪಾಸ್ ನೀಡುವುದು ಬಹುತೇಕ ಖಚಿತ ಎನ್ನಬಹುದು. ಅಲ್ಲದೆ ಈ ಸ್ಥಾನಗಳಲ್ಲಿ ಭಾರತೀಯ ಕೋಚ್​ಗಳು ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಧಮ್ಮಿದ್ದಿದ್ದರೆ ಸಿದ್ದರಾಮಯ್ಯ ಕೆಂಪಣ್ಣ ವರದಿ ಟೇಬಲ್ ಮಾಡುತ್ತಿದ್ದರು: ರವಿ
ಧಮ್ಮಿದ್ದಿದ್ದರೆ ಸಿದ್ದರಾಮಯ್ಯ ಕೆಂಪಣ್ಣ ವರದಿ ಟೇಬಲ್ ಮಾಡುತ್ತಿದ್ದರು: ರವಿ
ಹಿಂದೆ 2 ವರ್ಷ ಜೈಲಲ್ಲಿದ್ದ ನಾಗೇಂದ್ರಗೆ ಈಗ ಕೇವಲ 3 ತಿಂಗಳಲ್ಲಿ ಬೇಲ್: ಶಾಸಕ
ಹಿಂದೆ 2 ವರ್ಷ ಜೈಲಲ್ಲಿದ್ದ ನಾಗೇಂದ್ರಗೆ ಈಗ ಕೇವಲ 3 ತಿಂಗಳಲ್ಲಿ ಬೇಲ್: ಶಾಸಕ
ಬಿಜೆಪಿಯಲ್ಲಿದ್ದಾಗ ಒಳ್ಳೆಯವನಾಗಿದ್ದವನು ಕಾಂಗ್ರೆಸ್ ಸೇರಿ ಕೆಟ್ಟನೇ? ಶಾಸಕ
ಬಿಜೆಪಿಯಲ್ಲಿದ್ದಾಗ ಒಳ್ಳೆಯವನಾಗಿದ್ದವನು ಕಾಂಗ್ರೆಸ್ ಸೇರಿ ಕೆಟ್ಟನೇ? ಶಾಸಕ
ಸಿದ್ದರಾಮಯ್ಯ ಸರ್ಕಾರವೇ ರಾಜ್ಯದ ಮಾನ ಹರಾಜು ಹಾಕುತ್ತಿದೆ: ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರವೇ ರಾಜ್ಯದ ಮಾನ ಹರಾಜು ಹಾಕುತ್ತಿದೆ: ಕುಮಾರಸ್ವಾಮಿ